Popular Posts

ನೂತನ ಅನುಭವ ಮಂಟಪದಿAದ ಬಸವಕಲ್ಯಾಣಕ್ಕೆ ವಿಶ್ವಖ್ಯಾತಿ _ ಈಶ್ವರಖಂಡ್ರೆ

ಭಾಲ್ಕಿ: ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪದಿAದ ಬಸವಕಲ್ಯಾಣ ವಿಶ್ವಖ್ಯಾತಿ ಪಡೆಯುವುದರಲ್ಲಿ ಸಂಶಯವೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ತಾಲೂಕಿನ ಮೊರಂಬಿ ಗ್ರಾಮದಲ್ಲಿ ನಂದೀಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಆಯೋಜಿಸಿದ್ದ ಬಸವ ಉತ್ಸವ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. 12ನೇ ಶತಮಾನ ಹಾಗು 21ನೇ ಶತಮಾನಗಳಿಗೆ ಸಾಮ್ಯತೆ ಕಂಡು ಬರುತ್ತಿದೆ. ಅಂದು ಬಸವಾದಿ ಶರಣರ 770 ಅಮರ ಗಣಂಗಳು ಸೇರಿಕೊಂಡು ರಚಿಸಿದ ಅನುಭವ ಮಂಟಪ ಇಂದು ನೂತನವಾಗಿ ನಿರ್ಮಾಣಗೊಂಡು ಜಗತ್ತಿನಲ್ಲಿಯೇ ಖ್ಯಾತಿ ಪಡೆಯುವ ಕಾಲಘಟ್ಟದಲ್ಲಿದೆ. ಮೊರಂಬಿ ಗ್ರಾಮದ ಯುವಕರು ಪ್ರತಿ ವರ್ಷ ಬಸವ ಉತ್ಸವ ಆಚರಿಸುವ ಮೂಲಕ ಗ್ರಾಮದಲ್ಲಿ ಶಾಂತಿ ಸಾಮರಸ್ಯ ಕಾಪಾಡಿಕೊಂಡು ಬರುತ್ತಿರುವುದು ಉತ್ತಮ ಸಂಗತಿಯಾಗಿದೆ ಎಂದು ಹೇಳಿದರು.
ಸಾನಿಧ್ಯವಹಿಸಿ ಮಾತನಾಡಿದ ಮುಚಳೊಂಬಿಯ ನಾಗಭೂಷಣ ಶಿವಯೋಗಿ ಮಠದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು, ಬಸವಾದಿ ಶರಣರ ಹಾದಿಯಲ್ಲಿ ನಡೆದರೆ ನೆಮ್ಮದಿ ಜೀವನ ಸಾಗಿಸಬಹುದು ಎಂದು ಹೇಳಿದರು. ಅವಿನಾಶ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಶರಥರಾವ ಅನವಾಲೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಾಗೇಂದ್ರಪ್ಪ ದಸಪಳ್ಳೆ, ಮುಖ್ತಾರ ಪಟೇಲ, ವಿಜಯಕುಮಾರ ವಾರದ ವಿಶ್ವನಾಥಯ್ಯಾ ಮಠಪತಿ, ಅಶೋಕರಾವ ಜಾಧವ, ರಾಮಣ್ಣಾ ನಾವುದಗೆ, ಬಸವರಾಜ ಶೆಟೆಪ್ಪ, ಶಶಿಕಾಂತ ದಶರಥರಾವ ಪಾಟೀಲ, ಬಾಬುರಾವ ಮೇತ್ರೆ, ಅಜಮ ಷಾ, ಭಿಮಣ್ಣಾ ಜಮಾದಾರ, ಶರಣಪ್ಪ ಕರಂಜೆ, ರಂಜೀತಾ ಜೀತೇಂದ್ರ ಉಚ್ಚೇಕರ, ಪರಮೇಶ್ವರ ದೇವಣೆ, ವಿರಪಣ್ಣ ಆಳ್ಳೆ, ಷನ್ಮುಖಪ್ಪ ಉಚ್ಚೇಕರ, ಕಂಟೆಪ್ಪ ಮೆಳಕುಂದೆ, ಶಿವಪ್ಪ ಹೂಗಾರ, ನಾಗೇಂದ್ರ ಕಾಂಬಳೆ, ವರ್ಷ ಉಚ್ಚೇಕರ, ಕಲ್ಯಾಣಿ ಬಸವರಾಜ ಆಳ್ಳೆ, ಪದ್ಮಾವತಿ ಆಳ್ಳೆ, ಶೋಭಾಬಾಯಿ ಹಲ್ಲಾಳೆ, ನಾಗಶೆಟ್ಟೆಪ್ಪ ಹುಸಲೂರೆ, ಶಿವರಾಜ ತುಕಾರಾಮ ಮೇತ್ರೆ, ಸುಮೀತ ಆಳ್ಳೆ ಉಪಸ್ಥಿತರಿದ್ದರು. ಬೇಬಾವತಿ ಡಿಗ್ಗಿ, ದಿನೆಶ, ಸಿದ್ದಲಿಂಗ ನೇತೆ, ಗುರಲಿಂಗಯ್ಯಾ ಸ್ವಾಮಿಯವರಿಂದ ಶಾಸ್ತಿçÃಯ ಸಂಗೀತ ನಡೆಯಿತು. ರಂಜೀತಾ ಜೀತೇಂದ್ರ ಸ್ವಾಗತಿಸಿದರು. ಶರಣಪ್ಪ ಕಾರಂಜೆ ನಿರೂಪಿಸಿದರು. ಸುಮಿತ ವಂದಿಸಿದರು.
ಚಿತ್ರ 11ಬಿಎಲ್‌ಕೆ4
ಭಾಲ್ಕಿ: ತಾಲೂಕಿನ ಮೊರಂಬಿ ಗ್ರಾಮದಲ್ಲಿ ನಂದೀ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ನಡೆದ ಬಸವ ಉತ್ಸವ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟಿçÃಯ ಅಧ್ಯಕ್ಷರಾದ ಸಚಿವ ಈಶ್ವರ ಖಂಡ್ರೆಯವರಿಗೆ ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!