Popular Posts

ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ವಿತರಣೆ

ಔರಾದ್ : ತಾಲೂಕಿನಲ್ಲಿ ಪ್ರಸ್ತಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಬರೆಯಲಿರುವ  ಶಾಲಾ-ಕಾಲೇಜುಗಳ 1500 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ರತ್ನದೀಪ ಕಸ್ತೂರೆ ಅವರು ಪ್ಯಾಡ್ ಮತ್ತು ಪೆನ್ನುಗಳು  ವಿತರಣೆಗೆ ಚಾಲನೆ ನೀಡಿದರು.  ಗುರುವಾರ ತಾಲೂಕಿನ ಅನುಭವ ಮಂಟಪ ಕ್ಯಾಂಪಸ್ ನಲ್ಲಿ ಅನುಭವ ಮಂಟಪ ಪ್ರೌಢ ಶಾಲೆ, ಮುರಾರ್ಜಿ ದೇಸಾಯಿ ಶಾಲೆ, ಸಿದ್ದರಾಮೇಶ್ವರ ಪಿಯುಸಿ ಕಾಲೇಜನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪ್ಯಾಡ್ ಮತ್ತು ಪೆನ್ನುಗಳು ವಿತರಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ತಹಸೀಲ್ದಾರ್ ಮಹೇಶ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವ ಅಮೂಲ್ಯವಾಗಿದೆ. ಅದನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ದೃಷ್ಟಿಕೋನದಿಂದ ರತ್ನದೀಪ ಕಸ್ತೂರೆ ಅವರು ಪ್ಯಾಡ್ ಮತ್ತು ಪೆನ್ನುಗಳು ವಿತರಣೆ ಮಾಡಿದ್ದಾರೆ. ಅವರ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರೇಮಸಾಗರ ದಾಂಡೆಕರ್ ಮಾತನಾಡಿ, ಯುವಕ ರತ್ನದೀಪ ಕಸ್ತೂರೆ ನಮ್ಮ ವಸತಿ ನಿಲಯದಲ್ಲಿಯೇ ಬೆಳೆದಿದ್ದು,ಹೋರಾಟಗಳು ಮೂಲಕ ನೊಂದವರ ಧ್ವನಿಯಾಗಿದ್ದಾರೆ ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುವುದು ಜೀವನ ಪ್ರಮುಖ ಹಂತವಾಗಿದೆ. ಆತ್ಮವಿಶ್ವಾಸದಿಂದ ಚೆನ್ನಾಗಿ ಓದಿ ಪರೀಕ್ಷೆ ಬರೆಯಲು ಮುಂದಾಗಬೇಕು ಎಂದರು. ರತ್ನದೀಪ ಕಸ್ತೂರೆ ಅವರು ತಮ್ಮ ಜನ್ಮದಿನ ನಿಮಿತ್ತ ತಾಲೂಕಿನ 1500 ವಿದ್ಯಾರ್ಥಿಗಳಿಗೆ ಪ್ಯಾಡ್ ಮತ್ತು ಪೆನ್ನುಗಳು ನೀಡಿರುವುದು ಮಾದರಿಯಾಗಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.
ಭಾರತೀಯ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಮಾತನಾಡಿ, ರತ್ನದೀಪ ಕಸ್ತೂರೆ ನಾಗರ ಪಂಚಮಿಯಂದು ಕಲ್ಲು ನಾಗರಿಗೆ ಹಾಲೆರೆಯದೇ ಬಡ ಮಕ್ಕಳಿಗೆ ಹಾಲು‌ ಕೊಡುವಂತೆ ಜಾಗೃತಿ ಮೂಡಿಸಿದ್ದಾರೆ ಎಂದರು.
ನಂತರ ಮಾತನಾಡಿದ ರತ್ನದೀಪ ಕಸ್ತೂರೆ, ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಎಂಬ ಅತಂಕದಿಂದ ಹೊರಬರಬೇಕು. ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಕಷ್ಟಪಟ್ಟು ಅಲ್ಲದೇ, ಇಷ್ಟಪಟ್ಟ ಅಭ್ಯಾಸ ಮಾಡಬೇಕು. ಯಾರು ಮೊಬೈಲ್‌ ಗೀಳಿಗೆ ಒಳಗಾಗಬೇಡಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ಉತ್ತಮ ಅಭ್ಯಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸುವ ಮೂಲಕ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಸಿಪಿಐ ರಘುವೀರಸಿಂಗ್ ಠಾಕೂರ್, ಕಾಂಗ್ರೆಸ್ ಮುಖಂಡ ಜಾನಸನ್ ಘೋಡೆ, ಪಿಎಸ್ ಐ ದಿನೇಶ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಪ್ರಧಾನ ಕಾರ್ಯದರ್ಶಿ ಸುನಿಲ ಜಿರೋಬೆ, ಪತ್ರಕರ್ತ ಮಲ್ಲಪ್ಪ ಗೌಡಾ, ನವೀಲಕುಮಾರ ಉತ್ಕಾರ, ಸುನಿಲ ಮೀತ್ರಾ, ಸಂಗು ದ್ಯಾಡೆ, ಅನಿಲ ಹೇಡೆ, ಬಬ್ಲುಷಾ, ಆನಂದ ಕಾಂಬಳೆ, ರವಿ ಎರನಾಳೆ, ವಿನೋದ ಡೋಳೆ, ರೋಹಿತ್ ಕಾಂಬಳೆ ಸೇರಿದಂತೆ ಅನೇಕರಿದ್ದರು. ಸಂಗಮೇಶ ಬ್ಯಾಳೆ ಸ್ವಾಗತಿಸಿ, ನಿರೂಪಿಸಿದರು.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading