Popular Posts

ಮತಾಂತರಗೊAಡ ದಲಿತ ಕ್ರೈಸ್ತರಿಗೆ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿ  ನೀಡಲು ಆಗ್ರಹಿಸಿ ಮನವಿ

ಬೀದರ: ಕರ್ನಾಟಕ ದಲಿತ ಕ್ರೈಸ್ತ ಸಮನ್ವಯ ಸಮಿತಿ, ಕಲಬುರಗಿ ವಿಭಾಗದ ವತಿಯಿಂದ ಮತಾಂತರಗೊAಡ ದಲಿತ ಕ್ರೈಸ್ತರಿಗೆ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊAಡ ದಲಿತರು ಇಂದಿಗೂ ಸಾಮಾಜಿಕ ಬಹಿಷ್ಕಾರ ಹಾಗೂ ಜಾತಿ ತಾರತಮ್ಯದಿಂದ ಬಳಲುತ್ತಿದ್ದಾರೆ ಎಂದು ವಿವರಿಸಲಾಗಿದೆ. ಹಿಂದೂ ದಲಿತರು ಅನುಭವಿಸುವ ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅನ್ಯಾಯಗಳನ್ನು ಇವರೂ ಅನುಭವಿಸುತ್ತಿದ್ದಾರೆ ಎಂಬುದನ್ನು ಸಮಿತಿಯವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ತಮಿಳುನಾಡು ಸರ್ಕಾರ ಮತಾಂತರಗೊAಡ ದಲಿತ ಕ್ರೈಸ್ತರಿಗೆ ಎಸ್‌ಸಿ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ಉದಾಹರಿಸಿದ ಸಮಿತಿ, ಕರ್ನಾಟಕದಲ್ಲಿಯೂ ಇದೇ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಇದೇ ವೇಳೆ ಕರ್ನಾಟಕ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಮಿತಿ ಸ್ವಾಗತಿಸಿದೆ. ಜೊತೆಗೆ ನಿಗಮದ ಅಧ್ಯಕ್ಷರಾಗಿ ಡಾ. ಪ್ರೋ. ಎಸ್. ಜಾಫೆಟ್ ಅವರನ್ನು ನೇಮಕ ಮಾಡಿರುವುದಕ್ಕೆ ಸಮಿತಿಯವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಶೀಘ್ರದಲ್ಲೇ ಸಚಿವ ಸಂಪುಟದ ಮೂಲಕ ಕರ್ನಾಟಕದ ಕ್ರೈಸ್ತ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ಹಾಗೂ ಮೀಸಲಾತಿ ನೀಡುವ ಕುರಿತು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಕ್ರೈಸ್ತ ಸಮನ್ವಯ ಸಮಿತಿ ಕಲಬುರಗಿ ವಿಭಾಗದ ಅಧ್ಯಕ್ಷ ಡಾ. ಎಂ.ಎಸ್. ಶಿರೋಮಣಿ ಸೇರಿದಂತೆ ರಿಚರ್ಡ ವಿಜಯಕುಮಾರ್ (ಬೀದರ), ಜಾನ್ ಸಂತೋಷ (ಕಲಬುರಗಿ), ಎಲಿಯಾಸ್ ಮಾನವಿ (ರಾಯಚೂರು), ಸಮಸನ್ ಥಾಮಸ್ (ಯಾದಗಿರಿ) ಹಾಗೂ ರಾಜು ರಾಯಪ್ಪ (ಕೊಪ್ಪಳ) ಉಪಸ್ಥಿತರಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading