Popular Posts

ಗಮನ ಸೆಳೆದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಬೀದರ್: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಇಲ್ಲಿಯ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದ ಬಳಿಯ ಎಚ್.ಎಸ್. ಮಲ್ಕಾಪುರೆ ಆರ್ಟ್ ಗ್ಯಾಲರಿಯಲ್ಲಿ ಸೋಮವಾರ ಹಾಗೂ ಮಂಗಳವಾರ ನಡೆದ ಚಿತ್ರ ಕಲಾವಿದ ಸಿದ್ದಪ್ಪ ಬಿ. ತಮಗೊಂಡ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.
ಸಿದ್ದಪ್ಪ ಅವರ ಕುಂಚದಲ್ಲಿ ಅರಳಿದ ವ್ಯಕ್ತಿ, ಐತಿಹಾಸಿಕ ಸ್ಮಾರಕ, ನಿಸರ್ಗ, ಸಾಮಾಜಿಕ ಸಂದೇಶ ಸಾರುವ ಕಲಾಕೃತಿಗಳು ಮೆಚ್ಚುಗೆ ಗಳಿಸಿದವು. ಆಮ್ಲಜನಕ ಉಳಿಸಿ ಸಂದೇಶ ಒಳಗೊಂಡ ಚಿತ್ರ ವಿಶೇಷವಾಗಿ ಎಲ್ಲರನ್ನು ಆಕರ್ಷಿಸಿತು.
ಪ್ರದರ್ಶನದಲ್ಲಿ ವಿವಿಧ ಪ್ರಕಾರದಲ್ಲಿ ರಚಿಸಿದ ಸಿದ್ದಪ್ಪ ಅವರ 25ಕ್ಕೂ ಹೆಚ್ಚು ಕಲಾಕೃತಿಗಳು ಇದ್ದವು.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಸದಸ್ಯ ಭೀಮರಾವ್ ಕೆ. ಬಡಿಗೇರ್ ಪ್ರದರ್ಶನವನ್ನು ಉದ್ಘಾಟಿಸಿದರು.
ಘೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಕಲಾ ಶಿಕ್ಷಕ ಯೋಗೀಶ್ ಚ. ಮಠದ, ಯೋಗೀಶ್ ಚಿತ್ರಕಲಾ ಕಾಲೇಜು ಪ್ರಾಚಾರ್ಯ ಎಂ.ಡಿ. ಷರೀಫ್, ಕಲಾ ಶಿಕ್ಷಕ ಶ್ರೀಕಾಂತ ಬಿರಾದಾರ, ಕಲಾವಿದರಾದ ರಾಜಕುಮಾರ ಶಂಭು, ಸಿದ್ದಪ್ಪ ಬಿ. ತಮಗೊಂಡ, ಚಂದ್ರಕಾಂತ ದರ್ಗಾ, ಸುನೀಲ್ ಸಾಗರ್, ಹಣಮಂತ ಮಲ್ಕಾಪುರೆ, ರಾಜಕುಮಾರ ದೀನೆ, ಪ್ರಭು, ಲಕ್ಷ್ಮಣ, ಸಚಿನ್, ಪ್ರಶಾಂತ, ಸಚಿನ್ ಮತ್ತಿತರರು ಇದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading