Popular Posts

ಆರೋಪಿ ಸಲೀಂಗೆ ಸಿ ಸಿ ಹೆಚ್ -20 ನೇ ನ್ಯಾಯಲಯ 7 ವರ್ಷ ಗಳ ಕಠಿಣ ಸಜೆ

ಗೋವಿಂದ ಪುರ ಪೊಲೀಸ್ ಠಾಣೆ ಯ ಕೊಲೆ ಆರೋಪಿ ಮೇಲೆ ಫೈರಿಂಗ್ ಮಾಡಿದ  ಕೇಸ್.ಆರೋಪಿ ಸಲೀಂ ನಿಗೆ ಮಾನ್ಯ ಸಿ ಸಿ ಹೆಚ್ -20 ನೇ ನ್ಯಾಯಲಯ 7 ವರ್ಷ ಗಳ ಕಠಿಣ ಸಜೆ ವಿಧಿಸಿರುತ್ತದೆ.

Cr nu. 21/21 ಕೊಲೆ ಪ್ರಕರಣ ದಲ್ಲಿ ಆರೋಪಿ ಸಲೀಂ ನಿಗೆ ಬಂಧಿಸಲು ಅಂದಿನ ಗೋವಿಂದ ಪುರ ಪೊಲೀಸ್ ಠಾಣೆ ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಇಮ್ರಾನ್ ಹಾಗೂ ಅವ್ರ ತಂಡದ ಮೇಲೆ ಆರೋಪಿ ಸಲೀಂ ನು ಮಚ್ಚಿನಿಂದ ಹಲ್ಲೆ ನಡೆಸಿ ತಪ್ಪಿಸಿ ಕೊಳ್ಳುವಾಗ PSI ಇಮ್ರಾನ್ ರವರು ಆರೋಪಿ ಗೆ ಶರಣಾಗುವಂತೆ ತಿಳಿ ಹೇಳಿದರು ಸಹ, ಆರೋಪಿ ಪುನಃ ಹಲ್ಲೆ ಮುಂದುವರೆಸಿದಾಗ PSI ರವರು ತಮ್ಮ ಸರ್ವಿಸ್ ಪಿಸ್ತುಲ್ ನೊಂದ ಅವನ ಕಾಲಿಗೆ ಗುಂಡು ಹಾರಿಸಿ, ಅವನಿಗೆ ಚಿಕಿತ್ಸೆ ನೀಡಿ ನಂತರ ಬಂಧಿಸಿ ದಿ :24/06/21 ರಂದು ಜೈಲಿಗೆ ಕಳಿಸಿರುತ್ತಾರೆ.

ಸದರಿ ಪ್ರಕರಣ ದಲ್ಲಿ ಇಂದು ಮಾನ್ಯ CCH-20 ನ್ಯಾಯಾಲಯದನ್ಯಾಯ ಧೀಶರು ಶ್ರೀ ಓಂಕಾರಪ್ಪ ರವರು ಸುದೀರ್ಘ 5 ವರ್ಷ ವಿಚಾರಣೆ ನಡೆಸಿ ಆರೋಪಿಗೆ 7 ವರ್ಷ ಗಳ ಕಠಿಣ ಶಿಕ್ಷೆ ಯನ್ನು ವಿಧಿಸಿರುತ್ತದೆ.ಸದರಿ ಪ್ರಕರಣದ ತನಿಖಾಧಿಕಾರಿ :ಶ್ರೀ ಕಿರಣ್ ಪೊಲೀಸ್ ಇನ್ಸ್ಪೆಕ್ಟರ್.ಹಿರಿಯ ಸರ್ಕಾರಿ ಅಭಿಯೋಜಕರು :ಶ್ರೀ ಶಿವುಕುಮಾರ್ ರವರು ಸರ್ಕಾರದ ಪರ ವಾದ ಮಂಡಿಸಿರುತ್ತಾರೆ.

ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾನ್ಯ DG &IG ಸಾಹೇಬರುಹಾಗೂ ಮಾನ್ಯ ಪೊಲೀಸ್ ಕಮಿಷನರ ರವರು ಅಭಿನಂದಿಸಿರುತ್ತಾರೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading