1
1

ಬೀದರ್: ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ತಾಲ್ಲೂಕಿನ ರಾಜಗೀರಾ ಗ್ರಾಮದ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಿಸುವ ಮೂಲಕ ವಿ.ಎನ್. ಅಪ್ಪೆ ಫೌಂಡೇಷನ್ ಮಾನವೀಯತೆ ಮೆರೆದಿದೆ.
ಗ್ರಾಮದಲ್ಲಿ ಗುರುವಾರ ಫೌಂಡೇಷನ್ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ ಅವರು ಮೃತ ದೇವದಾಸ್ ಮಾರುತಿ, ರೇಖಾ ಸಂಜು, ಶ್ರೀದೇವಿ, ಶ್ರೀದೇವಿ ಮೊಗಲಪ್ಪ, ಕವಿತಾ ಗುಂಡಪ್ಪ, ರೇಷ್ಮಾ ಶಂಕರ್, ನಿಕಿತಾ, ಗಾಯಗೊಂಡ ತುಳಜಮ್ಮ, ನಿರ್ಮಲಾ, ಶಿಲ್ಪಾ, ಶೋಭಾ, ಚಂದ್ರಕಲಾ ಹಾಗೂ ರಾಧಿಕಾ ಅವರ ಕುಟುಂಬದ ಸದಸ್ಯರಿಗೆ ಅಕ್ಕಿ ಸೇರಿದಂತೆ 16 ಆಹಾರ ಸಾಮಗ್ರಿ ಒಳಗೊಂಡ ಕಿಟ್ ವಿತರಣೆ ಮಾಡಿದರು.

ರಸ್ತೆ ಅಪಘಾತವು ಅನೇಕ ಜೀವಗಳನ್ನು ಬಲಿ ಪಡೆದಿದ್ದರಿಂದ ಕೂಲಿ ಕಾರ್ಮಿಕರ ಕುಟುಂಬಗಳು ತೀವ್ರ ಸಂಕಟದಲ್ಲಿವೆ. ಹೀಗಾಗಿ ಆಹಾರ ಧಾನ್ಯ ಕಿಟ್ ವಿತರಿಸಲಾಗಿದೆ. ಬರುವ ದಿನಗಳಲ್ಲಿಯೂ ಸಾಧ್ಯವಾದ ನೆರವಿಗೆ ಫೌಂಡೇಷನ್ ಸಿದ್ಧವಿದೆ ಎಂದು ಅವರು ತಿಳಿಸಿದರು.
ಪ್ರಮುಖರಾದ ವಿಶಾಲ್ ಅಪ್ಪೆ, ರಾಹುಲ್ ಭಂಗೂರೆ, ಸುಧಾಕರ ರಾಜಗೀರಾ, ದಿಗಂಬರ ಪುಂಗೆ, ಮಲ್ಲಿಕಾರ್ಜುನ, ಲಕ್ಷ್ಮಿಕಾಂತ, ರಾಹುಲ್, ಶೈಲೇಶ್ ಮೇತ್ರೆ, ಪ್ರಭು ಬೇಂದ್ರೆ ಮತ್ತಿತರರು ಇದ್ದರು.
Subscribe to get the latest posts sent to your email.