1
1

ಬೀದರ್: ನಗರದ ದಿಗಾಂಧಿ ಗಂಜ ಬ್ಯಾಂಕ್ನ 52ನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆ ಭಾನುವಾರ ನಡೆಯಿತು. ಸಭೆಯಲ್ಲಿ ಬ್ಯಾಂಕಿನ ಪ್ರಗತಿ, ಆರ್ಥಿಕ ಸ್ಥಿತಿಗತಿ ಹಾಗೂ ಮುಂದಿನ ಸಾಲಿನ ಯೋಜನೆಗಳ ಕುರಿತು ಚರ್ಚಿಸಲಾಯಿತು.
ಈ ಸಭೆಯಲ್ಲಿ ಬ್ಯಾಂಕಿನ ಚುನಾಯಿತ ನಿರ್ದೇಶಕರಿಗೆ ಸಂಬಂಧಿಸಿದ ನಿಯಮಗಳ ಕುರಿತು ಹಿರಿಯ ಸದಸ್ಯ ಅಶೋಕ್ ಕುಮಾರ್ ಕರಂಜಿ ಅವರು ಪ್ರಶ್ನೆ ಎತ್ತಿದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳ ಪ್ರಕಾರ 10 ವರ್ಷಕ್ಕಿಂತ ಹೆಚ್ಚು ಅವಧಿಯಿಂದ ನಿರ್ದೇಶಕರಾಗಿರುವವರನ್ನು ನಿರ್ದೇಶಕ ಸ್ಥಾನದಿಂದ ತೆಗೆದು ಹಾಕುವ ನಿಯಮಗಳಿದ್ದರು, ಈವರೆಗೆ ಅಂತವರ ವಿರುದ್ಧ ಯಾವುದೇ ಪ್ರಕ್ರಿಯೆ ಏಕೆ ಕೈಗೊಂಡಿಲ್ಲ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ವಿಜಯಕುಮಾರ ಅಣ್ಣೆಪ್ಪಾ ಪಾಟೀಲ ಗಾದಗಿ, ನಿರ್ದೇಶಕರನ್ನು ತೆಗೆದುಹಾಕುವ ಅಧಿಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಇಲ್ಲ. ನಿರ್ದೇಶಕರಿಗೆ ಸಂಬಂಧಿಸಿದ ವಿಚಾರಗಳನ್ನು ಅಪೆಕ್ಸ್ ಬ್ಯಾಂಕ್ ಎಲ್ಲಾ ಕಾನುನಿನ ಬಗ್ಗೆ ನೋಡಿಕೋಳುತಿದ್ದೆ ಎಂದು ತಿಳಿಸಿದರು.
ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಅಶೋಕ್ ಕುಮಾರ್ ಕರಂಜಿ, ಜಿಲ್ಲೆಯಲ್ಲಿ 10 ವರ್ಷಕ್ಕಿಂತ ಹೆಚ್ಚು ಅವಧಿಯಿಂದ ನಿರ್ದೇಶಕರ ಸ್ಥಾನ ಹೊಂದಿರುವ ಎಂಟು ಮಂದಿ ಸದಸ್ಯರಿದ್ದು, ಅವರನ್ನು ಯಾವಾಗ ನಿರ್ದೇಶಕರ ಸ್ಥಾನದಿಂದ ತೆರವುಗೊಳಿಸಲಾಗುತ್ತದೆ? ಆ ಸ್ಥಾನಗಳಿಗೆ ಯಾವಾಗ ಚುನಾವಣೆ ನಡೆಸಲಾಗುತ್ತದೆ? ನಿಯಮಗಳಿದ್ದರೂ ಈ ನಿರ್ದೇಶಕರನ್ನು ಏಕೆ ಮುಂದುವರಿಸಲಾಗಿದೆ? ಎಂದು ಪ್ರಶ್ನಿಸಿದರು.
ಆದರೆ ಈ ಪ್ರಶ್ನೆಗಳಿಗೆ ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ಅವರಿಂದ ಯಾವುದೇ ಸ್ಪಷ್ಟ ಉತ್ತರ ದೊರೆಯಲಿಲ್ಲ ಎಂದು ಅಶೋಕ್ ಕುಮಾರ್ ಕರಂಜಿ ಅವರು ತಿಳಿಸಿದರು.
Subscribe to get the latest posts sent to your email.