Popular Posts

ಆ.22ರಂದು ಬ್ರಹ್ಮಾಕುಮಾರೀಸ್ ಪಾವನಧಾಮದಲ್ಲಿ ‘ವಿಶ್ವ ಬಂಧುತ್ವ ರಕ್ತದಾನ ಮಹಾ ಅಭಿಯಾನ’

ಬೀದರ್:  ರಾಜಯೋಗಿನಿ ದಾದಿ ಪ್ರಕಾಶಮಣಿ ಜೀ ಅವರ 19 ನೇ ಪುಣ್ಯಸ್ಮರಣೆಯ ಅಂಗವಾಗಿ, ಬ್ರಹ್ಮಾಕುಮಾರೀಸ್ ಹಾಗೂ ಸಮಾಜ ಸೇವಾ ವಿಭಾಗದ (RERF) ವತಿಯಿಂದ ಬೃಹತ್ ‘ವಿಶ್ವ ಬಂಧುತ್ವ ರಕ್ತದಾನ ಮಹಾ ಅಭಿಯಾನ ಆಯೋಜಿಸಲಾಗಿದೆ.

ಈ ರಕ್ತದಾನ ಶಿಬಿರವು ಆಗಸ್ಟ್ 22,  2026ರಂದು ಶನಿವಾರ ಬೀದರ್ ನಗರದ ಬ್ರಿಮ್ಸ್ ಕಾಲೇಜು ಹಿಂದುಗಡೆ ಇರುವ ಜೆ.ಪಿ ನಗರದಲ್ಲಿರುವ ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ಅಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆ ವರೆಗೆ ನಡೆಯಲಿದೆ.

ಭಾರತ ಮತ್ತು ನೇಪಾಳದಾದ್ಯಂತ ಇರುವ ಬ್ರಹ್ಮಾಕುಮಾರೀಸ್ ಸೇವಾ ಕೇಂದ್ರಗಳ ಮೂಲಕ ಈ ಮಹಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಕೇವಲ ರಕ್ತವನ್ನು ಸಂಗ್ರಹಿಸುವುದು ಮಾತ್ರವಲ್ಲದೆ, ಸಮಾಜದಲ್ಲಿ ಮಾನವೀಯತೆ, ಏಕತೆ ಮತ್ತು ಸಹಾನುಭೂತಿಯಂತಹ ಮೌಲ್ಯಗಳನ್ನು ಜಾಗೃತಗೊಳಿಸುವುದು ಈ ಸೇವೆಯ ಮುಖ್ಯ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಅಭಿಯಾನದ ಪ್ರಮುಖ ಅಂಶಗಳು:

ಜೀವ ರಕ್ಷಣೆ: ಒಂದು ಯೂನಿಟ್ ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಬಹುದು ಎಂಬ ಜಾಗೃತಿಯನ್ನು ಈ ಅಭಿಯಾನ ಮೂಡಿಸುತ್ತಿದೆ.
ಮೌಲ್ಯಗಳ ಮೇಳೈಕೆ: ಜ್ಞಾನ, ಯೋಗ ಮತ್ತು ಶುಭಭಾವನೆಗಳೊಂದಿಗೆ ಮಾಡುವ ರಕ್ತದಾನವು ಕೇವಲ ಪ್ರಾಣವನ್ನು ಉಳಿಸುವುದಲ್ಲದೆ, ಜೀವನದಲ್ಲಿ ಭರವಸೆ ಮತ್ತು ಪ್ರೀತಿಯನ್ನು ತುಂಬುತ್ತದೆ.
ತ್ರಿವಳಿ ತತ್ವಗಳು: ಈ ಕಾರ್ಯಕ್ರಮವು ಈಶ್ವರನ ಜ್ಞಾನವನ್ನು ಅಳವಡಿಸಿಕೊಳ್ಳುವ ‘ಜ್ಞಾನಪಾನ’, ಧ್ಯಾನದ ಮೂಲಕ ಶಾಂತಿ ಪಡೆಯುವ ‘ಯೋಗಧ್ಯಾನ’ ಮತ್ತು ಮಾನವೀಯತೆಯ ನಿಜವಾದ ಗುರುತಾಗಿರುವ ‘ರಕ್ತದಾನ’ ಎಂಬ ಮೂರು ಆಯಾಮಗಳನ್ನು ಒಳಗೊಂಡಿದೆ.

ಸಾರ್ವಜನಿಕರು ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ರಕ್ತದಾನ ಮಾಡಲು  ಇಚ್ಛಿಸುವವರು ಬ್ರಹ್ಮಾಕುಮಾರಿಸ್ ರಾಜಯೋಗ ಕೇಂದ್ರ ಪಾವನಧಾಮ ಮೊಬೈಲ್ ಸಂಖ್ಯೆ:-  8073609431 ಅಥವಾ 9686795719 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಅಭಿಯಾನದ ಬಗ್ಗೆ ರಾಷ್ಟ್ರೀಯ ಮಟ್ಟದ ಹೆಚ್ಚಿನ ಮಾಹಿತಿಗಾಗಿ, ಸಾರ್ವಜನಿಕರು www.bksocialwing.org ವೆಬ್‌ಸೈಟ್‌ಗೆ ಸಹ ಭೇಟಿ ನೀಡಬಹುದು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading