Popular Posts

ಎಸ್.ಐ.ಆರ್. ಪರಿಷ್ಕರಣೆ ಕರಡು ಮತದಾರರ ಪಟ್ಟಿ ಪ್ರಕಟ: ಗುಲಬರ್ಗಾ ಗ್ರಾಮೀಣದಲ್ಲಿ 2.21 ಲಕ್ಷ ಮತದಾರರು

ಕಲಬುರಗಿ,ಅ.24 ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ-2026ರ ಕರಡು ಮತದಾರರ ಪಟ್ಟಿ ಸೋಮವಾರ ಪ್ರಕಟಿಸಲಾಗಿದ್ದು, ಗುಲಬರ್ಗಾ ಗ್ರಾಮೀಣ ವಿಧಾನಸಬಾ ಕ್ಷೇತ್ರದಲ್ಲಿ 1,14,753 ಪುರುಷ, 1,06,739 ಮಹಿಳೆ, ಇತರೆ 21 ಸೇರಿ ಒಟ್ಟು 2,21,513 ಜನ ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತರು ಮತ್ತು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಸಾಹಿತ್ಯಾ ಆಲದಕಟ್ಟಿ ತಿಳಿಸಿದ್ದಾರೆ.
ಸೋಮವಾರ ಕಲಬುರಗಿ ತಹಶೀಲ್ದಾರ ಕ್ಷೇತ್ರದಲ್ಲಿ ಒಟ್ಟು 2,74,878 ಮತದಾರರಿದ್ದು, ಇದೀಗ ಎಸ್.ಐ.ಆರ್. ಪ್ರಕ್ರಿಯೆ ನಂತರದ ಕರಡು ಪಟ್ಟಿಯಲ್ಲಿ 2,21,513 ಜನ ಮತದಾರರು ಮಾತ್ರ ನೊಂದಾಯಿತರಾಗಿದ್ದಾರೆ. ಇದರಲ್ಲಿ 1,595 ಯುವ ಮತದಾರರು, 2,069 ಹಿರಿಯ ನಾಗರಿಕರು ಹಾಗೂ 2,930 ವಿಶೇಷಚೇತನರು ಮತದಾರರಿದ್ದು, 1,000 ಪುರುಷರಿಗೆ 930 ಮಹಿಳಾ ಮತದಾರರಿದ್ದಾರೆ. 53,365 ಮತದಾರರನ್ನು ಎ.ಎಸ್.ಡಿ.ಡಿ.ಓ ಎಂದು ಗುರುತಿಸಲಾಗಿದೆ ಎಂದರು.
ಕರಡು ಪಟ್ಟಿಯನ್ನು ಕ್ಷೇತ್ರದ ಎಲ್ಲಾ ತಹಶೀಲ್ದಾರ ಕಚೇರಿ, ಸ್ಥಳೀಯ ಸಂಸ್ಥೆಗಳ ಕಚೇರಿ ಹಾಗೂ ಮತಗಟ್ಟೆ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಲಾಗಿದೆ. ಇದಲ್ಲದೆ ಪಟ್ಟಿಯನ್ನು hಣಣಠಿs://voಣeಡಿs.eಛಿi.gov.iಟಿ/ಜoತಿಟಿಟoಚಿಜ-eಡಿoಟಟ?sಣಚಿಣeಅoಜe=S10 ನಲ್ಲಿಯೂ ಪ್ರಚೂರಪಡಿಸಲಾಗಿದೆ ಎಂದರು.
ನೋ-ಮ್ಯಾಪಿಂಗ್ ಹಾಗೂ ಅಸಂಗತತೆ ಹೊಂದಿರುವ 10,894 ಮತದಾರರಿಗೆ ಬಿಎಲ್‍ಒಗಳ ಮೂಲಕ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿಯೇ ವಿಚಾರಣೆ ನಡೆಸಲು ಹೆಚ್ಚುವರಿಯಾಗಿ ಎಇಆರ್‍ಒಗಳನ್ನು ನಿಯೋಜಿಸಲು ಶಿಫಾರಸು ಮಾಡಲಾಗಿದೆ ಎಂದ ಅವರು, ನೋಟಿಸ್ ಹಾಗೂ ಹಕ್ಕು-ಆಕ್ಷೇಪಣೆಗಳ ವಿಚಾರಣೆ ಪ್ರಕ್ರಿಯೆಯನ್ನು ಅಕ್ಟೋಬರ್ 22ರೊಳಗೆ ಪೂರ್ಣಗೊಳಿಸಿ, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ, ಕಮಲಾಪೂರ ತಹಶೀಲ್ದಾರ ಮೊಹಮ್ಮದ್ ಮೋಸಿನ್, ಶಹಾಬಾದ ತಹಶೀಲ್ದಾರ ನೀಲಪ್ರಭಾ ಇದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading