Popular Posts

ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮಕ್ಕೆ ಬಡ್ಜೇಟ್‍ನಲ್ಲ್ಲಿ 500 ಕೋಟಿ ಮೀಸಲಿಡಿ

ಬೀದರ್ ಫೆ. 20ಃ 2026-27ನೇ ಸಾಲಿನ ಬಡ್ಜೇಟ್‍ನಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮಕ್ಕೆ 500 ಕೋಟಿ ರೂಪಾಯಿ ಮೀಸಲಿಡಬೇಕೆಂದು ಅಂಬಿಗರ ಚೌಡಯ್ಯ ಯುವ ಸೇನೆ ಮನವಿ ಮಾಡಿದೆ.

ಈ ಕುರಿತಂತೆ ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿ ಅವರು ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ರಾಜ್ಯದ ಪೌರಾಡಳಿತ ಹಾಗೂ ಹಜ್ ಸಚಿವರಾದ ಶ್ರೀ ರಹೀಂಖಾನ್ ಅವರಿಗೆ ಸಲ್ಲಿಸಿದರು.

ಕರ್ನಾಟಕ ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಟೋಕ್ರೆ ಕೋಳಿಯ ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸೇರಿದಂತೆ ಇನ್ನಿತರ ಹೆಸರುಗಳಿಂದ ಕರೆಯಲ್ಪಡುವ ಈ ಸಮುದಾಯದ ಏಳಿಗೆಗಾಗಿ ಮುಂಬರುವ 2026-27ನೇ ಸಾಲಿನ ಬಡ್ಜೆಟ್‍ನಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮಕ್ಕೆ 500 ಕೋಟಿ ರೂಪಾಯಿ ಬಡ್ಜೇಟ್‍ನಲ್ಲಿ ಮಿಸಲಿಡಬೇಕೆಂದು ಒತ್ತಾಯಿಸಲಾಗಿದೆ.

ನಮ್ಮ ಸಮುದಾಯ ರಾಜ್ಯದಲ್ಲಿ ಅತಿ ಹಿಂದುಳಿದಿದೆ. ಅಲ್ಲದೇ ನಮ್ಮ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ವಂಚಿತರಾಗಿದ್ದೇವೆ. ನಮ್ಮ ಸಮುದಾಯದವರು ಸಭೆ-ಸಮಾರಂಭ, ಮದುವೆ-ಮುಂಜಿ, ಮುಂತಾದ ಕಾರ್ಯಕ್ರಮಗಳು ನಡೆಸಲು ಸಮುದಾಯ ಭವನಗಳಿಲ್ಲ. ಅಲ್ಲದೇ ಒಟ್ಟಾರೆಯಾಗಿ ನಮ್ಮ ಸಮಾಜವನ್ನು ಕಳೆದ ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರಗಳು ಕಡೆಗಣಿಸುತ್ತ ಬಂದಿವೆ.

ಈಗಲಾದರು ನಮ್ಮ ಟೋಕ್ರೆ ಕೋಳಿ (ಕೋಲಿ-ಕಬ್ಬಲಿಗ) ಸಮಾಜದ ಶ್ರೇಯೋಭಿವೃದ್ಧಿಗಾಗಿ 2026-27ನೇ ಸಾಲಿನ ಬಡ್ಜೆಟ್‍ನಲ್ಲಿ ಅಧಿಕ ಹಣ ಬಿಡುಗಡೆ ಮಾಡಬೇಕೆಂದು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಸೇನೆ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಳ್ಳಿಖೇಡಕರ್, ಬಿ.ರಾಮಣ್ಣಾ, ಶರಣಪ್ಪಾ ಖಾಸೆಂಪೂರ್, ಸೇರಿದಂತೆ ಇತರರು ಇದ್ದರು.

ಬೇಡಿಕೆಗಳು :

1)ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ತಲಾ ಒಂದು ಜಿಲ್ಲೆಗೆ 1 ಏಕರೆ ಭೂಮಿ ಹಾಗೂ ಕಟ್ಟಡಕ್ಕಾಗಿ ಹಣ ಬಡ್ಜೇಟ್‍ನಲ್ಲಿ ಘೋಷಿಸಬೇಕು.

ರಾಜ್ಯದ ಕೆರೆಗಳು ಮತ್ತು ನೀರಾವರಿ ಜಲಾಶಯಗಳಲ್ಲಿ ಮೀನುಗಾರಿಕೆ ನಡೆಸಲು ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮಕ್ಕೆ ಅವಕಾಶ ಮತ್ತು ಅನುಮತಿ ನೀಡಬೇಕು.

ವಿಧಾನ ಸೌಧದ ಆವರಣದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಸ್ಥಾಪನೆ ಮಾಡಬೇಕು.

ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಸ್ಥಾಪಿಸಲು ಸ್ಥಳಾವಕಾಶ ಮಾಡಿಕೊಡಬೇಕು.

ಬೀದರ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತ ಕೆರೆಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪಿಸಬೇಕು.

ಹಾವೇರಿ ಜಿಲ್ಲೆಯ ನರಸಿಪೂರದಲ್ಲಿರುವ ನಿಜ ಶರಣ ಅಂಬಿಗರ ಚೌಡಯ್ಯನವರ ಐಕ್ಯಸ್ಥಳವನ್ನು ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು 50 ಕೋಟಿ ರೂಪಾಯಿ ಘೋಷಿಸಬೇಕು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading

Subscribe