ಬೀದರ್: ರಾಜ್ಯದ ಪ್ರತಿಷ್ಠಿತ ಮುರುಗೇಶ ರುದ್ರಪ್ಪ ನಿರಾಣಿ (ಎಂ.ಆರ್.ಎನ್) ಉದ್ಯೋಗ ಸಮೂಹದ ಮುಧೋಳ ಮೂಲದ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ೭೦ನೇ ಶಾಖೆಯು ಫೆ.೨೫ರಂದು ಬೆಳಿಗ್ಗೆ ೧೦.೩೦ಕ್ಕೆ ಬೀದರ್‌ನ ಪಾಪನಾಶ ಗೇಟ್ ಹತ್ತಿರದ ಸಾಯಿ ಕ್ಲಾಥ್ ಪಕ್ಕದ ಸುಸಜ್ಜಿತ ಕಚೇರಿಯಲ್ಲಿ ಲೋಕಾರ್ಪಣೆuಟಿಜeಜಿiಟಿeಜಗೊಳ್ಳಲಿದೆ ಎಂದು ಸಹಕಾರಿಯ ಜಿಲ್ಲಾ ಸಲಹಾ ಸಮಿತಿ ನಿರ್ದೇಶಕ ಮಂಡಳಿ ಮುಖ್ಯಸ್ಥರಾದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದ್ದಾರೆ.
ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಸಂಸ್ಥಾಪನೆ ಮತ್ತು ಸಮರ್ಥ ಮಾರ್ಗದರ್ಶನದಲ್ಲಿ ವಿಜಯ ಸೌಹಾರ್ದ ಸಹಕಾರಿ ಯಶಸ್ವಿಯಾಗಿ ರಾಜ್ಯಾದ್ಯಂತ ಬ್ಯಾಂಕಿAಗ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಹಿಂದುಳಿದ ಜಿಲ್ಲೆಯ ಆರ್ಥಿಕ ಪ್ರಗತಿಗೆ ಪೂರಕ ಯೋಜನೆಗಳೊಂದಿಗೆ ಬೀದರ್‌ನಲ್ಲಿ ೭೦ನೇ ಶಾಖೆ ಆರಂಭವಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದೇವರು, ಹಾರಕೂಡದ ಶ್ರೀ ಡಾ. ಚನ್ನವೀರ ಶಿವಾಚಾರ್ಯರು, ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು.
ಎಮ್.ಆರ್.ಎನ್ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಕೈಗಾರಿಕಾ ಸಚಿವರಾದ ಸನ್ಮಾನ್ಯ ಶ್ರೀ ಮುರುಗೇಶ ನಿರಾಣಿಯವರು ಗೌರವ ಉಪಸ್ಥಿತಿ ವಹಿಸುವರು.
ಶಾಸಕರಾದ ಪ್ರಭು ಚವ್ಹಾಣ್, ಶರಣು ಸಲಗರ್, ಡಾ. ಸಿದ್ದಲಿಂಗಪ್ಪ ಪಾಟೀಲ್, ಎಂಎಲ್ಸಿ ಎಂ.ಜಿ.ಮುಳೆ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಬಂಡೆಪ್ಪಾ ಖಾಶೆಂಪೂರ, ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಜಂಟಿಯಾಗಿ ಉದ್ಘಾಟನೆ ಮಾಡುವರು.
ಪ್ರಮುಖರಾದ ಮಾಲಾ ನಾರಾಯಣರಾವ, ಬಸವರಾಜ ಜಾಬಶೆಟ್ಟಿ, ಉಮಾಕಾಂತ ನಾಗಮಾರಪಳ್ಳಿ, ಬಿಜಿ ಶೆಟಕಾರ್, ಬಾಬು ವಾಲಿ, ಗುರುನಾಥ ಜಾಂತಿಕರ್, ಈಶ್ವರಸಿಂಗ್ ಠಾಕೂರ್, ಮಹ್ಮದ್ ಗೌಸ್, ವಿಯಕುಮಾರ ಎ.ಪಾಟೀಲ್, ಬಸವರಾಜ ಧನ್ನೂರ, ನಂದಕಿಶೋರ ವರ್ಮಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ವಿವರಿಸಿದ್ದಾರೆ.
೨೦೦೭ ರಲ್ಲಿ ಮುಧೋಳನಲ್ಲಿ ಆರಂಭವಾದ ವಿಜಯ ಸಹಕಾರಿಯು ರಾಜ್ಯಾದ್ಯಂತ ತನ್ನ ಜಾಲ ವಿಸ್ತರಿಸಿಕೊಂಡಿದೆ. ೨ಲಕ್ಷಕ್ಕೂ ಅಧಿಕ ಸದಸ್ಯರಿದ್ದು, ೪೫ ಸಾವಿರ ಕೋಟಿ ವ್ಯವಹಾರ ನಡೆಸುತ್ತಿದೆ. ೩೨೦೦ ಕೋಟಿ ರೂ. ಠೇವಣಿ ಹೊಂದಿ ಠೇವಣಿದಾರರ ವಿಶ್ವಾಸಾರ್ಹ, ನೆಚ್ಚಿನ ಹಣಕಾಸು ಸಂಸ್ಥೆ ಎನಿಸಿದೆ. ಬ್ಯಾಂಕು ತನ್ನ ಸದಸ್ಯರಿಗೆ ವಿವಿಧ ಮಾದರಿಯಲ್ಲಿ ೨೬೦೦ ಕೋಟಿ ರೂ. ಸಾಲ ವಿತರಿಸಿದೆ. ಬಹುಕೋಟಿ ವ್ಯವಹಾರದ ಸಂಸ್ಥೆ ಇಲ್ಲಿ ಶಾಖೆ ಆರಂಭಿಸುತ್ತಿರುವುದು ಗಡಿ ಜಿಲ್ಲೆಗೆ ನಿರಾಣಿ ಗ್ರೂಪ್‌ನ ದೊಡ್ಡ ಕೊಡುಗೆಯಾಗಿದೆ ಎಂದು ಡಾ.ಬೆಲ್ದಾಳೆ ಬಣ್ಣಿಸಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್ ಮಾದರಿಯಲ್ಲಿ ಶಾಖೆಯು ಗ್ರಾಹಕರಿಗೆ ಎಲ್ಲ ತರಹದ ಸೇವೆ ನೀಡಲಿದೆ. ಗಣಕೀಕೃತ ಕೋರ್ ಬ್ಯಾಂಕಿAಗ್ ವ್ಯವಸ್ಥೆಯಡಿ ಶಾಖೆ ಕಾರ್ಯನಿರ್ವಹಿಸಲಿದೆ. ಎಸ್‌ಎಂಎಸ್ ಸೌಲಭ್ಯ, ಠೇವಣಿ ಮೇಲೆ ಆಕರ್ಷಕ ಬಡ್ಡಿ ದರ, ತ್ವರಿತ ಹಣ ವರ್ಗಾವಣೆಗೆ ಆರ್‌ಟಿಜಿಎಸ್/ ನೆಫ್ಟ್ ಸೌಲಭ್ಯವಿದೆ. ಸೌಹಾರ್ದ ಸಹಕಾರಿಯಲ್ಲಿ ಪ್ರಥಮ ಸಲ ಎಟಿಎಂ ಜೊತೆಗೆ ವಿಜಯ ಪೇ ಆ್ಯಪ್ ಮೂಲಕ ಆನ್‌ಲೈನ್ ಬ್ಯಾಂಕಿAಗ್ ಸೌಲಭ್ಯ ಕಲ್ಪಿಸಲಾಗಿದೆ. ಯೆಸ್ ಬ್ಯಾಂಕ್ ಸಹಯೋಗದಲ್ಲಿ ಸ್ವಂತ ಐಎಫ್‌ಎಸ್‌ಸಿ ಕೋಡ್ ಹೊಂದಿದೆ. ಸಂಸ್ಥೆ ತನ್ನ ಸದಸ್ಯರಿಗೆ ಶೇ.೨೫ರಷ್ಟು ಲಾಭಾಂಶ ಹಂಚಿರುವ ರಾಜ್ಯದ ಏಕೈಕ ಸಹಕಾರಿ ಸಂಘವಾಗಿದೆ. ಹೆಚ್ಚಿನ ಜನರು ಬ್ಯಾಂಕ್‌ನೊAದಿಗೆ ವ್ಯವಹರಿಸಿ ಲಾಭ ಪಡೆಯಬೇಕೆಂದು ಕೋರಿದ್ದಾರೆ.
Discover more from ಕಲಿಯುಗದ ಕೂಗು
Subscribe to get the latest posts sent to your email.