Popular Posts

ಫೆ. 22ರಂದು ಕೆಎಸ್‌ಸಿಎ ರಾಯಚೂರು ವಲಯದಲ್ಲಿ ಸ್ಕೋರರ್ ಪ್ರವೇಶ ಪರೀಕ್ಷೆ

ಬೀದರ:-ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ರಾಯಚೂರು ವಲಯವು ಸ್ಕೋರರ್ ಆಗಲು ಬಯಸುವ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಲು ಮುಂದಾಗಿದೆ.

ಪ್ರವೇಶ ಶುಲ್ಕ ರೂ.200 ಜೊತೆಗೆ ಜಿಎಸ್‌ಟಿ ರೂ.36 ಸೇರಿ ಒಟ್ಟು ರೂ.236 ನಿಗದಿಪಡಿಸಲಾಗಿದೆ. ಶುಲ್ಕವನ್ನು ಕೆಎಸ್‌ಸಿಎ ರಾಯಚೂರು ವಲಯ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಅದರ ಪ್ರತಿಯನ್ನು ಅರ್ಜಿ ಪತ್ರದೊಂದಿಗೆ ಫೆಬ್ರವರಿ 20ರೊಳಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಅಭ್ಯರ್ಥಿಗಳು ವಯಸ್ಸು ಹಾಗೂ ವಿಳಾಸದ ದಾಖಲೆಗಳನ್ನು ಸಲ್ಲಿಸಬೇಕಿದ್ದು, ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ತರಬೇತಿ ಕೋರ್ಸ್ ಮತ್ತು ಅಂತಿಮ ಪರೀಕ್ಷೆಗೆ ಅರ್ಹರಾಗುತ್ತಾರೆ. ಸೆಪ್ಟೆಂಬರ್ 1, 1981 ಅಥವಾ ನಂತರ ಜನಿಸಿದವರು ಅರ್ಜಿ ಸಲ್ಲಿಸಲು ಅರ್ಹರು.

ಪ್ರವೇಶ ಪರೀಕ್ಷೆ ಫೆಬ್ರವರಿ 22 ಭಾನುವಾರ ರಾಯಚೂರಿನಲ್ಲಿ ನಡೆಯಲಿದ್ದು, ಇದು ಮೂಲ ಸ್ಕೋರಿಂಗ್ ಜ್ಞಾನಕ್ಕೆ ಸಂಬAಧಿಸಿದ ಲಿಖಿತ ಪರೀಕ್ಷೆಯಾಗಿರುತ್ತದೆ.

ಅಂತಿಮ ಹಂತದ ಕೋರ್ಸ್ ಶುಲ್ಕ ರೂ.2000 ಜೊತೆಗೆ ಜಿಎಸ್‌ಟಿ ರೂ.360 ಸೇರಿ ಒಟ್ಟು ರೂ.2360 ಆಗಿರುತ್ತದೆ. ಕೋರ್ಸ್ ಮತ್ತು ಅಂತಿಮ ಪರೀಕ್ಷೆಯ ದಿನಾಂಕಗಳನ್ನು ಪ್ರವೇಶ ಪರೀಕ್ಷೆಯ ನಂತರ ಪ್ರಕಟಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅರ್ಜಿ ಪತ್ರವನ್ನು ಕೆಎಸ್‌ಸಿಎ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿ, ಇಮೇಲ್ ಮೂಲಕ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ ರಾಯಚೂರು ವಲಯ ಕಚೇರಿ ಮೊಬೈಲ್ ಸಂಖ್ಯೆ 8277695862 ಅಥವಾ 6362630931 ಅನ್ನು ಸಂಪರ್ಕಿಸಬಹುದು ಎಂದು ಕೆಎಸ್‌ಸಿಎ ರಾಯಚೂರು ವಲಯದ ಸಂಚಾಲಕರಾದ ಕುಶಾಲ್ ಪಾಟೀಲ್ ಗಾದಗಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!