Popular Posts

ಫೆಬ್ರವರಿ 11ರಂದು ಸಂಗೀತ್ ಕಿ ಏಕ್ ಶಾಮ ಬೀದರ್ ಕೆ ನಾಮ್ ಸಂಗೀತ ಸಂಭ್ರಮ

ಬೀದರ್:ಬೀದರ್ ನಗರದ ಖ್ಯಾತ ಗಾಯಕ ಬೀರು ಸಿಂಗ್ ಅವರ ನೇತೃತ್ವದಲ್ಲಿ “ಏಕ್ ಸಂಗೀತ್ – ಬೀದರ್ ನಾಮ್ ಸುನೇರಿ ಶಾಮ್” ಎಂಬ ಭವ್ಯ ಸಂಗೀತ ಕಾರ್ಯಕ್ರಮವನ್ನು ಫೆಬ್ರವರಿ 11, 2026 ರಂದು  ಸಾಯಂಕಾಲ 05:30 ಗಂಟಗೆ ನಗರದ ಡಾ. ಚೆನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ  ಆಯೋಜಿಸಲಾಗಿದೆ.

ಸ್ವರ್ಣಯುಗದ ಪ್ರಸಿದ್ಧ ಗಾಯಕರುಗಳಾದ ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್, ಮುಕೇಶ್, ಮನ್ನಾಡೇ, ಯೇಸುದಾಸ್, ಕಿಶೋರ್ ಕುಮಾರ್, ಆಶಾ ಭೋಸ್ಲೆ ಅವರ ಅಮರ ಗೀತೆಗಳಿಗೆ ಸಮರ್ಪಿತವಾಗಿ ಈ ಸಂಗೀತ ಸಂಜೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಬೀದರ್‌ನ ಶ್ರೇಷ್ಠ ಗಾಯಕ ಬೀರು ಸಿಂಗ್, ರಾಧಿಕಾ ಬಿ. ಕಲ್ಯಾಣ್, ಸುಜಾತಾ ಸ್ವಾಮಿ (ಕಲಬುರಗಿ), ಮಂದಾಖಾನಿ ಸಿಂಗ್ (ಹೈದರಾಬಾದ್) ಹಾಗೂ ಶ್ರೀಮತಿ ಅನಿತಾ ಐಯ್ಯರ್ (ಸೋಲಾಪುರ) ಅವರು ತಮ್ಮ ಸುಮದೂರ ಕಂಠದಿAದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಕಾರ್ಯಕ್ರಮದ ನಿರೂಪಣೆಯನ್ನು ಸೋಲಾಪುರದ ಅಮಿತಾ ಅವರು ವಹಿಸಲಿದ್ದು, ಸಂಗೀತಾಸಕ್ತರಿಗೆ ಇದು ಮರೆಯಲಾಗದ ಅನುಭವವಾಗಲಿದೆ.

ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಸಂಗೀತ ಪ್ರಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು  ಕಾರ್ಯಕ್ರಮದ ಆಯೋಜಕರು ಹಾಗೂ ಗಾಯಕರಾದ ಬೀರು ಸಿಂಗ ಅನವಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!