Popular Posts

ಬೀದರನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಶ್ರೀ ಸಂತ ಸೇವಾಲಾಲ ಜಯಂತಿ ಆಚರಣೆ

ಬೀದರ, ಫೆಬ್ರವರಿ.17 :- ಕೆಲಸ ಮಾಡದಿದ್ದರೆ ತಿನ್ನಲು ಸಿಗುವುದಿಲ್ಲ ಎಂಬುದು ಬಂಜಾರ ಸಮುದಾಯದ ಅಚ್ಚು ಮೆಚ್ಚಿನ ಮಹಾನ ಸಂತರಾದ ಶ್ರೀ ಸೇವಾಲಾಲರ ಪ್ರಮುಖ ಧೈಯ ವಾಕ್ಯವಾಗಿತ್ತು ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ತಿಳಿಸಿದರು.
ಅವರು ಇತ್ತೀಚಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟನ ಅಧೀನದಲ್ಲಿ ಬರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ರಾಷ್ಟಿçÃಯ ಸೇವಾ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಂತ ಸೇವಾಲಾಲ ಅವರ 287ನೇ ಜಯಂತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀ ಸಂತ ಸೇವಾಲಾಲರÀ ಹೆಸರಿನಲ್ಲಿಯೇ ಸೇವೆ ಎಂದು ಇದ್ದು, ಅವರು ಜನರ ಸೇವೆಯಲ್ಲಿ ಸಾಕಷ್ಟು ಮಹಾನ್ ಕಾರ್ಯಗಳನ್ನು ಮಾಡುತ್ತಾ ಸಮಾಜದಲ್ಲಿ ಮಾನವೀಯತೆಯ ಮೌಲ್ಯಗಳನ್ನು ಸಾಮಾನ್ಯ ಜನರಿಗೆ ಅರಿವು ಮೂಡಿಸಿದರು. ಧರ್ಮ ಮತ್ತು ನೀತಿ ಒಂದೇ ಆಗಿರಬೇಕು, ಹಾಗೆಯೇ ಧರ್ಮಗಳ ಮಧ್ಯ ಸಮಾನತೆ ಸಾರಿದರು. ಬಡವರಿಗೆ ದಾನ ಮಾಡಿ ಎಂದು ನುಡಿಯುತ್ತಿದ್ದರು. ಪೂಜ್ಯರು “ಶಿಕ್ಷಣ ಕಲಿಯಿರಿ, ಕಲಿತು ಕಲಿಸಿರಿ” ಕಲಿತ ಎಲ್ಲರನ್ನು ಒಗ್ಗೂಡಿಸಿ ಮುಂದೆ ಸಾಗಿರಿ ಎನ್ನುವ ಸೇವಾಲಾಲರ ಈ ಮಾತುಗಳನ್ನು ಹಿಂದುಳಿದಿರುವ ಎಲ್ಲಾ ಸಮುದಾಯಗಳು ಅಕ್ಷರಶ: ಅನುಸರಿಸಬೇಕಾಗಿದೆ. ಸೇವಾಲಾಲ್‌ರು ಸತ್ತ ಮನೆಯವರಿಗೆ ಆತ್ಮಸ್ಥೆöÊರ್ಯ ತುಂಬುತ್ತಿದ್ದರು. ಪೂಜ್ಯರು ಕೇವಲ ಬಂಜಾರ ಸಮುದಾಯಕ್ಕೆ ಮಾತ್ರ ಸೇವೆ ಮಾಡದೆ ಇತರ ಸಮುದಾಯಕ್ಕೂ ಸೇವೆ ಸಲ್ಲಿಸುತ್ತಾ ಸೇವಕರಾಗಿದ್ದರು. ದೇಶದ ಮಹಾನ್ ಪುರುಷರ, ಸಂತರ ಜನ್ಮ ದಿನಾಚರಣೆಯನ್ನು ಕೇವಲ ಆಡಂಬರಕ್ಕಾಗಿ ಆಚರಿಸದೇ ಅವರ ತತ್ವಗಳನ್ನು ಎಲ್ಲರೂ ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮಕೊಡುಗೆ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ.ರಮೇಶ ನಾಯಕ್, ಡಾ.ಎಸ್.ಎಮ್.ಪ್ರಸನ್ನ, ಡಾ.ಅರವಿಂದಕುಮಾರ, ಆಂಜನೇಯ, ಡಾ.ರಾಜಕುಮಾರ ಎಮ್. ಡಾ.ರಮೇಶ ನಾಯ್ಕ ಸೇರಿದಂತೆ ಬೋಧಕ, ಬೋಧಕೇತರ ಸಇಬ್ಬಂದಿಗಳು, ವಿದ್ಯಾರ್ಥಿಗಳು, ಕಾರ್ಮಿಕರು ಭಾಗವಹಿಸಿದ್ದರು.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading