ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ಬೀದರ, ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ, ಹುಮನಾಬಾದ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಆರ್.ಟಿ.ಓ ಚೆಕ್ ಪೊಸ್ಟ್ ಕಲಬುರಗಿ ರಸ್ತೆ ಹತ್ತಿರ ಮೂರು ಜನ ಅಪರಿಚಿತ ಆರೋಪಿತರು ತಮ್ಮ ಕೈಗಳಲ್ಲಿ ಮಾರಕಾಸ್ತ್ರಗಳನ್ನು ಮತ್ತು ಖಾರದ ಪುಡಿ ಹಿಡಿದುಕೊಂಡು ಐಚರ ವಾಹನದ ಚಾಲಕನಿಗೆ ಮತ್ತು ಚಾಲಕನ ಜೊತೆ ಇದ್ದ ಇನ್ನೊಬ್ಬ ವ್ಯಕ್ತಿಯನ್ನು ಹಿಡಿದು ಅವರ ಜೇಬಿನಿಂದ ಹಣ ಮತ್ತು ಮೊಬೈಲ್ ಕಿತ್ತು ಕೊಂಡು ವಾಹನದ ಮಾಲೀಕನಿಗೆ ಫೋನ್ ಮಾಡಿ 2 ಲಕ್ಷ ರೂಪಾಯಿ ಕಳುಹಿಸುವಂತೆ ಮಾರಕಾಸ್ತ್ರಗಳು ಕುತ್ತಿಗೆ ಮೇಲೆ ಇಟ್ಟು ಹೆದರಿಸಿ ಐಚರ ವಾಹನದ ಕೀಲಿಯನ್ನು ಕಸಿದುಕೊಂಡು ತಮ್ಮ ಸ್ಕೂಟಿ ಮೋಟಾರ ವಾಹನದ ಮೇಲೆ ಒತ್ತಾಯ ಪೂರ್ವಕವಾಗಿ ಕೂಡಿಸುತ್ತಿರುವಾಗ ವಾಹನದ ಚಾಲಕನು ಅವರಿಂದ ತಪ್ಪಿಸಿಕೊಂಡು ಪಟ್ಟಣದ ಕಡೆಗೆ ಓಡಿ ಬಂದು ಪೊಲೀಸರಿಗೆ ಹೇಳಿರುವ ಮಾಹಿತಿಯಂತೆ ಕಾರ್ಯ ಪ್ರವರ್ತರಾದ ಹುಮನಾಬಾದ ಉಪ-ವಿಭಾಗದ ಉಪಾಧೀಕ್ಷಕರಾದ ಶ್ರೀ ಮಡೋಳಪ್ಪ ಪಿ.ಎಸ್, ರವರ ನೇತೃತ್ವದಲ್ಲಿ ಸಿಬ್ಬಂದಿ ರವರಾದ ಶ್ರೀ ಗೌತಮ್, ಮುಡಬಿ ಪೊಲೀಸ್ ಠಾಣೆ. ಶ್ರೀ ವೀರಭದ್ರ ಮಂಠಾಳಾ ಪೊಲೀಸ್ ಠಾಣೆ, ಜೀಪ ಚಾಲಕ ರಾಜಕುಮಾರ ರವರೊಂದಿಗೆ ಪಟ್ಟಣದ ಐ.ಬಿ ಕ್ರಾಸ್ ಹತ್ತಿರ ಮೂರು ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಅವರಿಂದ ನಗದು ಹಣ 2,500=00 ರೂಪಾಯಿ, ಮಾರಕಾಸ್ತ್ರಗಳು ಮತ್ತು ಒಂದು ಸ್ಕೂಟಿ, ಎಮ್ಮೆಗಳಿರುವ ಐಚರ ವಾಹನ ವಶಕ್ಕೆ ಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಕೊಳ್ಳಲಾಗಿದೆ.