Popular Posts

ನಾಳೆ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಕಚೇರಿ ಉದ್ಘಾಟನೆ ಮತ್ತು ಸಮ್ಮೇಳನ ವೆಬ್‍ಸೈಟ್ ಅನಾವರಣ ಕಾರ್ಯಕ್ರಮ

ಬೀದರ, ಫೆಬ್ರವರಿ.21 (kaliyugad koogu):- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೀದರ ಜಿಲ್ಲಾ ಘಟಕದ ವತಿಯಿಂದ ಫೆಬ್ರವರಿ. 23 ರಂದು ಬೆಳಿಗ್ಗೆ 10 ಗಂಟೆಗೆ ಬೀದರನ ಪತ್ರಿಕಾ ಭವನದಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಕಚೇರಿ ಉದ್ಘಾಟನೆ ಮತ್ತು ಸಮ್ಮೇಳನ ವೆಬ್‍ಸ್ಶೆಟ್ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಮಾಡಲಿದ್ದಾರೆ. ಸಮ್ಮೇಳನದ ಕಿರು ಹೊತ್ತಿಗೆ ಬಿಡುಗಡೆ ಅರಣ್ಯ, ಜೀವಿಶಾಸû್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಮಾಡಲಿದ್ದಾರೆ. ಸಮ್ಮೇಳನ ವೆಬ್‍ಸೈಟ್ ಅನಾವರಣವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಮಾಡಲಿದ್ದಾರೆ.
ಉಪಸ್ಥಿತಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಅವರು ವಹಿಸಲಿದ್ದಾರೆ. ಅಧ್ಯಕ್ಷತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಚಿದ ತಗಡೂರು ವಹಿಸಲಿದ್ದಾರೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading