1
1

ಬೀದರ್: ಜಿಲ್ಲಾ ಆರ್ಯ ಈಡಿಗ ಸಮಾಜ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಡಾ. ರಾಜಶೇಖರ ಸೇಡಂಕರ್ ಅಧ್ಯಕ್ಷತೆಯಲ್ಲಿ ನಗರದ ಚಿದ್ರಿ ರಸ್ತೆಯಲ್ಲಿ ಇರುವ ವೆಂಕಟೇಶ್ವರ ಕಾಂಪ್ಲೆಕ್ಸ್ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು: ಡಾ. ರಾಜಶೇಖರ ಸೇಡಂಕರ್ (ಗೌರವಾಧ್ಯಕ್ಷ), ಸುಭಾಷ್ ಚೌಧರಿ (ಅಧ್ಯಕ್ಷ), ಶ್ರೀಮಂತ ತೆಲಂಗ್, ದಿಲೀಪ್ ತೆಲಂಗ್ ಭಾಲ್ಕಿ (ಉಪಾಧ್ಯಕ್ಷ), ಸಂಗಯ್ಯ ಈಡಗಾರ ಸುಲ್ತಾನಪುರ (ಪ್ರಧಾನ ಕಾರ್ಯದರ್ಶಿ), ಕೃಷ್ಣಕುಮಾರ ತೆಲಂಗ್ ದುಬಲಗುಂಡಿ, ರಜತ್ ತೆಲಂಗ್ ಚಿಟಗುಪ್ಪ (ಸಹ ಕಾರ್ಯದರ್ಶಿ), ಅನಿಲ್ ಗೌಡ ಸುಂದಾಳ (ಖಜಾಂಚಿ) ಮತ್ತು ಸುಭಾಷ್ ಬಾವಗೆ (ಸಲಹೆಗಾರ).
ಪ್ರಮುಖರಾದ ಶಿವಕುಮಾರ ತೆಲಂಗ್ ಹುಮನಾಬಾದ್, ವಿಜಯಕುಮಾರ ತೆಲಂಗ್ ಭಾಲ್ಕಿ, ಅಶೋಕಗೌಡ, ಉಮೇಶ್ ತೆಲಂಗ್, ಅನರಾಜ ಮುಂಗೆ, ಅಶೋಕ ಭಂಡಾರಿ ಭಾಲ್ಕಿ, ಮಚ್ಚೇಂದ್ರ ತೆಲಂಗ್ ಭಾಲ್ಕಿ, ಪ್ರಕಾಶ್ ಈಡಗಾರ ಬಾವಗಿ, ಯಾದವರಾವ್, ದಿಲೀಪ್ ಗೌಡ, ಶಂಕರರಾವ್ ತೆಲಂಗ್, ಅಶೋಕ್ ಬಾವಗೆ, ಸಿದ್ರಾಮ ಟೇಲರ್, ರಾಜಕುಮಾರ ಜ್ಯಾಂತಿಕರ್, ಚೀನು ಚಿಟಗುಪ್ಪ, ಹರಿಶ್ ಬಾವಗಿ, ಶಿವಕುಮಾರ ಗೌಡ ಮತ್ತಿತರರು ಇದ್ದರು.
Subscribe to get the latest posts sent to your email.