Popular Posts

ಪೋಸ್ಟಲ್ ಸಖಿ ಹುದ್ದೆಗೆ ಅರ್ಜಿ ಆಹ್ವಾನ

ಬೀದರ, ಆಗಸ್ಟ್ 13 (ಕಕ ವಾರ್ತೆ) : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ  (KSRLPS) ಹಾಗೂ ಭಾರತೀಯ ಅಂಚೆ ಇಲಾಖೆಯ ಜಂಟಿ ಸಹಯೋಗದಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ‘ಪೋಸ್ಟಲ್ ಸಖಿ’ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅಂಚೆ ಇಲಾಖೆಯ ‘ಪೋಸ್ಟಲ್ ಲೈಫ್ ಇನ್ಶೂರೆನ್ಸ್’ ಪಿಎಲ್‌ಐ, ಗ್ರಾಮೀಣ ಅಂಚೆ ಜೀವವಿಮೆ ಆರ್‌ಪಿಎಲ್‌ಐ ಸೇರಿದಂತೆ ವಿವಿಧ ಅಂಚೆ ಸೇವೆಗಳನ್ನು ಪ್ರತಿಯೊಂದು ಗ್ರಾಮದ ಮನೆ-ಮನೆಗೆ ತಲುಪಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು.

ಅರ್ಹತೆಗಳು ಸಂಸ್ಥೆಯ ಸದಸ್ಯತ್ವ ಸ್ವಸಹಾಯ ಸಂಘದ ಎಸ್‌ಹೆಚ್‌ಜಿ ಸಕ್ರಿಯ ಸದಸ್ಯೆಯಾಗಿರಬೇಕು., ಶೈಕ್ಷಣಿಕ ಅರ್ಹತೆ ಕನಿಷ್ಠ 10ನೇ ತರಗತಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು., ವಯೋಮಿತಿ 18 ರಿಂದ 50 ವರ್ಷಗಳ ಒಳಗಿರಬೇಕು. ಇತರ ಅರ್ಹತೆಗಳು, ಸ್ಮಾರ್ಟ್ಫೋನ್ ಬಳಸುವ ಜ್ಞಾನ ಹಾಗೂ ಸ್ಥಳೀಯ ಭಾಷಾ ಜ್ಞಾನ ಕಡ್ಡಾಯವಾಗಿರಬೇಕು. ನೇರ ಸಂದರ್ಶನವಿದ್ದು, ಬೀದರ ಅಂಚೆ ಅಧೀಕ್ಷಕರ ಕಚೇರಿ ಆಗಸ್ಟ್ 20 ರಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಿದೆ.

ಅಗತ್ಯ ದಾಖಲೆಗಳು ಆಸಕ್ತ ಸ್ವಸಹಾಯ ಸಂಘದ ಸದಸ್ಯರು ತಮ್ಮ ಫೋಟೋ ಆಧಾರ್ ಕಾರ್ಡ್, ಅಂಚೆ ಕಚೇರಿಯ ಉಳಿತಾಯ ಖಾತೆ ಪಾಸ್‌ಬುಕ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಝರಾಕ್ಸ್ ಪ್ರತಿ ಹಾಗೂ ಸ್ವಸಹಾಯ ಸಂಘದ ಗುರುತಿನ ಚೀಟಿಯೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿ/ಅಂಚೆ ಅಧೀಕ್ಷಕರ ಕಾರ್ಯಾಲಯ, ಬೀದರ್ ವಿಭಾಗ ಅಥವಾ ದೂ.ಸಂ.08482-225350, 08482-226286 ಅಥವಾ ಮೊ.ಸಂ.9480172221ಗೆ ಸಂಪರ್ಕಿಸಬಹು ಎಂದು ಬೀದರ ವಿಭಾಗದ ಅಂಚೆ ಅಧೀಕ್ಷಕರಾದ ವಿ.ಎಲ್.ಚಿತ್ತಕೋಟೆ ಅವರು ತಿಳಿಸಿದ್ದಾರೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading