Popular Posts

ಕುಂಬರವಾಡ ಅಂಬೇಡ್ಕರ ಭವನಕ್ಕೆ ಜಾಗ ಮಂಜೂರಿ ಸರ್ಕಾರದ ಅಪರ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಸೂಚನೆಃ ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ

ವೀರ ಕನ್ನಡಿಗರ ಸೇನೆ ರಾಜ್ಯ ಘಟಕ ವತಿಯಿಂದ ಉಪ ಮುಖ್ಯಮಂತ್ರಿಗಳು, ಕಂದಾಯ ಸಚಿವರಾದ ಡಾ. ಜಿ ಪರಮೇಶ್ವರ ರವರಿಗೆ ಜೂಲೈ 3 ರಂದು ಮನವಿ ಪತ್ರವನ್ನು ಸಲ್ಲಿಸಲಾಗಿತ್ತು, ಬೀದರ ನಗರದ ಕುಂಬರವಾಡ ಮುಖ್ಯ ರಸ್ತೆ ಸರ್ವೆ ನಂ 51/1 ರಲ್ಲಿ 25 ವರ್ಷಗಳಿಂದ ಅಂಬೇಡ್ಕರ ಭವನಕ್ಕಾಗಿ ಕಬ್ಬಜಾದಲ್ಲಿರುವ 75 ಮತ್ತು 80 ವಿಸ್ತಿರ್ಣದ ಜಾಗವನ್ನು ಅಂಬೇಡ್ಕರ ಸಮುದಾಯ ಭವನಕ್ಕಾಗಿ ಮಂಜೂರು ಮಾಡಲು ಜುಲೈ 3 ರಂದು ವಿಧಾನ ಸೌಧದಲ್ಲಿ  ಸೇನೆ ರಾಜ್ಯ ಸಂಚಾಲಕ ಡಾ. ಸುಬ್ಬಣ್ಣ ಕರಕನಳ್ಳಿ  ಮನವಿ ಪತ್ರಸಲ್ಲಿಸಿದರು. ಮನವಿಗೆ ಸ್ಪಂಧನೆ ಮಾಡಿ ಉಪ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಲತಾ ಕೆ ಸಿ ರವರು ಸರ್ಕಾರದ ಅಪರ ಕಾರ್ಯದರ್ಶಿಗಳು ಕಂದಾಯ ಇಲಾಖೆ ಭೂ ಮಂಜೂರಾತಿ ವಿಭಾಗ, ರವರಿಗೆ ಸೂಚಿಸಿ ಜಾಗ ಮಂಜೂರು ಮಾಡಿಕೊಡಿಯೆಂದು ಸೂಚಿಸಿರುವ ಪತ್ರಕ್ಕೆ ಸಂಖ್ಯೆಃ ಆರ್‌ಡಿ 54 ಎಲ್ ಜಿಐ ಅಗಸ್ಟ 5ರಂದು ಜಿಲ್ಲಾಧಿಕಾರಿಗಳು ಬೀದರ ರವರಿಗೆ ಬರೆದಿರುವ ಪತ್ರವನ್ನು ಸರ್ಕಾರದ ಆಧೀನ ಕಾರ್ಯದರ್ಶಿ ಜಗದೀಶ ಕೆ ರವರು ಸೂಚಿಸಿರುವ ಪತ್ರವನ್ನು ಅರ್ಜಿದಾರರಾದ ಡಾ. ಸುಬ್ಬಣ್ಣ ಕರಕನಳ್ಳಿ ರವರಿಗೆ ನೀಡಿದ್ದಾರೆ. ಕುಂಬರವಾಡದಲ್ಲಿ ಪರಿಶಿಷ್ಟ ಜಾತಿ ಜನಾಂಗದವರು ಕೃಷಿ ಕಾರ್ಮಿಕರು, ಕೂಲಿಕಾರ್ಮಿಕರು ಕಟ್ಟಡ ಕಾರ್ಮಿಕರು, ಕೆಲಸಮಾಡುವವರಾಗಿದ್ದಾರೆ. ಸೂಚಿಸಿರುವ ಸ್ಥಳದಲ್ಲಿ ಡಾ. ಬಿ ಆರ್ ಅಂಬೇಡ್ಕರ ಸಮುದಾಯ ಭವನ ನಿರ್ಮಾಣವಾಗದರೆ, ಸಭೆ ಸಮಾರಂಭಗಳು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಜಯಂತಿ, ರಮಾತಾಯಿ ಅಂಬೇಡ್ಕರ ಜಯಂತಿ ಬುದ್ಧ ಪೂರ್ಣಿಮಾ, ವಿಜಯದಶಮಿ, ಮಹಾಪರಿನಿಬ್ಬಣ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೊಗಲು ಅನುಕೂಲವಾಗುತ್ತದೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಆಯುಕ್ತರು, ಈ ಕೂಡಲೆ ಸ್ಪಂಧನೆ ಮಾಡಿ ಸದರಿ ಸ್ಥಳವನ್ನು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಸಮುದಾಯ ಭವನಕ್ಕಾಗಿ ಕಾದಿರಿಸಿರುವ ಸ್ಥಳವಾಗಿದೆಯೆಂದು ಮಹಾನಗರ ಪಾಲಿಕೆ ಡಿಮ್ಯಾಂಡ ರಜಿಸ್ಟಾರನಲ್ಲಿ ನಮೊದಿಸಬೇಕು. ಕಳೆದ ಮೂರು ತಿಂಗಳಿAದ ವಿವಿಧ ಸಂಘಟನೆಗಳು ಕುಂಬರವಾಡ ಎಸ್ ಸಿ ಸಮುದಾಯದವರು ನಿರಂತರ ಹೊರಾಟವನ್ನು ಮಾಡಿಕೊಂಡು ಬರುತ್ತಿದ್ದಾರೆ. ಹೋರಾಟಕ್ಕೆ ನ್ಯಾಯವನ್ನು ಕಲ್ಪಿಸಿಕೊಡುವುದು ಜಿಲ್ಲಾಡಳಿತದ ಕೆಲಸವಾಗಿದೆ. ಕುಂಬರವಾಡದಲ್ಲಿ ಈಗಾಗಲ್ಲೆ ಎಲ್ಲಾ ಜಾತಿ ಜನಾಂಗ ಧರ್ಮಿಯರಿಗೆ ಮಂದಿರ ಮಜೀದ ಚರ್ಚುಗಳು ಕಟ್ಟಿಕೊಂಡು ಧಾರ್ಮಿಕ ಸಹಿಷ್ಣತೆಯಲ್ಲಿ ನಾವು ನಮ್ಮವರು ಎನ್ನುವ ಭಾವನೆಯಿಂದ ಜೀವನ ನಡೆಸುತ್ತಿದ್ದಾರೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading