Popular Posts

ಬದುಕಿಗೆ ಶರಣರ ಭಕ್ತಿಯೇ ಸರ್ವಶ್ರೇಷ್ಠ: ಸಿದ್ರಾಮಪ್ಪ ಕಪಲಾಪೂರೆ

ಬೀದರ್: ಜೀವನದಲ್ಲಿ ಎಷ್ಟೇ ಗಳಿಕೆ ಮಾಡಿದರೂ ಮನುಷ್ಯನ ಅತೃಪ್ತಿ ದೂರವಾಗುತ್ತಿಲ್ಲ. ದೇವರು ಹಾಗೂ ಶರಣರನ್ನು ಮರೆಯುತ್ತಿರುವ ಮನುಷ್ಯ ಸ್ವಾರ್ಥ, ವಂಚನೆ ಮತ್ತು ಮೋಸದ ಹಾದಿಯಲ್ಲಿ ಸಾಗುತ್ತಿರುವುದು ವಿಷಾದನೀಯ ಎಂದು ಪೂಜ್ಯ ಸಿದ್ರಾಮಪ್ಪ ಕಪಲಾಪೂರೆ ಹೇಳಿದರು.

ನೌಬಾದ್‌ನ ಬಸವ ಮಂಟಪದಲ್ಲಿ ಶ್ರಾವಣ ಮಾಸದ ಮೊದಲ ದಿನದ ಅಂಗವಾಗಿ ಆಯೋಜಿಸಿದ್ದ ಪ್ರವಚನ ಮಾಲಿಕೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶರಣರ ವಚನಗಳನ್ನು ನಿರಂತರವಾಗಿ ಪಠಿಸಿ, ಅವುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಪವಿತ್ರ ಹಾಗೂ ಸಾರ್ಥಕವಾಗುತ್ತದೆ. ಶರಣರ ತತ್ವ, ಆದರ್ಶ ಮತ್ತು ಭಕ್ತಿಯ ಮಾರ್ಗವೇ ಉತ್ತಮ ಜೀವನಕ್ಕೆ ದಾರಿದೀಪವಾಗಿದ್ದು, ಆದ್ದರಿಂದ ಬದುಕಿಗೆ ಶರಣರ ಭಕ್ತಿಯೇ ಸರ್ವಶ್ರೇಷ್ಠ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾದ ಡಾ. ಎಂ.ಜಿ. ದೇಶಪಾಂಡೆ ಹಾಗೂ ಆರ್.ಎಸ್. ಬಿರಾದರ್ ಅವರು ಶರಣರ ಜೀವನ, ವಚನಗಳು ಮತ್ತು ಅವುಗಳ ಸಾಮಾಜಿಕ ಸಂದೇಶ ಕುರಿತು ವಿಚಾರ ಮಂಡಿಸಿದರು. ಮಹಾನಗರ ಪಾಲಿಕೆ ಸದಸ್ಯೆ ಮಹಾದೇವಿ ಅವರು ಶರಣರ ವಚನಗಳ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಉಮಾದೇವಿ ಸ್ವಾಗತಿಸಿದರು. ಜಗದೇವಿ ನಿರೂಪಿಸಿದರು. ಶ್ರೀ ಓಂಕಾರ್ ವಂದಿಸಿದರು.

ಸುರೇಶ ಸ್ವಾಮಿ, ಕಾಳಮ್ಮ ಪಾಂಚಾಳ, ಲಲಿತಾ ಹಾರ್ಕೂಡೆ, ಮಹಾದೇವಿ ಬಸವರಾಜ್, ರಾಜೇಶ್ವರಿ ಹುಮ್ನಾಬಾದ್, ಕೋಮಲ ರವಿ ಧೂಳೆ, ಉಮ್ರಾವತಿ, ಶರಣಪ್ಪ ಬಿರಾದರ್, ಅನಿತಾ ಕುಂಬಾರ, ಶ್ರೀದೇವಿ ದುರ್ಗಾ ಸೇರಿದಂತೆ ಹಲವಾರು ಮಹಿಳೆಯರು ಹಾಗೂ ಪುರುಷರು ಪಾಲ್ಗೊಂಡಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading