1
1

ಬೀದರ್: ರೋಟ್ರಿ ಇಂಟರ್ ನ್ಯಾಶ್ನಲ್ ಸಂಸ್ಥೆಯ ೧೨೧ನೇ ವಿಶ್ವ ರೋಟರಿ ದಿನಾಚರಣೆಯನ್ನು ಅಂಗವಾಗಿ ರೋಟ್ರಿ ಕ್ಲಬ್ ಬೀದರ್ ವತಿಯಿಂದ ಫೆಬ್ರವರಿ ೨೩ರಂದು ಸಂಜೆ ೬.೦೦ ಗಂಟೆಗೆ ನಗರದ ಲಾವಣ್ಯ ಕನ್ವೆನ್ನನ್ ಹಾಲ್ನಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಸಹಾಯಕ ಗವರ್ನರ್ ರೋ. ಇಂ. ಹಾವಶೆಟ್ಟಿ ಪಾಟೀಲ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ರೋಟರಿ ಕಲ್ಯಾಣ ವಲಯದ ಮಾರ್ಗದರ್ಶನದಲ್ಲಿ ಹಾಲಿ ಅಧ್ಯಕ್ಷರಾದ ರೋ. ಬಸವಕುಮಾರ ವಾಟೆಲ್, ರೋ. ಅನೀಲಕುಮಾರ ಬಿರಾದಾರ, ಖಜಾಂಚಿ ರೋ. ಅನೀಲ ಮಸೂದಿ ಹಾಗೂ ೨೦೨೫-೨೬ನೇ ಸಾಲಿನ ನಿರ್ದೇಶಕರ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಿಶ್ವದ ಸುಮಾರು ೧೯೦ ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿರುವ ರೋಟರಿ ಸಂಸ್ಥೆ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ನೈರ್ಮಲ್ಯ ಸೇರಿದಂತೆ ಹಲವಾರು ಸಮಾಜಮುಖಿ ಯೋಜನೆಗಳ ಮೂಲಕ ವಿಶಿಷ್ಟ ಛಾಪು ಮೂಡಿಸಿದೆ. ಬೀದರದಲ್ಲಿ ೧೯೭೨ರಲ್ಲಿ ಕ್ಲಬ್ ಸ್ಥಾಪನೆಯಾಗಿ ನಿರಂತರ ಸೇವೆ ಸಲ್ಲಿಸುತ್ತಿದೆ.
ವಿಶ್ವ ರೋಟರಿ ದಿನಾಚರಣೆಯ ಅಂಗವಾಗಿ ವಿವಿಧ ಕ್ರೀಡಾ, ಸಾಂಸ್ಕೃತಿಕ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇಂದು ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶಟ್ಲರ್ ಕ್ಲಬ್ ಸಹಯೋಗದಲ್ಲಿ ಶಟಲ್ ಪಂದ್ಯಾವಳಿ ನಡೆಯಲಿದೆ. ಹಾಗೇ ಚನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ಇಂದು ಬೆಳಿಗ್ಗೆ ೧೦.೦೦ಕ್ಕೆ “ಬೀದರ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು” ವಿಷಯದ ಮೇಲೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ (೨ ಗಂಟೆ). ಬೆಳಿಗ್ಗೆ ೧೦.೧೫ಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ. ಬೆಳಿಗ್ಗೆ ೧೦.೩೦ಕ್ಕೆ ರಸ್ತೆ ಅಪಘಾತ ಸಂದರ್ಭಗಳಲ್ಲಿ ನೀಡುವ ಪ್ರಥಮ ಚಿಕಿತ್ಸೆ ಹಾಗೂ ಸಿ.ಪಿ.ಆರ್ ಕುರಿತು ನುರಿತ ವೈದ್ಯರಿಂದ ಕಾರ್ಯಾಗಾರ. ಮಧ್ಯಾಹ್ನ ೧೨.೦೦ಕ್ಕೆ “ದುಶ್ಚಟಗಳ ನಿರ್ಮೂಲನೆಯಲ್ಲಿ ಯುವಕರ ಪಾತ್ರ ಅಥವಾ ಜಿಲ್ಲಾಭಿವೃದ್ಧಿಯಲ್ಲಿ ರೋಟರಿ ಸಂಸ್ಥೆಯ ಪಾತ್ರ” ವಿಷಯದ ಮೇಲೆ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ (೫ ನಿಮಿಷ). ಸಂಜೆ ೬.೦೦ಕ್ಕೆ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳ ಸಮೂಹ ನೃತ್ಯಗಳ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಫೆಬ್ರವರಿ ೨೧ರಂದು ನಗರದ ಬಿ.ವಿ.ಬಿ. ಕಾಲೇಜಿನ ಆಟದ ಮೈದಾನದಲ್ಲಿ ಬೆಳಿಗ್ಗೆ ೬.೦೦ ಗಂಟೆಯಿAದ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ರೋಟರಿ ತಂಡಗಳೊAದಿಗೆ ಪತ್ರಕರ್ತರ ಹಾಗೂ ಬ್ಯಾಂಕ್ ಉದ್ಯೋಗಿಗಳ ತಂಡಗಳು ಭಾಗವಹಿಸಲಿವೆ ಎಂದರು.
ಫೆಬ್ರವರಿ ೨೨ರಂದು ಬೆಳಿಗ್ಗೆ ೬.೦೦ಕ್ಕೆ ನಗರದ ಬರಿದ್ ಶಾಹಿ ಗಾರ್ಡನ್ ನಿಂದ ಫತೇ ದರವಾಜ ಹತ್ತಿರದ ರಮೇಶ ಹೋಂಡಾ ಶೋರೂಮ್ ವರೆಗೆ ಬ್ರೆಕ್ ದ್ ಸೈಕಲ್ ಆಫ್ ಕ್ಯಾನ್ಸರ್” ಘೋಷವಾಕ್ಯದೊಂದಿಗೆ ಸೈಕ್ಲಾಥಾನ್ ಜಾಥಾ ನಡೆಯಲಿದೆ. ರೋಟರಿ ಕ್ಲಬ್, ಬೀದರ ಅಡ್ವೆಂಚರ್ಸ್ ಕ್ಲಬ್ ಹಾಗೂ ಡಾ. ವಿಪಿನ್ ಗೋಯಲ್ ಸಹಯೋಗದಲ್ಲಿ ಈ ಜಾಗೃತಿ ಅಭಿಯಾನ ನಡೆಯಲಿದ್ದು, ರೋ. ರಮೇಶ ಗೋಯಲ್ ಉದ್ಘಾಟಿಸಲಿದ್ದಾರೆ ಎಂದವರು ಹೇಳಿದರು.
ಫೆಬ್ರವರಿ ೨೩ ರಂದು ಸಂಜೆ ೬.೦೦ಕ್ಕೆ ಲಾವಣ್ಯ ಕನ್ವೆನ್ನನ್ ಹಾಲ್ನಲ್ಲಿ ನಡೆಯುವ ೧೨೧ನೇ ರೋಟರಿ ದಿನಾಚರಣೆಯನ್ನು ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ರೋ. ತ್ರಿವಿಕ್ರಂ ಜೋಷಿ (ರಾಯಚೂರು) ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ, ಪ್ರಮಾಣಪತ್ರ ವಿತರಣೆ, ಪ್ರಾಯೋಜಕರ ಸನ್ಮಾನ ಹಾಗೂ ರೋಟರಿ ಕ್ಲಬ್ನಲ್ಲಿ ೩೦ ವರ್ಷಗಳಿಗಿಂತ ಹೆಚ್ಚು ಕಾಲ ಸಮಾಜ ಸೇವೆ ಸಲ್ಲಿಸಿರುವ ಸದಸ್ಯರ ಗೌರವ ಸನ್ಮಾನ ನಡೆಯಲಿದೆ. ಜೊತೆಗೆ ಸಂಗೀತ ರಸ ಸಂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ರೋಟರಿ ಕ್ಲಬ್ ಹಿರಿಯ ಸಲಹೆಗಾರರಾದ ಡಾ.ರಾಜಶೇಖರ ಸೇಡಂಕರ್ ಮಾತನಾಡಿ, ಇಂದು ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ವತಿಯಿಂದ ನಶಮುಕ್ತ ಭಾರತ ಅಭಿಯಾನ ಕುರಿತು ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಬೀದರ್ ಜಿಲ್ಲೆಯನ್ನು ಭಿಕ್ಷಾಟನೆ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿ ರವಿವಾರ ಒಂದೊAದು ಗ್ರಾಮ ಪಂಚಾಯತ್ಗಳಿಗೆ ಹೋಗಿ ಅಲ್ಲಿ ಜಾಗೃತಿ ಮೂಡಿಸಿ ಜೊತೆಗೆ ಮಕ್ಕಳಿಗೆ ಮೊಬೈಲ್ ಕೊಡಬಾರದೆಂದು ಗ್ರಾಮ ಪಂಚಾಯತ್ಗಳಿಗೆ ಒಂದು ಸೈರನ್ ನೀಡಲಾಗಿದ್ದು, ಬೆಳಿಗ್ಗೆ ೬ ಗಂಟೆಯಿAದ ೭:೦೦ ಗಂಟೆ ಒಳಗೆ ಮಾತ್ರ ಮಕ್ಕಳಿಗೆ ಮೊಬೈಲ್ ನೀಡಬೇಕು ನಂತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅಣಿಯಾಗಿಸಬೇಕೆಂದು ಅಲ್ಲಿಯೇ ತಾಯಿಯಂದಿರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹಾಗೆ ನಗರ ಪ್ರದೇಶದಲ್ಲಿ ಸಂಜೆ ವೇಳೆಗೆ ಎಲ್ಲಾ ಅಂಗಡಿ ಮುಗ್ಗಟ್ಟುಗಳಿಗೆ ತೆರಳಿ ಮಕ್ಕಳು ಭಿಕ್ಷಾಟನೆಗೆ ತೆರಳಬಾರದು ಎಂದು ಭಿಕ್ಷಾಟನೆಗೊಳಪಟ್ಟ ಮಕ್ಕಳನ್ನು ಬ್ರಿಮ್ಸ್ ಆಸ್ಪತ್ರೆಗೆ ಕರೆದು ಅವರಿಗೆ ವೈದ್ಯರಿಂದ ಜಾಗೃತಿ ಮೂಡಿಸಿ, ತಪಾಸಣೆಗೊಳಪಡಿಸಿ, ಚಿಕಿತ್ಸೆ ನೀಡಿ ಅವರ ಮಾನಸಿಕ ಭಿಕ್ಷಾಟನೆ ಸ್ಥಿತಿಯನ್ನು ತಿಳಿಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಹೀಗೆ ಈ ಸಂಸ್ಥೆಯಿAದ ಹತ್ತು ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ನಿತ್ಯ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಡಾ ಸೇಡಂಕರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ರೊ.ರವೀಂದ್ರ ಮುಲಗೆ, ರೋಟರಿ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ ಪಾಟೀಲ್, ಹಾಲಿ ಅಧ್ಯಕ್ಷ ಬಸವಕುಮಾರ ಪಾಟೀಲ್ ಕಾರ್ಯದರ್ಶಿ ಅನಿಲಕುಮಾರ ಬಿರಾದಾರ್ ಹಾಗೂ ಇತರರು ಮಾತನಾಡಿದರು. ನಿಕಟಪೂರ್ವ ಕಾರ್ಯದರ್ಶಿ ಕೃಪಾಶಿಂಧು ಪಾಟೀಲ, ರೋಟ್ರಿ ಕ್ಬಬ್ ಹಿರಿಯ ಸದಸ್ಯರಾದ ಡಾ.ಸುರೇಶ ಪಾಟೀಲ, ಸಂಗಮೇಶ ಗಾದಗಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.