Popular Posts

ಜವಾಹರ ನವೋದಯ ವಿದ್ಯಾಲಯದಲ್ಲಿ ಹರ್ ಘರ್ ತಿರಂಗಾ

ಬೀದರ. ಆಗಸ್ಟ್ 15 (ಕಕ ವಾರ್ತೆ) ತಿರಂಗಾ ಧ್ವಜವು ನಮ್ಮ ದೇಶದ ರಾಷ್ಟ್ರೀಯ ಲಾಂಛನವಾಗಿರುವುದಕ್ಕೆ ಅಲ್ಲದೆ ಅದು ನಮ್ಮೆಲ್ಲರ ಅಶೋತ್ತರಗಳ ಪ್ರತೀಕ. ಇದನ್ನು ನಾವು ಪ್ರೀತಿ ಮತ್ತು ಗೌರವಗಳಿಂದ ಸದಾ ಕಾಪಾಡಬೇಕು ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ನಾಗರಾಜನ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು..
ಶುಕ್ರವಾರ ಜವಾಹರ್ ನವೋದಯ ವಿದ್ಯಾಲಯದಲ್ಲಿ ಶುಕ್ರವಾರ ಮನೆ-ಮನೆಗೆ ಧ್ವಜ ಎಂಬ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ‍್ಯ ದಿನೋತ್ಸವದಲ್ಲಿ ಧ್ವಜಾರೋಹಣ ಬಹು ಮುಖ್ಯವಾದ ಕಾರ್ಯಕ್ರಮವಾಗಿದ್ದು, ಅದು ದೇಶದ 140 ಕೋಟಿ ಜನರ ಪ್ರತಿನಿಧಿಯಾಗಿ ನಾವು ಕಾಣುತ್ತೇವೆ. ಧ್ವಜ ಸಂಹಿತೆಯನ್ನು ಅರಿತುಕೊಳ್ಳಬೇಕು ಶ್ರದ್ಧಾಪೂರ್ವಕವಾಗಿ ಅದನ್ನು ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾಲಯದ ತಂಡವು “ಘರ್ ಘರ್ ತಿರಂಗಾ- ಹರ್ ಘರ್ ತಿರಂಗಾ” “ವೇಷ ಬೇರೆ ಭಾಷೆ ಬೇರೆ ದೇಶ ಒಂದೆ ಭಾರತ” “ಭವ್ಯ ಭಾರತ ಬಲಿಷ್ಠ ಭಾರತ” ಮುಂತಾದ ಘೋಷಣೆಗಳನ್ನು ಕೂಗುತ್ತಾ ವಿದ್ಯಾಲಯದ ಸಮೀಪದ ನಾರಾಯಣಪುರ ಗ್ರಾಮಕ್ಕೆ ಭೇಟಿ ನೀಡಿ ಪತಸಂಚಲನದ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಧರ್ಮಣ್ಣ ಚಿಟ್ಟಾ, ಲಕ್ಷ್ಮಿಕಾಂತ್ ದುದ್ದಣಗಿ, ಮದನ್ ಲಾಮತುರೆ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading

Subscribe