Popular Posts

ಆ.31ರ ವರೆಗೆ ಫಲಾನುಭವಿಗಳಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ‘ಒಂದಾವರ್ತಿ ತೀರುವಳಿ ಯೋಜನೆ’ ಅವಧಿ ವಿಸ್ತರಣೆ

ಬೀದರ, ಆಗಸ್ಟ್ 13 (ಕಕ ವಾರ್ತೆ) : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2013-14 ರಿಂದ 2018-19ರ ಆರ್ಥಿಕ ವರ್ಷದವರೆಗೆ ವಿವಿಧ ಯೋಜನೆಗಳಡಿ ನೀಡಲಾಗಿರುವ ಸಾಲದ ಅಸಲು ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದ ಫಲಾನುಭವಿಗಳಿಗೆ ಬಡ್ಡಿ ಮನ್ನಾ ಮಾಡಲು ಜಾರಿಗೊಳಿಸಿರುವ ‘ಒಂದಾವರ್ತಿ ತೀರುವಳಿ ಯೋಜನೆ’ಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಬೀದರ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕ ಸಲಾವುದ್ದೀನ್ ತಿಳಿಸಿದ್ದಾರೆ.
ಜಿಲ್ಲೆಯ ವ್ಯಾಪ್ತಿಯಲ್ಲಿರುವ ಅರ್ಹ ಫಲಾನುಭವಿಗಳು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ. 2013-14 ರಿಂದ 2018-19ರ ಅವಧಿಯಲ್ಲಿ ಸಾಲ ಪಡೆದು, ಅಸಲು ಮೊತ್ತವನ್ನು ಪೂರ್ಣವಾಗಿ ತೀರಿಸಿದ ಫಲಾನುಭವಿಗಳ ಬಡ್ಡಿ ಮನ್ನಾಕ್ಕಾಗಿ ಈ ಯೋಜನೆ ಜಾರಿಯಲ್ಲಿದೆ. ಸರ್ಕಾರದ ಆದೇಶದನ್ವಯ ಈ ಯೋಜನೆಯಡಿ ಸೌಲಭ್ಯ ಪಡೆಯಲು 2026ರ ಆಗಸ್ಟ್ 31ರ ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading