1
1

ಬೀದರ್: ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿಗೊಳಗಾದ ನಗರದ ಓಲ್ಡ್ಸಿಟಿಯ ಭೀಮನಗರದ ರವೀಂದ್ರ ಅವರಿಗೆ ಶಾಸಕ ರಹೀಂಖಾನ್ ಮಾನವೀಯ ನೆಲೆಯಲ್ಲಿ ವೈಯಕ್ತಿಕವಾಗಿ ರೂ. 50 ಸಾವಿರ ನೆರವು ಒದಗಿಸಿದ್ದಾರೆ.
ಭಾನುವಾರ ಸಂತ್ರಸ್ತರ ಮನೆಗೆ ಭೇಟಿ ಕೊಟ್ಟು, ಸಹಾಯ ಧನ ನೀಡಿ, ಧೈರ್ಯ ತುಂಬಿದರು. ರಾಜ್ಯ ಸರ್ಕಾರದಿಂದ ಸಾಧ್ಯವಾದ ನೆರವು ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕಂದಾಯ ಇಲಾಖೆ, ಮಹಾನಗರ ಪಾಲಿಕೆ, ಜೆಸ್ಕಾಂ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.
Subscribe to get the latest posts sent to your email.