Popular Posts

ಜೀವನದಲ್ಲಿ ಸಂತೋಷದಿಂದರಲು ಪ್ರಯತ್ನಿಸಿ – ಜೈವಂತರಾವ್ 

ಭಾಲ್ಕಿ. ವಿದ್ಯಾರ್ಥಿಗಳ ಉನ್ನತವೇ ಶಿಕ್ಷಕರ ಶ್ರೇಯೋಭಿವೃದ್ಧಿಯಾಗಿದೆ. ಪ್ರೀತಿ ಇದ್ದಲ್ಲಿ ಉತ್ಸಾಹ ವಿರುತ್ತದೆ ಎಂದು ಸತ್ಯನಿಕೇತನ ಪ್ರೌಢ ಶಾಲೆಯ ನಿವೃತ ಶಿಕ್ಷಕ ಜೈವಂತರಾವ್ ಹೇಳಿದರು.

ಪಟ್ಟಣದ ವೃಂದಾವನ ಸಭಾಭವನದಲ್ಲಿ ಸತ್ಯನಿಕೆತನ ಪ್ರೌಢಶಾಲಾ 1978-79 ಸಾಲಿನ ವಿದ್ಯಾರ್ಥಿಗಳ ವತಿಯಿಂದ ಬುಧವಾರ ಆಯೋಜಿಸಿದ್ದ ಸ್ನೇಹಕೂಟದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸುಮಾರು 46 ವರ್ಷಗಳ ಹಿಂದೆ ಕಲಿತ ಶಾಲೆಯ ಮೇಲೆ ವಿಶ್ವಾಸ ವಿಟ್ಟು, ಅಂದಿನ ಎಲ್ಲಾ ವಿಧ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದು ನಿವೃತರಾಗಿದ್ದೀರಿ. ಎಲ್ಲರೂ ಸೇರಿಕೊಂಡು ನಮ್ಮ ಮೇಲೆ ಪ್ರೀತಿ ಇಟ್ಟು ಕಾರ್ಯಕ್ರಮ ಆಯೋಜಿಸಿದ್ದು ನಮಗೆ ಸಂತೋಷ ವೆನಿಸಿದೆ ಎಂದು ಹೇಳಿದರು. ಶಿಕ್ಷಕರಾಗಿ ಕಾರ್ಯ ನಿರವಹಿಸಿದ್ದ ಅಂದಿನ ಮುಖ್ಯ ಶಿಕ್ಷಕ ಸಾಯಿಮನ ಸಾಗರ, ಪೀ.ಕೆ.ತಿವಾರಿ, ವಾಗ್ದಾಳೆ ಸರ್, ವ್ಯವಸ್ಥಾಪಕ ರಾಮಚಂದ್ರ ತೂಗಾವಕರ್ ರವರು ತಮ್ಮ 85 ವರ್ಷ ಇಳಿ ವಯಸ್ಸಿನಲ್ಲಿಯೂ ಆಗಮಿಸಿ ತಮ್ಮ ಹಳೆಯ ವಿದ್ಯಾರ್ಥಿಗಳಿಗೆ ಆಶೀರ್ವದಿಸಿದರು. ಇದೇವೇಳೆ ಸುಮಾರು 35 ಹಳೆಯ ವಿದ್ಯಾರ್ಥಿಗಳು ಸಹ ಕುಟುಂಬ ಸಮೇತ ಆಗಮಿಸಿ ತಮ್ಮ ಗುರುಗಳಿಗೆ ಸನ್ಮಾನಿಸಿ ಗೌರವಿಸಿದರು. ಹಳೆಯ ಸ್ನೇಹಿತರೆಲ್ಲರೂ ಒಟ್ಟಿಗೆ ಸೇರಿ ಭಾವುಕರಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂತೋಷ ಬಿರಾದಾರ, ಪ್ರಾಥಮಿಕ ಶಾಲೆಯ ರವೀಂದ್ರ, ಅಶೋಕ ಭೋಸಲೆ, ಬಸವರಾಜ್ ಬಾಳುರೆ, ಶಿವಕುಮಾರ್ ಘಂಟೆ, ಸತೀಶ್ ನಾಯಿಕ, ಕಿಶನರಾವ ಜಾಧವ್, ರವಿ ಕುಲಕರ್ಣಿ, ಅನಿಲ ಬಿರಾದಾರ, ಪ್ರೇಮಲ ಉಪಸ್ಥಿತರಿದ್ದರು. ಅನಿಲ ಪಾಟೀಲ್ ದಂಪತಿಗಳು ಪಾಸಾಯದಾನ್ ಸಂಗೀತ ನಡೆಸಿದರು. ಬಸವರಾಜ್ ಸ್ವಾಗತಿಸಿದರು. ರವಿ ನಿರೂಪಿಸಿದರು. ಕಿಶನ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!