Popular Posts

ಬೀದರ್ ಜಿಲ್ಲೆಯ ವಿವಿಧ ಮಠಗಳಿಗೆ ಸರ್ಕಾರದ ದೇಣಿಗೆ ವಿತರಿಸಿದ ಈಶ್ವರ ಖಂಡ್ರೆ

ಭಾಲ್ಕಿ, ಏ.10: ಬೀದರ್ ಜಿಲ್ಲೆಯ ಮಠಮಾನ್ಯಗಳು ಧಾರ್ಮಿಕ, ಆಧ್ಯಾತ್ಮಿಕ ಪ್ರಸಾರ, ಪ್ರಚಾರದ ಜೊತೆಗೆ ಸಮಾಜದಲ್ಲಿ ಸ್ವಾಸ್ಥ್ಯ ಮೂಡಿಸಲು ಶ್ರಮಿಸುತ್ತಿವೆ ಎಂದು ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಮೆಹಕರ್ ವಿಶ್ವಶಾಂತಿ ಟ್ರಸ್ಟ್, ತಡೋಳ, ಹಾರಕೋಡ ಶ್ರೀ ಚನ್ನಬಸವೇಶ್ವರ ಸಂಸ್ಥಾನ, ದೇಗಲಮಾಡಿ ಬಸವಲಿಂಗ ಅವಧೂತ ಆಶ್ರಮ, ಹುಡುಗಿ ಹಿರೇಮಠ ಟ್ರಸ್ಟ್, ಬೆಲ್ದಾಳೆಯ ಶರಣ ತತ್ವ ಪ್ರಸಾರ ಮತ್ತು ಗ್ರಾಮೀಣಾಭಿವು.ದ್ಧಿ ಸೇವಾ ಸಂಸ್ಥೆ ಸೇರಿದಂತೆ ಸುಮಾರು 28 ಮಠಗಳಿಗೆ ರಾಜ್ಯ ಸರ್ಕಾರದಿಂದ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರಾಗಿರುವ ಮೊದಲ ಕಂತಿನ ಚೆಕ್ ವಿತರಿಸಿ ಅವರು ಮಾತನಾಡಿದರು.
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಪ್ರತಿಪಾದಿಸಿದ ರೇಣುಕಾದಿ ಆಚಾರ್ಯರು, ದಯವೇ ಧರ್ಮದ ಮೂಲವಯ್ಯ ಎಂದ ಬಸವಾದಿ ಶರಣು ಈ ನಾಡಿಗೆ ಭವ್ಯ ಪರಂಪರೆಯನ್ನು ಕಟ್ಟಿಕೊಟ್ಟಿದ್ದಾರೆ. ಆ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ಜೊತೆಗೆ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಿರುವ ಮಠಗಳಿಗೆ ಸರ್ಕಾರ ನೆರವು ನೀಡುತ್ತಿದ್ದು, ಅದರ ಸದುಪಯೋಗವಾಗಬೇಕು ಎಂದರು.
ಇಂದು ಯುವಜನರು ದುಶ್ಚಟ ದುರ್ಗುಣಗಳ ದಾಸರಾಗುತ್ತಿದ್ದಾರೆ, ಮಾದಕದ್ರವ್ಯದ ದುರ್ವ್ಯಸನಕ್ಕೆ ಈಡಾಗುತ್ತಿದ್ದಾರೆ. ಮಠಾಧಿಪತಿಗಳು ಯುವಜನರನ್ನು ಇಂತಹ ವ್ಯಸನಗಳಿಂದ ಮುಕ್ತಗೊಳಿಸಿ ಸತ್ಪ್ರಜೆಗಳನ್ನಾಗಿ ರೂಪಾಸಲು ಶ್ರಮಿಸಬೇಕು ಎಂದರು.
ಎಲ್ಲ ಧರ್ಮಗಳ ಸಾರವೂ ದಯೆ ಆಗಿದೆ. ಬಸವಾದಿ ಶರಣರೂ ಇದನ್ನೇ ಪ್ರತಿಪಾದಿಸಿದ್ದಾರೆ. ಸಮಾಜವನ್ನು ಧರ್ಮ, ಜಾತಿಯ ಹೆಸರಲ್ಲಿ ಒಡೆಯಲು ಬಿಡದೆ, ಸರ್ವರೂ ಸಹಬಾಳ್ವೆಯಿಂದ ಸೋದರರಂತೆ ಬಾಳಲು ಮಠಾಧಿಪತಿಗಳು ಮಾರ್ಗದರ್ಶನ ಮಾಡಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.
ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೆ ಮಠ ಮಾನ್ಯಗಳಿಗೆ ರಾಜಾಶ್ರಯ ನೀಡಲಾಗುತ್ತಿತ್ತು. ಆದರೆ ಇಂದು ಸರ್ಕಾರಗಳು ಮಠಗಳ ಉತ್ತಮ ಕಾರ್ಯ ಗುರುತಿಸಿ ಧನ ಸಹಾಯ ಮಾಡುವ ಕಾರ್ಯ ಮಾಡುತ್ತಿವೆ. ಸರ್ಕಾರ ನೀಡುವ ಹಣದಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಈಶ್ವರ ಬಿ ಖಂಡ್ರೆ ಅವರನ್ನು ಬೀದರ್ ಜಿಲ್ಲೆಯ ಮಠಾಧೀಶರು ಸನ್ಮಾನಿಸಿ, ಆಶೀರ್ವದಿಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading