1
1

ಬೀದರ: ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ವತಿಯಿಂದ 90ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ವ್ಯಸನಮುಕ್ತ ಭಾರತ ಅಭಿಯಾನದ ಅಂಗವಾಗಿ ನಗರದ ಸಾಯಿ ಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ 2ನೇ ದಿನದ ಕಾರ್ಯಕ್ರಮದಲ್ಲಿ ನವದೆಹಲಿಯ ರಾಷ್ಟ್ರೀಯ ಪ್ರೇರಣಾದಾಯಕ ಪ್ರವಚನಕಾರರಾದ ರಾಜಯೋಗಿ ಬಿ.ಕೆ. ಪಿಯೂಷ್ ಭಾಯಿಜಿ ಅವರು ಮಾತನಾಡಿ ಇಂದಿನ ವೇಗದ ಜೀವನಶೈಲಿಯಲ್ಲಿ ಮಾನವನ ಮನಸ್ಸು ಅತಿಯಾದ ಆಲೋಚನೆಗಳು ಮತ್ತು ಒತ್ತಡಗಳಿಂದ ಅಶಾಂತವಾಗುತ್ತಿದೆ.

ಮನಸ್ಸನ್ನು ನಿಯಂತ್ರಿಸುವುದಕ್ಕಿAತ ಅದನ್ನು ಸುಧಾರಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು. ದಿನನಿತ್ಯ ಸಾವಿರಾರು ಆಲೋಚನೆಗಳು ಹರಿದಾಡುವುದರಿಂದ ಉದಾಸೀನತೆ, ನಿರಾಶೆ ಹಾಗೂ ಏಕಾಂಗಿ ಭಾವನೆಗಳು ಹೆಚ್ಚುತ್ತಿವೆ. ಬಾಹ್ಯ ಸೌಲಭ್ಯಗಳಿದ್ದರೂ ಆಂತರಿಕ ಶಾಂತಿ ಕೊರತೆಯಾಗುತ್ತಿದೆ ಎಂದು ಹೇಳಿದರು.
Subscribe to get the latest posts sent to your email.