Popular Posts

ಇಂದೂರನಲ್ಲಿ ಕರ್ನಾಟಕ ಮಹಿಳಾ ವೀಲ್-ಚೇರ್ ಕ್ರಿಕೆಟ್ ತಂಡ: ರನ್ನರ್ ಅಪ್ ಸಾಧನೆ

ಬೀದರ್: ಮಧ್ಯಪ್ರದೇಶದ ಇಂದೋರನಲ್ಲಿ ಇತ್ತಿಚೀಗೆನಡೆದ ವೀಲ್-ಚೇರ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕರ್ನಾಟಕ ಮಹಿಳಾ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ರನ್ನರ್ ಅಪ್ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದೆ.
ಬೆಳಗಾವಿ ಜಿಲ್ಲೆಯ ಧೀಮನ ಆರ್ಜೂ ಸರ್ಕಲ್ ಗ್ರೂಪ್‌ನಿಂದ ಮಹಿಳಾ ತಂಡದ ಕ್ಯಾಪ್ಟನ್ ಆಗಿ ನೇತೃತ್ವ ವಹಿಸಿದ್ದ ರಿಜವಾನಾ ಆರ್ ಜಮಾದಾರ್ ಅವರು ಕಳೆದ ಒಂದು ವರ್ಷದಿಂದ ವೀಲ್-ಚೇರ್ ಕ್ರಿಕೆಟ್ ಕ್ಷೇತ್ರದಲ್ಲಿ ಸತತ ಪರಿಶ್ರಮ ವಹಿಸಿ ತಂಡವನ್ನು ಸಂಘಟಿಸಿ ಸಜ್ಜುಗೊಳಿಸಿದ್ದರು. ಯಾವುದೇ ಹೊರಗಿನ ಸಹಾಯವಿಲ್ಲದೆ ಸ್ವತಃ ತಂಡವನ್ನು ರೂಪಿಸಿ, ತರಬೇತಿ ನೀಡಿ, ಫೈನಲ್‌ ವರೆಗೆ ಮುನ್ನಡೆಸಿದ ಅವರ ಸಾಧನೆ ವಿಶೇಷವಾಗಿ ಗಮನಾರ್ಹವಾಗಿದೆ.
ಮಧ್ಯ ಪ್ರದೇಶ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮಹಿಳಾ ತಂಡವು ಹೋರಾಟಮಯ ಆಟ ಪ್ರದರ್ಶಿಸಿ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.. ವಿಕಲಚೇತನ ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಬಲ್ಲರೆಂಬುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ. ಇದು ಧೀಮನ ಆರ್ಜೂ ಸರ್ಕಲ್ ಗ್ರೂಪ್‌ಗೂ ಹಾಗೂ ಕರ್ನಾಟಕ ರಾಜ್ಯಕ್ಕೂ ಹೆಮ್ಮೆಯ ವಿಷಯವಾಗಿದೆ.
ಕ್ಯಾಪ್ಟನ್: ಆಗಿ ರಿಜವಾನಾ ಆರ್ ಜಮಾದಾರ್, ವೈಸ್ ಕ್ಯಾಪ್ಟನ್: ಆಗಿ ಮಹಾದೇವಿ ಎಸ್ ಯಾದರವಿ,  ಸದಸ್ಯರಾಗಿ ಆರತಿ ಎಸ್ ಪವಾರ,  ಮಂಜವ್ವಾ ಎಸ್,  ಅನಿತಾ ಎಸ್ ಮದರ,  ಮಲ್ಲಮ್ಮಾ ಎಸ್ ಪಡಸಲಗಿ, ಮಹಬುಬಿ ಎಸ್ ಸೌದಾಗರ, ಬೀಬಿ ಐಶಾ ಪಾನಿಬಂದ,ರಿಜವಾನಾ ಎಫ್ ಕೊಳ್ಳೂರು , ಉಮಾದೇವಿ, ಮಂಜುಳಾ ಎಲ್, ಆನಂತ ಲಕ್ಷ್ಮಿ ತಂಡದ ಅದಸ್ಯರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!