1
1

ಬೀದರ್: ಇಲ್ಲಿಯ ರಾಂಪುರೆ ಕಾಲೊನಿಯ ಯೋಗೀಶ್ ಚಿತ್ರಕಲಾ ಕಾಲೇಜಿನ ಸಿ.ಎಸ್. ಮಠದ ಆರ್ಟ್ ಗ್ಯಾಲರಿಯಲ್ಲಿ ಗುರುವಾರ ಆರಂಭವಾದ ಚಿತ್ರ ಕಲಾವಿದ ಸುನೀಲ್ ಸಾಗರ್ ಅವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಲಾ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.
ಕ್ಯಾನ್ವಾಸ್ ಮೇಲೆ ಬಿಡಿಸಿದ ಶಾಲಾ ದಿನಗಳಲ್ಲಿ ಹೆಚ್ಚು ಅಂಕ ಹಾಗೂ ಪದಕಗಳಿಗಾಗಿ ನಡೆಸುವ ‘ಕುದುರೆ ಓಟ’, ಬಾಲ್ಯವನ್ನು ನೆನಪಿಸುವ ಪೇಪರ್ನ ರಾಕೇಟ್, ವಿಮಾನ, ಹಡಗುಗಳು, ಆಧುನಿಕ ಯುಗದಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯ ಕಲಾ ಕೃತಿಗಳು ಎಲ್ಲರ ಚಿತ್ತ ತಮ್ಮತ್ತ ಸೆಳೆಯುತ್ತಿವೆ.
ಪ್ರದರ್ಶನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೂ ಆಗಿರುವ ಸುನೀಲ್ ಸಾಗರ್ ಅವರ ಕಾನ್ವಾಸ್ ಮೇಲೆ ಬಿಡಿಸಿದ 25 ಕಲಾಕೃತಿಗಳು ಇವೆ.
ಯೋಗೀಶ್ ಚಿತ್ರಕಲಾ ಕಾಲೇಜು ಉಪಾಧ್ಯಕ್ಷೆ ಶಾಂತಿ ಚ. ಮಠದ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಸುನೀಲ್ ಸಾಗರ್ ಉತ್ಸಾಹಿ ಯುವ ಚಿತ್ರ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಕಲ್ಪನೆಗಳಿಗೆ ಚಿತ್ರದ ಸ್ವರೂಪ ನೀಡುವ ಕಲೆ ಅವರಿಗೆ ಕರಗತವಾಗಿದೆ. ಸಾರ್ವಜನಿಕರು ಪ್ರದರ್ಶನವನ್ನು ವೀಕ್ಷಿಸಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಪ್ರಾಚಾರ್ಯ ಎಂ.ಡಿ. ಷರೀಫ್, ಘೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಚಿತ್ರಕಲಾ ಶಿಕ್ಷಕ ಯೋಗೀಶ್ ಚ. ಮಠದ, ಚಿತ್ರ ಕಲಾವಿದ ಸುನೀಲ್ ಸಾಗರ್, ಕಾಲೇಜು ಉಪನ್ಯಾಸಕರಾದ ಬಿ.ಕೆ. ಬಡಿಗೇರ್, ವಿಕ್ಟರ್ರಾಜ್, ಮಕ್ಬುಲ್, ಮಾಣಿಕ, ಮೇಘ ಮಠದ, ದಿವ್ಯ ರವಿ ಸ್ವಾಮಿ, ಯುವ ಕಲಾವಿದರಾದ ರಾಜು ದೀನೆ, ಚಂದ್ರಕಾಂತ ದರ್ಗಾ, ಲಕ್ಷ್ಮಣ, ಸಿದ್ದು ಬ.ಟಿ.ಕೆ, ಸಂತೋಷ್, ಹಣಮಂತ ಮಲ್ಕಾಪುರೆ ಮತ್ತಿತರರು ಇದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಪ್ರದರ್ಶನ ಏರ್ಪಡಿಸಿದ್ದು, ಆಗಸ್ಟ್ 15 ರ ವರೆಗೆ ನಡೆಯಲಿದೆ.
Subscribe to get the latest posts sent to your email.