Popular Posts

ಚಿಟಗುಪ್ಪಾ ವಸತಿ ನಿಲಯದಲ್ಲಿ ಕರ್ತವ್ಯ ಲೋಪ – ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ

ಬೀದರ್:ಚಿಟಗುಪ್ಪಾ ಪಟ್ಟಣದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ನೇಮಕಗೊಂಡಿರುವ ಅಡುಗೆ ಸಹಾಯಕಿಯರು ಕರ್ತವ್ಯ ನಿರ್ಲಕ್ಷಿಸಿ ಬೇರೆಯವರಿಂದ ಕೆಲಸ ಮಾಡಿಸಿಕೊಂಡು ಸರ್ಕಾರದಿಂದ ಸಂಪೂರ್ಣ ವೇತನ ಪಡೆಯುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಆರೋಪಿಸಿದೆ.

ರೋಸಲಿನ್, ಮಲ್ಲಮ್ಮ ಹಾಗೂ ನಂದಾಬಾಯಿ ಕಳೆದ ಮೂರು ವರ್ಷಗಳಿಂದ ನೇರವಾಗಿ ಕೆಲಸ ಮಾಡದೆ, ಬದಲಿ ನೌಕರರನ್ನು ನೇಮಿಸಿ ತಿಂಗಳಿಗೆ ರೂ. 5,000 ನೀಡುತ್ತಿರುವುದು ಕಂಡುಬAದಿದೆ. ಅವರು ಕೇವಲ ಹಾಜರಿ ಹಾಕಿ ತೆರಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಸಂಬAಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.
15 ದಿನಗಳಲ್ಲಿ ಶಿಸ್ತಿನ ಕ್ರಮ ಕೈಗೊಳ್ಳದಿದ್ದರೆ ಚಿಟಗುಪ್ಪಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ
ಜಿಲ್ಲಾ ಸಂಚಾಲಕ ಬಸವರಾಜ ನಂದಗಾAವಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಮರ್ಜಾಪೂರ, ಜಿಲ್ಲಾ ಉಪಾಧ್ಯಕ್ಷ ಪ್ರಹ್ಲಾದ ಚಿಟ್ಟಾವಾಡಿ, ಜಿಲ್ಲಾ ಮೈನಾರಿಟಿ ಘಟಕ ಅಧ್ಯಕ್ಷ ಮೊಸೀನ್ ಪಟೇಲ್, ಶಿವಗೊಂಡ, ರಾಜಗೊಂಡ ಆಣದೂರಕರ್, ಶಿವಕುಮಾರ ಮಾಮಡಗಿ, ಅಲೆಕ್ಸ್ ಕಮಠಣಾ, ಸುಲ್ತಾನ ಪಟೇಲ್, ಎಂ.ಡಿ. ಹಮೀದ್,ರಾಜಗೊಂಡ ಆಣದೂರಕರ್,ಶಿವಕುಮಾರ ಮಾಮಡಗಿ,ಅಲೆಕ್ಸ್  ಕಮಠಣಾ,ಸುಲ್ತಾನ ಪಟೇಲ್ ಸೇರಿದಂತೆ ಹಲವು ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading