Popular Posts

ಉತ್ಸಾಹದಿಂದ ಪಾಲ್ಗೊಂಡ ಜಿಲ್ಲೆಯ ಪತ್ರಕರ್ತರು ಪತ್ರಕರ್ತರ ರಾಜ್ಯ ಸಮ್ಮೇಳನ: ಬೀದರ್‍ನಲ್ಲಿ ಬೈಕ್ ರ್ಯಾಲಿ

ಬೀದರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಪ್ರಚಾರಾರ್ಥವಾಗಿ ಸಮ್ಮೇಳನ ಪ್ರಚಾರ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಬೈಕ್ ರ್ಯಾಲಿ ನಡೆಯಿತು.
ಜಿಲ್ಲೆಯ ವಿವಿಧೆಡೆಯ ಪತ್ರಕರ್ತರು ಹೆಲ್ಮೆಟ್ ಧರಿಸಿ ಉತ್ಸಾಹದಿಂದ ರ್ಯಾಲಿಯಲ್ಲಿ ಪಾಲ್ಗೊಂಡರು.
ಬಸವೇಶ್ವರ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಆಗಸದಲ್ಲಿ ಬಲೂನ್ ಹಾರಿ ಬಿಡುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಬೈಕ್ ರ್ಯಾಲಿಯು ಬಸವೇಶ್ವರ ವೃತ್ತದಿಂದ ಮಹಾವೀರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಗುದಗೆ ಆಸ್ಪತ್ರೆ ಕ್ರಾಸ್, ರೋಟರಿ ಕನ್ನಡಾಂಬೆ ವೃತ್ತ, ಮಡಿವಾಳ ಮಾಚಿದೇವ ವೃತ್ತ, ಕೇಂದ್ರ ಬಸ್ ನಿಲ್ದಾಣ, ಶಿವನಗರ ಮಾರ್ಗವಾಗಿ ಹಾಯ್ದು ಪ್ರತಾಪನಗರದ ಪತ್ರಿಕಾ ಭವನಕ್ಕೆ ತಲುಪಿ ಸಮಾರೋಪಗೊಂಡಿತು.
ಬೈಕ್‍ಗಳಿಗೆ ರ್ಯಾಲಿಯ ಸ್ಟಿಕ್ಕರ್ ಅಂಟಿಸಲಾಗಿತ್ತು. ರ್ಯಾಲಿ ಉದ್ದಕ್ಕೂ ಪತ್ರಕರ್ತರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಜಯವಾಗಲಿ, ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಜಯವಾಗಲಿ ಎಂದು ಘೋಷಣೆ ಹಾಕಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ, ಜಿಲ್ಲಾ ಅಡಾಕ್ ಸಮಿತಿ ಸದಸ್ಯರಾದ ಅಪ್ಪಾರಾವ್ ಸೌದಿ, ಶಿವಕುಮಾರ ಸ್ವಾಮಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ನಾಗೇಶ ಪ್ರಭಾ, ಸಹ ಸಂಚಾಲಕ ಮಲ್ಲಿಕಾರ್ಜುನ ನಾಗರಾಳ, ಸದಸ್ಯರಾದ ಮಹಾರುದ್ರ ಡಾಕುಳಗಿ, ಶಶಿಕಾಂತ ಭಗೋಜಿ, ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ, ಗಂಧರ್ವ ಸೇನಾ, ಅಶೋಕಕುಮಾರ ಕರಂಜಿ, ಮಾಳಪ್ಪ ಅಡಸಾರೆ, ದೀಪಕ್ ವಾಲಿ, ಸಿದ್ರಾಮಯ್ಯ ಸ್ವಾಮಿ, ಶಶಿಕಾಂತ ಶೆಂಬೆಳ್ಳಿ, ರೇವಣಸಿದ್ದಪ್ಪ ಪಾಟೀಲ, ವಿಜಯಕುಮಾರ ಬೆಲ್ದೆ, ಶಶಿಕಾಂತ ಬಂಬುಳಗೆ, ಓಂಕಾರ ಮಠಪತಿ, ರಾಜೇಶ್ ಮುಗಟೆ, ಸಂಜುಕುಮಾರ ಬುಕ್ಕಾ, ಪೃಥ್ವಿರಾಜ್ ಎಸ್, ಸುನೀಲ್ ಕುಲಕರ್ಣಿ, ವಿಜಯಕುಮಾರ ಸೋನಾರೆ, ಗೋಪಿಚಂದ್ ತಾಂದಳೆ, ಸಂತೋಷ್ ಬಿ.ಜಿ. ಪಾಟೀಲ, ಶ್ರೀಕಾಂತ ಪಾಟೀಲ, ಪ್ರದೀಪ್ ಬಿರಾದಾರ, ರಾಜಕುಮಾರ ಮಡಕಿ, ಸುನೀಲಕುಮಾರ ಹೊನ್ನಾಳೆ, ಜಾರ್ಜ್ ಫರ್ನಾಂಡೀಸ್, ಶರದ್ ಘಂಟೆ, ಭಾನುದಾಸ ಪಾಟೀಲ, ಮಾಣಿಕೇಶ್ ಪಾಟೀಲ, ಮುಜಾಹೀದ್, ಬಿಂದುಸಾರ, ಜಯಕುಮಾರ, ಅಂಬರೀಷ್, ಶ್ರಾವಣಕುಮಾರ, ಲೋಕೇಶ್ ಬಿರಾದಾರ, ಮಹೇಶ್ ಸಜ್ಜನ್, ಪರಶುರಾಮ ಹೊಸಮನಿ, ಕೀರ್ತಿ ಸೇನಾ, ಪೂಜಾ ಪಿಟ್ಲೆ, ಅಶ್ವಿನಿ ರೆಡ್ಡಿ, ಸುಷ್ಮಿತಾ ಮೋರೆ, ಸುಧಾರಾಣಿ ಜೆ., ಪ್ರಿಯಂಕಾ ಶ್ರೀಗುರು, ಸೋನಿಕಾ, ವಿಜೇತಾ ಮತ್ತಿತರರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ ರ್ಯಾಲಿ ಉದ್ಘಾಟನೆಗೆ ಬಂದ ಅತಿಥಿಗಳಿಗೆ ಗುಲಾಬಿ ಹೂವು ಹಾಗೂ ಪೆನ್ನು ಕೊಟ್ಟು ಸ್ವಾಗತಿಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading