Popular Posts

ಶಾಲಾ ವಾರ್ಷಿಕೋತ್ಸವ ಮತ್ತು ಗ್ರಾಜ್ಯುವೇಷನ್ ಡೇ ಸಂಭ್ರಮ

ಬೀದರ: ಓಡವಾಡ–ಸೋಲಪೂರ ರಸ್ತೆಯಲ್ಲಿರುವ ಅನಂತ ಶಯನ ಮಂದಿರದ ಸಮೀಪ, ಕಾರಂಜಾ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ನಿಸರ್ಗ ಕಾನ್ವೆಂಟ್ ಸ್ಕೂಲ್ ವತಿಯಿಂದ ಶಾಲಾ ವಾರ್ಷಿಕೋತ್ಸವ ಮತ್ತು ಗ್ರಾಜ್ಯುವೇಷನ್ ಡೇ ಕಾರ್ಯಕ್ರಮವು ವೈಭವದಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಮೃತರಾವ ಚೀಮಕೊಡೆ ಅವರು ಮಾತನಾಡಿ, ಶಿಕ್ಷಣದೊಂದಿಗೆ ಸಂಸ್ಕಾರಗಳನ್ನು ಕಲಿಸುವ ಶಿಕ್ಷಣ ವ್ಯವಸ್ಥೆ ಅಗತ್ಯವಿದ್ದು, ಮಕ್ಕಳನ್ನು ದುಷ್ಟ ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ಪಾಲಕರ ಮಹತ್ವದ ಜವಾಬ್ದಾರಿ ಎಂದು ತಿಳಿಸಿದರು. ಬೆಳೆಯುತ್ತಿರುವ ಮೊಳಕೆಯಂತೆ ಈ ಶಿಕ್ಷಣ ಸಂಸ್ಥೆ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಾಂಧಿಗAಜ ಬ್ಯಾಂಕಿನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ಅವರು, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸಂಸ್ಥೆಯ ಶ್ಲಾಘನೀಯ ಕಾರ್ಯವಾಗಿದ್ದು, ಇಂದಿನ ಕಾಲದಲ್ಲಿ ಶಾಲೆ ನಡೆಸುವುದು ದೊಡ್ಡ ಸಾಧನೆ ಎಂದು ಅಭಿಪ್ರಾಯಪಟ್ಟರು.

ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದ ಕನಕ ಯುವ ಪ್ರಶಸ್ತಿ ಪುರಸ್ಕೃತ ರವೀಂದ್ರ ಲಂಜವಾಡಕರ ಅವರು, ಕಾಲಾನುಸಾರವಾಗಿ ಶಿಕ್ಷಣ ಸಂಸ್ಥೆಗಳು ತಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಂಡು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಕಾರ್ಯದರ್ಶಿ ಗುಂಡಪ್ಪಾ ಮಲ್ಕನೋರ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ರುಕ್ಷೀಣಿ ನಿರಂಜಪ್ಪಾ ಮಲ್ಕನೋರ ಉಪಸ್ಥಿತರಿದ್ದರು. ಇದೇ ವೇಳೆ ಸುರೇಶ ಪಾಟೀಲ (ಸೋಲಪೂರ), ಹಣಮಂತಪ್ಪಾ ವಲ್ಲೆಪೂರ (ಹಂಸಕವಿ), ರತಿಕಾಂತ ಜೋಜನಾ, ಮನೋಹರ ಮಡಿವಾಳ, ರವಿ ಬಿರಾದಾರ, ಆನಂದಕುಮಾರ ಉದಾನೆ, ಮಾಜಿ ಯೋಧ ದಶರಥ ಮಲ್ಕನೋರ, ಜೈಶಿಲ ಮೇತ್ರೆ, ಸಮೂಹ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಬಿರಾದಾರ, ಶಾಲೆಯ ಮುಖ್ಯ ಗುರು ಶೃತಿ ಬರಗಲೆ, ಸಹ ಶಿಕ್ಷಕಿಯರಾದ ಭವಾನಿ ದೊಡ್ಡಮನಿ, ಪ್ರೀಯಾಂಕಾ ಕಮಠಾಣಕರ್, ಸಾಗರ ಮೇತ್ರೆ, ಪಾಲಕರು, ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಾಸ್ತಾವಿಕವಾಗಿ ಅಮೀತ್ ಸೋಲಪೂರ (ಸಂಸ್ಥಾಪಕ ಅಧ್ಯಕ್ಷರು, ಸ್ಪರ್ಧಾಗುರು ಬೀದರ – ಐಎಎಸ್ & ಕೆಎಎಸ್ ಸ್ಟಡಿ ಸೆಂಟರ್) ಮಾತನಾಡಿದರು. ಕಾರ್ಯಕ್ರಮವನ್ನು ನಾಗನಾಥ ಬಿರಾದಾರ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!