1
1

ಕಲಬುರಗಿ, ಫೆಬ್ರವರಿ 20 : ಕಲಬುರಗಿ ನಾಟಕೋತ್ಸವ–26 ರ ಪ್ರಚಾರಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಜಾಥಾಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ರಂಗಶಂಕರ ಸಂಸ್ಥಾಪಕರಾದ ಹಿರಿಯ ರಂಗಕರ್ಮಿ ಅರುಂಧತಿ ನಾಗ್ ಅವರು ಚಾಲನೆ ನೀಡಿದರು.
ಜಾಥಾದಲ್ಲಿ ವಿಶೇಷವಾಗಿ ಡೊಳ್ಳು ಕುಣಿತ, ವಿವಿಧ ಶಾಲಾ ಮಕ್ಕಳಿಂದ ವೇಷ-ಭೂಷಣ ಸೇರಿದಂತೆ ನಾಟಕಗಳ ಪಾತ್ರಗಳು ಜನ-ಮನ ಸೆಳೆದವು. ಜಾಥವು ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾಗಿ ತಿಮ್ಮಾಪುರಿ ವೃತ್ತ ಬಳಸಿಕೊಂಡು ಜನಸಂದಣಿ ಮುಖ್ಯ ರಸ್ತೆಗಳಲ್ಲಿ ಚಲಿಸುವ ಮೂಲಕ ಮತ್ತೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮುಕ್ತಾಯವಾಯಿತು.