Popular Posts

ಸರ್ವಜ್ಞ ಮಣ್ಣಿನ ಸಾಂಸ್ಕೃತಿಗೆ ಅನನ್ಯತೆಯ ಪ್ರತಿರೂಪ. ಉಪನ್ಯಾಸಕ:- ರವೀಂದ್ರ ಕುಂಬಾರ

ಕಲಬುರಗಿ,ಫೆ.20. ಸರ್ವಜ್ಞ ಕೇವಲ ಕನ್ನಡ ನಾಡಿನ ಕವಿಯಲ್ಲ, ಆತ ಈ ಮಣ್ಣಿನ ಸಾಂಸ್ಕೃತಿಕ ಅನನ್ಯತೆಯ ಪ್ರತಿರೂಪ. ಒಂದು ವೇಳೆ ಸರ್ವಜ್ಞ ಗ್ರೀಕ್ ದೇಶದಲ್ಲಿ ಜನಿಸಿದ್ದರೆ, ಇಂದು ಜಗತ್ತು ಅವರನ್ನು ಸಾಕ್ರಟೀಸ್ ಮತ್ತು ಅರಿಸ್ಟಾಟಲ್ ಅವರ ಸಾಲಿನಲ್ಲಿ ನಿಲ್ಲಿಸಿ ಗೌರವಿಸುತ್ತಿತ್ತು ಪದವಿ ಕಾಲೇಜಿನ ಉಪನ್ಯಾಸಕರಾದ ರವಿಂದ್ರ ಕುಂಬಾರ ಅವರು ಹೇಳಿದರು.

ನಗರದಲ್ಲಿ ಶುಕ್ರವಾರ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆಯ ಹಾಗೂ ಜಿಲ್ಲಾ ಪಂಚಾಯತ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಸಂತ ಶ್ರೇಷ್ಠ ಕವಿ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಸರ್ವಜ್ಞ 16ನೇ ಶತಮಾನದಲ್ಲೇ ಜಾತಿ ಪದ್ಧತಿಯನ್ನು ಕಟುವಾಗಿ ಟೀಕಿಸಿದ್ದರು. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಎಂದು ಪ್ರಶ್ನಿಸುವ ಮೂಲಕ, ಜ್ಞಾನಕ್ಕೆ ಜಾತಿಯ ಹಂಗಿಲ್ಲ ಎಂಬ ಮಹಾನ್ ಸತ್ಯವನ್ನು ಸಾರಿದ ಕ್ರಾಂತಿಕಾರಿ. ಸರ್ವಜ್ಞನ ವಚನಗಳಲ್ಲಿ ಕೇವಲ ಸಾಹಿತ್ಯವಲ್ಲದೆ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ, ವೈದ್ಯಕೀಯ ಹಾಗೂ ಗುಪ್ತ ವಿಚಾರಗಳ ಆಳವಾದ ಜ್ಞಾನವಿದೆ. ಪ್ರತಿಯೊಂದು ವಿಷಯದ ಮೇಲೂ ಅವರ ಹಿಡಿತ ಅದ್ಭುತವಾಗಿತ್ತು ಎಂದರು.
ರಾಜಕೀಯ ಶಕ್ತಿಗಿಂತ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಜ್ಞೆ ಮುಖ್ಯ. ಸಮಾಜದ ಜನರು ವರ್ಷಕ್ಕೊಮ್ಮೆಯಾದರೂ ಸಂಘಟಿತರಾಗಿ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಬೇಕು. ಆಗ ಮಾತ್ರ ರಾಜಕೀಯ ವ್ಯಕ್ತಿಗಳು ಸಮಾಜದ ಬಾಗಿಲಿಗೆ ಬರುತ್ತಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಹಾದಿಯಲ್ಲಿ ಸಾಗಬೇಕು. ಅಸೂಯೆ ಮತ್ತು ಒಳಜಗಳಗಳನ್ನು ಬಿಟ್ಟು ಸಮಾಜವು ಪ್ರಜ್ಞಾವಂತಿಕೆಯಿಂದ ಒಗ್ಗೂಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ನಿಜಶರಣ ಅಂಬಿಗರ ಚೌಡಯ್ಯ ಮತ್ತು ಸರ್ವಜ್ಞ ಮಹಾಕವಿಗಳು ಕನ್ನಡ ನಾಡಿನ ಅತ್ಯಂತ ಪ್ರಭಾವಶಾಲಿ ಚಿಂತಕರು. ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕ ಎಂದರು.
ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ಶಿವಶರಣಪ್ಪ ಎಲ್. ಕುಂಬಾರ್ ಉದ್ಪಾಟಿಸಿ ಮಾತನಾಡಿ, ಕುಂಬಾರ ಸಮಾಜವು ಇನ್ನು ಮುಂದೆ ಎಲೆಮರೆ ಕಾಯಿಯಂತೆ ಇರದೆ ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು. ಮುಖ್ಯವಾಗಿ 21ನೇ ಶತಮಾನದ ಕೃತಕ ಬುದ್ಧಿಮತ್ತೆ (ಂI) ತಂತ್ರಜ್ಞಾನದ ಯುಗಕ್ಕೆ ತಕ್ಕಂತೆ ಸಮಾಜವು ತನ್ನನ್ನು ತಾನು ಅಪ್‍ಡೇಟ್ ಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.
ತ್ರಿಪದಿ ಕವಿ ಸರ್ವಜ್ಞರ ಕುರಿತು ಮಾತನಾಡಿದ ಗಣ್ಯರು ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಅಂದಿನ ಕಾಲದಲ್ಲೇ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದರು. ಅವರ ಕ್ರಾಂತಿಕಾರಿ ವಿಚಾರಗಳು ಕೇವಲ ಒಂದು ಕಾಲಕ್ಕೆ ಸೀಮಿತವಲ್ಲ ಅವು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು
ಕನ್ನಡ ಮತ್ತು ಸಂಸ್ಕøತಿಯ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಅ. ನಾಸಿ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಶಿವಪ್ರಭು ಹಿರೇಮಠ, ಲೋಕೋಪಯೋಗಿ ಇಲಾಖೆ ಅಧಿಕಾರಿ ಹರೀಶ ಕುಂಬಾg,À ಸಮಾಜದ ಮುಖಂಡ ವಿಠ್ಠಲ್ ಕುಂಬಾರ ಸದಾನಂದ ಕುಂಬಾರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!