Popular Posts

ರೂಪ ಅಲಂಕಾರಗಳ ಚಕ್ರವರ್ತಿ ಕುಮಾರವ್ಯಾಸ 

ಔರಾದ್: ಕುಮಾರವ್ಯಾಸ ಅವರು ರೂಪ ಅಲಂಕಾರಗಳ ಚಕ್ರವರ್ತಿಯಾಗಿದ್ದು , ಕನ್ನಡ ಕವಿಗಳಲ್ಲಿ ವಿಶಿಷ್ಟ ಸ್ಥಾನಮಾನ ಪಡೆದಿದ್ದಾರೆ. ಕೃತಿಯನ್ನು ಓದುತ್ತ ಹೋದಂತೆ ಕೃತಿ ಓದಿಸಿಕೊಂಡು ಹೋಗುತ್ತದೆ ಎಂದು ಶಿಕ್ಷಕ ಡಾ ಶಿವಲಿಂಗ ಹೇಡೆ ಹೇಳಿದರು. 

ತಾಲೂಕಿನ ಸಂತಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುಮಾರವ್ಯಾಸ ಅವರ ಬದುಕು ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಇಂತಹ ಕವಿಗಳ ನೆನಪಿಗಾಗಿ ಕಾರ್ಯಕ್ರಮ ಮಾಡಬೇಕು. ಮಾನವನಲ್ಲಿ ಮಾನವಿಯ ಮೌಲ್ಯಗಳನ್ನು ತುಂಬಬೇಕು ಎಂದು ಹೇಳಿದರು.

ಶಿಕ್ಷಕಿ ಆಶಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಕವಿಗಳನ್ನು ಮಕ್ಕಳಿಗೆ ಪರಿಚಯ ಮಾಡಿಕೊಂಡುವದು ಉತ್ತಮ ಕಾರ್ಯ ಎಂದು ಹೇಳಿದರು.

ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ ಮಕ್ತುಂಬಿ ಮಾತನಾಡಿ, ಇಂದಿನ ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಲು ಈ ರೀತಿಯ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಮಕ್ಕಳಿಗೆ ಕಾರ್ಯಕ್ರಮಗಳಿಂದ ತುಂಬಾ ಪ್ರಭಾವ ಬೀರುತ್ತವೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು. 

ಶಿಕ್ಷಕ ಶಿವಾಜಿ ಅದ್ಯಕ್ಷತೆ ವಹಿಸಿ ಶಬನಮ್ ಸಂಸ್ಥೆಯು ಒಳ್ಳಯ ಕಾರ್ಯಗಳನ್ನು ಮಾಡುತ್ತಿದೆ. ಕನ್ನಡ ಸಾಹಿತ್ಯದ ಬಗ್ಗೆ ಕವಿಗಳ ಬದುಕಿನ ಬಗ್ಗೆ ಬೆಳಕು ಚೆಲ್ಲುತ್ತಿದ್ದು ಗಡಿ ಭಾಗದಲ್ಲಿ ಇಂತಹ ಕಾರ್ಯಗಳ ಅವಶ್ಯಕತೆಯಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಚಂದ್ರಕಾಂತ ಕೋಳಿ, ಕಲ್ಪನಾ, 

ಪೂರ್ಣಿಮಾ, ಶೃತಿ ಇದ್ದರು.

Leave a Reply

Your email address will not be published. Required fields are marked *

error: Content is protected !!