1
1

ಬೀದರ, ಆಗಸ್ಟ್ 25 : ಯುವಜನರ ಸಬಲೀಕರಣ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಆನ್ಲೈನ್ ಪೋರ್ಟಲ್ ಮೂಲಕ ‘ಹೊಸ ಭಾರತ ಜೋಡೊ ಯುವ’ ಬಿಜಿವೈಎಸ್ (BJYS) ಸಂಘಗಳ ನೋಂದಣಿಗೆ ಚಾಲನೆ ನೀಡಲಾಗಿದೆ ಎಂದು ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.
ನಮ್ಮ ಪ್ರಮುಖ ಸೇವಾ ಕ್ಷೇತ್ರಗಳು : ಕ್ರೀಡೆ ಮತ್ತು ಫಿಟ್ನೆಸ್, ಯುವ ಸಬಲೀಕರಣ ಹಾಗೂ ಕೌಶಲ್ಯಾಭಿವೃದ್ಧಿ, ಸಮುದಾಯ ಅಭಿವೃದ್ಧಿ, ಅರಣ್ಯ ಮತ್ತು ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಯೋಗಕ್ಷೇಮ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯ ಹೊಂದಿರಬೇಕು.
ಸದಸ್ಯತ್ವ ಅರ್ಹತೆ ಹಾಗೂ ನಿಯಮಗಳು : ವಯೋಮಿತಿ 16 ರಿಂದ 35 ವರ್ಷಗಳ ಒಳಗಿರಬೇಕು. ಯುವಕರು ಮತ್ತು ಯುವತಿಯರು ಭಾಗವಹಿಸಬಹುದು. ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಇರಬೇಕು. ಆಯಾ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ನಿವಾಸಿಗಳು ಅರ್ಹರು. “ಹೆಣ್ಣು-ಗಂಡು ಭೇದವಿಲ್ಲ, ಒಗ್ಗಟ್ಟಿಗೆ ಇಲ್ಲಿ ಕೊರತೆಯಿಲ್ಲ”.
ನೋಂದಾಯಿಸುವ ವಿಧಾನ : ಸಾರ್ವಜನಿಕರು ಹಾಗೂ ಯುವಕ-ಯುವತಿಯರು ವೆಬ್ಸೈಟ್ bjys.karnataka.gov.in ಮೂಲಕ ತಮ್ಮ ಸಂಘದ ನೋಂದಣಿಯನ್ನು ತಕ್ಷಣವೇ ಪೂರ್ಣಗೊಳಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಅಥವಾ ಮಹಾನಗರ ಪಾಲಿಕೆ ಕಚೇರಿಯನ್ನು ನೇರವಾಗಿ ಭೇಟಿ ನೀಡಿ. ಬೀದರ ಜಿಲ್ಲೆಯ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾರತ ಜೋಡೋ ಯುವ ಸಂಘದಲ್ಲಿ ವೆಬ್ಸೈಟ್ ಮೂಲಕ ನೋಂದಣಿಮಾಡಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to get the latest posts sent to your email.