Popular Posts

ಇಮಾಮಬಾದ್ ಬಾಲಕ ಸಾವಿಗೆ ಸಾಂತ್ವನ — ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳಲು  ಈಶ್ವರಸಿಂಗ ಆಗ್ರಹ

ಬೀದರ್: ಬೀದರ್ ತಾಲೂಕಿನ ಇಮಾಮಬಾದ್ ಗ್ರಾಮದ ಐದು ವರ್ಷದ ಬಾಲಕ ಅವಿನಾಶ್ (ತಂದೆ ರಾಜಕುಮಾರ್) ಇತ್ತೀಚೆಗೆ ಮಲಿಕ್ ಮರ್ಜಾಪುರ್ ಗ್ರಾಮದ ಸುತ್ತಮುತ್ತ ಇರುವ ಪುರಾತತ್ವ ಇಲಾಖೆಗೆ ಸೇರಿದ ಕಂದಕ್‌ನಲ್ಲಿ ಬಿದ್ದು ಮೃತಪಟ್ಟ ದುರ್ಘಟನೆಗೆ ಸಂಬAಧಿಸಿದAತೆ ಬಿಜೆಪಿ ಮುಖಂಡ ಈಶ್ವರಸಿಂಗ ಠಾಕೂರ ಅವರು ಇಂದು ಮೃತ ಬಾಲಕನ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು ಮತ್ತು ಧೈರ್ಯ ತುಂಬಿದರು.

ಘಟನೆಯ ವಿವರ ನೀಡಿದ ಅವರು, ಅವಿನಾಶ್ ತನ್ನ ಸಂಬAಧಿಕರೊAದಿಗೆ ಮಲಿಕ್ ಮರ್ಜಾಪುರ್ ಗ್ರಾಮಕ್ಕೆ ತೆರಳಿದ್ದ ವೇಳೆ ಊರಿನ ಸುತ್ತಮುತ್ತ ಇರುವ ಪುರಾತತ್ವ ಇಲಾಖೆಯ ಕಂದಕ್ ಬಳಿ ಯಾವುದೇ ರೀತಿಯ ಎಚ್ಚರಿಕೆ ಫಲಕ, ರಕ್ಷಣಾ ಗೋಡೆ ಅಥವಾ ಬೇಲಿ ಇಲ್ಲದ ಕಾರಣ ನಡೆದುಕೊಂಡು ಹೋಗುವಾಗ ಅಜಾಗರೂಕತೆಯಿಂದ ಕಂದಕ್‌ಗೆ ಬಿದ್ದು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಿದರು. ಈ ಘಟನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಭವಿಸಿರುವುದು ಅತ್ಯಂತ ದುಃಖದ ಸಂಗತಿ ಹಾಗೂ ದೂರದೃಷ್ಟಿಯ ಕೊರತೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಕಂದಕ್‌ನಲ್ಲಿ ಈ ಹಿಂದೆ ಸಹ ಕೆಲವು ಮಂದಿ ಮತ್ತು ಜಾನುವಾರುಗಳು ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿದ್ದರೂ ಸಂಬAಧಪಟ್ಟ ಇಲಾಖೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ ಎಂದು ಅವರು ತಿಳಿಸಿದರು. ಇಂತಹ ದುರಂತಗಳು ಮರುಕಳಿಸದಂತೆ ತಕ್ಷಣವೇ ರಕ್ಷಣಾ ಗೋಡೆ, ಬೇಲಿ ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕೆಂದು ಆಗ್ರಹಿಸಿದರು.

ಮಗುವನ್ನು ಕಳೆದುಕೊಂಡ ತಂದೆ-ತಾಯಿಗಳ ಆಕ್ರಂದನ ಇನ್ನೂ ತಣಿಯದೆ ಇರುವುದನ್ನು ನೋಡಿ ಮನಸ್ಸಿಗೆ ನೋವಾಗಿದೆ ಎಂದು ಹೇಳಿದ ಅವರು, ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿದರು. ಈ ಸಂಬAಧ ಅವರು ಸಂಬAಧಪಟ್ಟ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಶ್ರೀ ದೀಪಕ ಗಾದಗಿ, ರಾಜೇಂದ್ರ ಪೂಜಾರಿ, ರಾಜೀವ್ ಗಾದಗಿ, ಪ್ರಕಾಶ್ ರೆಡ್ಡಿ ರಾಯಕೋಡೆ, ವೆಂಕಟರೆಡ್ಡಿ ಪಾಟೀಲ, ಮಲ್ಲಿಕಾರ್ಜುನ ಟೆಕಮಾಳ, ಶಂಕರರಾವ ಅಬೆಂದಿ, ಪ್ರಭಣ್ಣಾ ರಾಮತೀರ್ಥ, ನಾಗಗೊಂಡ ಮೇತ್ರೆ, ಸಂಜು ಮೇತ್ರೆ, ಸಿದ್ದು ಶಾಪುರೇ, ಸುನೀಲ ಶಾಪುರೇ ಹಾಗೂ ರಮೇಶ್ ಅಬ್ಬೆದ್ದಿ  ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading