Popular Posts

ಶ್ರಾವಣ ಮಾಸದ ನಿಮಿತ್ಯ ಜನಪದದಲ್ಲಿ ಬಸವ ದರ್ಶನ ಪ್ರವಚನದ ಉದ್ಘಾಟನೆ

ಬೀದರ: ನಗರದ ಡಾ. ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ ದಿನಾಂಕ 11/08/2026 ರಂದು ಸಂಜೆ 6:00 ಗಂಟೆಗೆ 188 ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ಶ್ರಾವಣ ಮಾಸದ ನಿಮಿತ್ಯ ಜನಪದದಲ್ಲಿ ಬಸವ ದರ್ಶನ ಪ್ರವಚನದ ಉದ್ಘಾಟನೆ ಸಮಾರಂಭ ಜರುಗಿತು.
ಕರ್ನಾಟಕ ಉತ್ತರ ಪ್ರಾಂತದ ಸಹ ಸಂಯೋಜಕರಾದ ಚನ್ನಬಸವಂತರೆಡ್ಡಿ ಪೊಲೀಸ್ ಪಾಟೀಲ್ ರವರು ಉದ್ಘಾಟಕರಾಗಿ ಆಗಮಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, 12 ತಿಂಗಳಲ್ಲಿ ಒಂದು ತಿಂಗಳ ಶ್ರಾವಣ ಮಾಸದಲ್ಲಿ ಶಿವಪೂಜೆ, ಶಿವಧ್ಯಾನ ಮಾಡಿದರೆ ವ್ಯಕ್ತಿಯ ಜೀವನವು ಶಾಂತಿ, ನೆಮ್ಮದಿ ದೊರಕುತ್ತದೆ. ಅದೇ ರೀತಿಯಾಗಿ ವ್ಯಕ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳು ಬಂದಿರುತ್ತವೆ, ಅವುಗಳಿಗೆಲ್ಲ ಶರಣರ, ಸಂತರ, ಮಹಾನುಭಾವರ ವಾಣಿಗಳೇ ಪರಿಹಾರಗಳು ಆಗಿವೆ. ಶ್ರಾವಣ ಮಾಸ ಪವಿತ್ರ ಮಾಸವಾಗಿದೆ. ಮುಂದುವರೆದು ಮಾತನಾಡುತ್ತಾ, ದೇಶಿಯ ಆಕಳುಗಳಿಂದ ದೊರೆಯುವ ಉತ್ಪನ್ನಗಳಾದ ಹಾಲು, ಸಗಣಿ, ಮೂತ್ರ ಇವುಗಳಿಂದ ವಿಭೂತಿ ಮತ್ತು ಮೂತ್ರದಿಂದ ಅನೇಕ ಔಷಧ್ಯ ತಯ್ಯಾರು ಮಾಡುವುದರಿಂದ, ಅದೇ ರೀತಿಯಾಗಿ ಹಾಲು ಕೂಡಾ ಅಮೃತದಂತೆ ಮಾನವ ಜೀವಿಗಳಿಗೆ ಸಂಜೀವಿನಿಗಳAತೆ. ಪ್ರಸ್ತುತ ಅನೇಕ ರೋಗಗಳಿಗೆ ಗೋವಿನಿಂದ ತಯ್ಯಾರಿಸಿದ ಔಷಧ್ಯಗಳು ಕ್ಯಾನ್ಸರ್‌ಗಳಂತಹ ಮಾರಕ ರೋಗಗಳಿಗೆ ದಿವ್ಯ ಔಷಧ್ಯವಾಗಿದೆ. ಈ ಪ್ರಯುಕ್ತ ಭಾರತೀಯರಾದ ನಾವು ಗೋರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅದರಂತೆ ಗೋಮಾತೆ ಜಗತ್ತಿನ ಮಾತೆಯಾಗಿದ್ದಾಳೆ ಎಂದು ವಿಚಾರ ವ್ಯಕ್ತಪಡಿಸಿದರು.
ಧಾರವಾಡದ ಹಿರೇಹೊನ್ನಳ್ಳಿಯ ಶ್ರೇಷ್ಠ ಪ್ರವಚನಕಾರರಾದ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳು ಜನಪದದಲ್ಲಿ ಬಸವ ದರ್ಶನ ಪ್ರವಚನ ಕುರಿತು ಮಾತನಾಡುತ್ತಾ, 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಲ್ಪಟ್ಟ ಅನುಭವ ಮಂಟಪವು ಜಾತಿ ರಹಿತ, ವರ್ಗ ರಹಿತ, ಮೇಲು-ಕೀಳು ಭಾವನೆ ಇರಲಾರದೇ ಸರ್ವರಿಗೂ ಮುಕ್ತ ಅವಕಾಶ ಕೊಡಲಾಗುತ್ತಿತ್ತು. ಜನಪರ, ಜೀವಪರ ಕಲ್ಯಾಣ ಮಾಡುವುದಾಗಿತ್ತು. ಜನಪದ ಗೀತೆಯಲ್ಲಿ ಬಸವಣ್ಣನವರ, ಬಸವಾದಿ ಶರಣರ ವ್ಯಕ್ತಿತ್ವ ಮತ್ತು ಕಲ್ಯಾಣ ಕ್ರಾಂತಿಯ ಚಿಂತನೆಗಳನ್ನು ಕಂಡು ಬರುತ್ತವೆ ಎಂದು ವಿಷಯ ಪ್ರತಿಪಾದಿಸಿದರು.
ದಿವ್ಯ ಸಾನಿಧ್ಯ ವಹಿಸಿರುವ ಪೂಜ್ಯ ಮಹಾಲಿಂಗ ದೇವರು ಆಶೀರ್ವಚನ ನೀಡುತ್ತಾ, ಕುಟುಂಬಗಳು ಉತ್ತಮ ಸಂಸ್ಕೃತಿ, ಸಂಸ್ಕಾರ, ಉತ್ತಮ ಶಿಕ್ಷಣದಿಂದ ಕೂಡಿದ್ದಾದರೆ, ಪಾಲಕರು-ಪೋಷಕರು ಮಕ್ಕಳು

ಶರಣರ, ಸಂತರ ಪ್ರವಚನಗಳನ್ನು ಆಲಿಸಿದಾಗ ಮನೆಯೇ ಮಹಾಮನೆಯಾಗಬಹುದು, ಅದಕ್ಕಾಗಿ ಡಾ|| ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ದಿನಾಂಕ 11/08/2026 ರಿಂದ 11/09/2026 ರವರೆಗೆ ನಡೆಯುವ “ಜನಪದದಲ್ಲಿ ಬಸವ ದರ್ಶನ ಪ್ರವಚನ” ದಲ್ಲಿ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಚನದಲ್ಲಿ ಭಾಗವಹಿಸಿ ಬದುಕು ಸಾರ್ಥಕ ಮಾಡಿಕೊಳ್ಳಬೇಕೆಂದು ನುಡಿದರು.
ಶ್ರಾವಣ ಪ್ರವಚನ ಸೇವಾ ಸಮಿತಿಯ ಅಧ್ಯಕ್ಷರು ಮತ್ತು ದಾಸೋಹಿಗಳಾದ ಯೋಗೇಶ ಸಿರಗೇರೆ ಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬಸವತತ್ವದ ವಾರಸುದಾರರಾದ ನಾವುಗಳು ಧರ್ಮದ ತತ್ವಗಳನ್ನು ಅರಿತುಕೊಳ್ಳಲು ಅನಿವಾರ್ಯತೆ ಇದೆ. ಅದಕ್ಕಾಗಿ ನಾವು ತನು, ಮನ, ಭಾವದಿಂದ ಧರ್ಮಕ್ಕಾಗಿ ದುಡಿಯಲು ಸಿದ್ಧರಾಗಿರಬೇಕು ಮತ್ತು ತಮ್ಮೆಲ್ಲರ ಸಹಾಯ ಸಹಕಾರದಿಂದ ಒಂದು ತಿಂಗಳ ಶ್ರಾವಣ ಮಾಸದ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿದೆ ಎಂದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿಯಾದ ಕು. ವೈಭವಿ ವೆಂಕಟ ವಚನ ಚಿಂತನ ನೀಡಿದರು. ಶರಣೆ ವಿದ್ಯಾವತಿ ಭೀಮರಾವ ಸಿರಗೇರೆ ಚಾಂಬೋಳ ರವರು ಭಕ್ತಿ ದಾಸೋಹ ಮಾಡಿದರು.
ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾದ ಶಕುಂತಲಾ ಬೆಲ್ದಾಳೆ, ಪ್ರವಚನ ಸೇವಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಡಾ. ದೇವಕಿ ನಾಗೂರೆ, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕರಾದ ಸುವರ್ಣಾ ಚಿಮಕೋಡೆ, ಸಾಹಿತಿಗಳಾದ ರಾಜು ಜುಬ್ರೆ, ಡಾ|| ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದ ಕಾರ್ಯದರ್ಶಿಗಳಾದ ಪ್ರೊ. ಎಸ್.ಬಿ. ಬಿರಾದಾರ ಉಪಸ್ಥಿತರಿದ್ದರು. ದಾಸೋಹಿಗಳಾದ ಯೋಗೇಶ ಸಿರಗೇರೆ ಗುರುಬಸವ ಪೂಜೆಯನ್ನು ನೆರವೇರಿಸಿದರು.
ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ವತಿಯಿಂದ ಗುರುಬಸವ ಪ್ರಾರ್ಥನೆ ಮತ್ತು ಭಜನೆ ನೆರವೇರಿತು. ಚನ್ನಬಸಪ್ಪಾ ನೌಬಾದೆ ಮತ್ತು ಸತ್ಯವಾನ ಬೊಗರ ವಚನ ಗಾಯನ ನಡೆಸಿಕೊಟ್ಟರು. ಲಕ್ಷಿö್ಮÃ ಬಿರಾದಾರ ಸ್ವಾಗತ ಕೋರಿದರೆ, ಪ್ರೊ. ಉಮಾಕಾಂತ ಮೀಸೆ ನಿರೂಪಿಸಿದರು. ಕು. ಭಾಗ್ಯಶ್ರೀ ಸಂಜೀವಕುಮಾರ ವಂದಿಸಿದರು. ಪ್ರಮುಖರಾದ ಸಿದ್ಧಯ್ಯಾ ಕೌಡಿಮಠ, ಪ್ರೊ. ಸಂಗ್ರಾಮ ಎಂಗಳೆ, ಸಂಗ್ರಾಮಪ್ಪಾ ಬಿರಾದಾರ, ಡಾ. ವೈಜಿನಾಥ ಬಿರಾದಾರ, ಬಸವರಾಜ ಹಳ್ಳೆ, ಬಾಪು ಮಡಕೆ, ನಾಗಶೆಟ್ಟಿ, ಶಿವಕುಮಾರ ಹಿರೇಮಠ, ತೀರ್ಥಮ್ಮಾ ರೆಡ್ಡಿ, ಗುರುನಾಥ ಬಿರಾದಾರ, ಮೀನಾಕ್ಷಿ ಪಾಟೀಲ್, ಕಸ್ತೂರಿಬಾಯಿ ಬಿರಾದಾರ, ಶಕುಂತಲಾ ಮಲ್ಕಪ್ಪನೋರ್, ವಿಜಯಲಕ್ಷಿö್ಮÃ ಹುಗ್ಗೆಳ್ಳಿ, ಪ್ರೇಮಾ ಮುಚಳಂಬೆ, ಮಹಾನಂದಾ ಸ್ವಾಮಿ, ಅನಿತಾ, ಭಾಗೀರಥಿ ಕೊಂಡಾ ಮುಂತಾದ ಶರಣು-ಶರಣಿಯರು ಭಾಗವಹಿಸಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading