1
1

ಬೀದರ್: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಗೊಂಡ ಪರ ಸಂಘಟನೆಗಳ ಒಕ್ಕೂಟದಿಂದ ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತಿ ನಿಮಿತ್ತ ಈಚೆಗೆ ಆಯೋಜಿಸಿದ್ದ ಯುವ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪರಾಕ್ರಮಿ, ದೇಶ ಭಕ್ತರಾಗಿದ್ದ ರಾಯಣ್ಣ ಇಡೀ ದೇಶದ ಆಸ್ತಿ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಮಾತನಾಡಿ, ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೊರಾಡಿದ್ದರು. ಇಂದಿನ ಯುವಕರು ಮಾದಕ ವಸ್ತುಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.
ರಾಯಣ್ಣ ಅವರ ತತ್ವ, ಆದರ್ಶಗಳನ್ನು ಯುವಕರು ಪಾಲಿಸಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದ ಅಂಗವಾಗಿ ಯುವ ಜಾಗೃತಿ ಸಮಾವೇಶ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗೊಂಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ಚಿಮಕೋಡೆ ಮಾತನಾಡಿ, ಒಕ್ಕೂಟವು ಆರು ವರ್ಷಗಳಿಂದ ಗೊಂಡ ಸಮಾಜದ ಹಿತ ರಕ್ಷಣೆಗೆ ಶ್ರಮಿಸುತ್ತಿದೆ. ಸಮಾಜಕ್ಕೆ ಅನ್ಯಾಯವಾದಾಗ, ಪ್ರತಿಭಟಿಸಿದೆ. ಒಳ್ಳೆಯ ಕೆಲಸವನ್ನು ಬೆಂಬಲಿಸುತ್ತ ಬಂದಿದೆ. ಯುವಕರೇ ದೇಶದ ಸಂಪತ್ತು ಆಗಿರುವ ಕಾರಣ ಅವರಿಗೆ ಸರಿಯಾದ ಮಾರ್ಗ ತೋರಲು ಈ ಬಾರಿ ಯುವ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ನ ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಬಾಲಾಜಿ ಅಮರವಾಡಿ, ಸಾಹಿತಿ ಬಾಲಾಜಿ ಕುಂಬಾರ್ ಹಾಗೂ ಟೀಮ್ ಯುವಾದ ವಿನಯ್ ಮಾಳಗೆ ಅವರು ಸಂವಾದ ನಡೆಸಿಕೊಟ್ಟರು.
ಮುಖಂಡರಾದ ಬಾಬುರಾವ್ ಮಲ್ಕಾಪುರ, ಬಸವರಾಜ ಮಾಳಗೆ, ಮಲ್ಲಿಕಾರ್ಜುನ ಬಿರಾದಾರ(ಪರಿಹಾರ), ಶಕುಂತಲಾ ಬೆಲ್ದಾಳೆ, ಆನಂದ ಕಾಶೆಂಪುರ, ಎಂ.ಎಸ್. ಕಟಗಿ, ಬಾಬುರಾವ್ ಲದ್ದೆ, ಭೀಮಸಿಂಗ್, ಇಂದುಮತಿ ಚಿದ್ರಿ, ಅನಿಲಕುಮಾರ ಬೆಲ್ದಾರ್, ಪ್ರದೀಪ್ ಜಂಜೀರೆ, ದೇವೇಂದ್ರ ಸೋನಿ, ಪಂಡಿತ ಚಿಮಕೋಡ್, ರಾಮ ಚಾಂದೋರಿ, ಸಂಗಪ್ಪ ಚಿದ್ರಿ, ಒಕ್ಕೂಟದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಕುಶಾಲ್ ಹಾಸಗೊಂಡ, ಕಾರ್ಯದರ್ಶಿ ಪಂಡಿತ ಹಾವಗೊಂಡ, ಗುಂಡಪ್ಪ ಚಾಂಬೋಳ್ ಇದ್ದರು.
ನಾಗೇಶ ಜಾನಕನೋರ ನಿರೂಪಿಸಿದರು. ಮಾಣಿಕಪ್ಪ ಬರಿದಾಬಾದ್ ಸ್ವಾಗತಿಸಿದರು. ಸಿದ್ದು ಗಾದಗಿ ವಂದಿಸಿದರು.
Subscribe to get the latest posts sent to your email.