Popular Posts

ಕಲಬುರಗಿ ಸ್ವಚ್ಛ–ಸುಂದರ ನಗರವಾಗಲಿ

ಕಲಬುರಗಿ, ಆಗಸ್ಟ್ 14.(ಕಕ ವಾರ್ತೆ)-ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ರಾಷ್ಟ್ರಪ್ರೇಮದ ಸಂದೇಶವನ್ನು ಬೆಸೆದು ಕಲಬುರಗಿ ಮಹಾನಗರ ಪಾಲಿಕೆ ಶುಕ್ರವಾರ ಆಯೋಜಿಸಿದ್ದ ‘ರನ್ ಫಾರ್ ಶತಾಭಿμÉೀಕಂ’ ಮ್ಯಾರಥಾನ್ ಹಾಗೂ ಸೈಕ್ಲೋಥಾನ್ ಗಮನ ಸೆಳೆಯಿತು.
ನಗರದ ಕಲಬುರಗಿ ಕೋಟೆಯಿಂದ ಆರಂಭಗೊಂಡ ಓಟ ಜಗತ್ ವೃತ್ತದ ಮೂಲಕ ತಿಮ್ಮಾಪುರ ವೃತ್ತದವರೆಗೆ ಸಾಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಲಬುರಗಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ವμರ್Á ಜಾನೆ, ಸ್ವಚ್ಛ ನಗರ ನಿರ್ಮಾಣ ಕೇವಲ ಪಾಲಿಕೆಯ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂದರು.
ಮನೆಯಿಂದಲೇ ಹಸಿ ಮತ್ತು ಒಣಕಸವನ್ನು ಪ್ರತ್ಯೇಕಿಸಿ, ಪೌರ ಕಾರ್ಮಿಕರಿಗೆ ಸೂಕ್ತ ರೀತಿಯಲ್ಲಿ ನೀಡುವ ಮೂಲಕ ತ್ಯಾಜ್ಯ ನಿರ್ವಹಣೆಗೆ ಸಾರ್ವಜನಿಕರು ಸಹಕರಿಸಬೇಕು. ಎಲ್ಲರೂ ಕೈಜೋಡಿಸಿದಾಗ ಮಾತ್ರ ಕಲಬುರಗಿಯನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ರೂಪಿಸಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ಸ್ವಚ್ಛ ಪರಿಸರ ಆರೋಗ್ಯಕರ ಜೀವನಕ್ಕೆ ಆಧಾರ. ಮನೆ, ವಾರ್ಡ್ ಹಾಗೂ ನಗರದ ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ಹಸಿ–ಒಣಕಸವನ್ನು ಪ್ರತ್ಯೇಕಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ ಮಾತನಾಡಿ, ನಗರದ ಸ್ವಚ್ಛತೆ ಪ್ರವಾಸೋದ್ಯಮ ಹಾಗೂ ಅಭಿವೃದ್ಧಿಗೂ ಪೂರಕವಾಗಿದೆ. ಹೊರಗಿನಿಂದ ಬರುವವರು ಮೊದಲು ನಗರದ ಪರಿಸರವನ್ನು ಗಮನಿಸುತ್ತಾರೆ. ಸ್ವಚ್ಛ ನಗರವು ಉತ್ತಮ ವಾತಾವರಣದ ಜತೆಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ ಎಂದರು.
ಉಪ ಸಂರಕ್ಷಣಾಧಿಕಾರಿ (ಆಅಈ )ಆಶಿಶ್ ರೆಡ್ಡಿ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮ ಗಂಭೀರವಾಗಿದೆ. ಏಕಬಳಕೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಜತೆಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದಂತೆ ಜನರು ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಮಾತನಾಡಿ, ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮ್ಯಾರಥಾನ್ ಮತ್ತು ಸೈಕ್ಲೋಥಾನ್ ಮೂಲಕ ಸ್ವಚ್ಛತೆಯ ಸಂದೇಶವನ್ನು ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಸಾರ್ವಜನಿಕರು ಕಸ ಎಸೆಯದ ಮೂಲಕ ಪೌರ ಕಾರ್ಮಿಕರ ಶ್ರಮಕ್ಕೆ ಗೌರವ ನೀಡಬೇಕು ಎಂದು ಹೇಳಿದರು.
ಸೈಕ್ಲೋಥಾನ್ ವಿಜೇತರು: ಸೈಕ್ಲೋಥಾನ್‍ನಲ್ಲಿ ದತ್ತಾತ್ರೇಯ ದೀಪಕ್ ಪ್ರಥಮ, ವೆಂಕಟೇಶ್ ಮುರಳೀಧರ ದ್ವಿತೀಯ ಹಾಗೂ ಲಕ್ಷ್ಮೀಪುತ್ರ ಗುರುಲಿಂಗಪ್ಪ ತೃತೀಯ ಸ್ಥಾನ ಪಡೆದರು. ಮ್ಯಾರಥಾನ್‍ನಲ್ಲಿ ಪ್ರತೀಕ್, ಶ್ರೀಲಕ್ಷ್ಮಿ ಹಾಗೂ ರಾಹುಲ್ ರಾನೋಜಿ ಗಮನಾರ್ಹ ಸಾಧನೆ ಮಾಡಿದರು.

ಮಕ್ಕಳಲ್ಲೂ ಸ್ವಚ್ಛತಾ ಜಾಗೃತಿ: ಓಟದ ಬಳಿಕ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ‘ಸ್ವಚ್ಛ ಭಾರತ ಮತ್ತು ಸ್ವಾತಂತ್ರ್ಯ ದಿನಾಚರಣೆ’ ವಿಷಯದ ಚಿತ್ರಕಲಾ ಸ್ಪರ್ಧೆ ಹಾಗೂ ‘ತ್ಯಾಜ್ಯ ವಸ್ತುಗಳಿಂದ ಸ್ವಚ್ಛ ಭಾರತದ ಮಾದರಿ’ ತಯಾರಿಸುವ ಟಾಯ್‍ಕಥಾನ್ ನಡೆಯಿತು. ಯುವಜನತೆ ಮತ್ತು ಮಕ್ಕಳಲ್ಲಿ ಸ್ವಚ್ಛತೆ ಹಾಗೂ ಜವಾಬ್ದಾರಿಯುತ ನಾಗರಿಕತೆಯ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಅನುಪಮಾ ಕಮಕನೂರ, ಅಯಾಜ್ ಖಾನ್, ನಗರ ಪೆÇಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಡಿಸಿಪಿ ಶಾಲೂ, ಸೇರಿದಂತೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading