Popular Posts

ಮಾಸ್ಟರ್ಸ್ ನ್ಯಾಷನಲ್ ಗೇಮ್ಸ್ ಟೇಬಲ್ ಟೆನಿಸ್‌ನಲ್ಲಿ ಬೀದರ್ ಕ್ರೀಡಾಪಟುಗಳ ಸಾಧನೆ

ಪುಣೆಯಲ್ಲಿ ನಡೆದ ಮಾಸ್ಟರ್ಸ್ ನ್ಯಾಷನಲ್ ಗೇಮ್ಸ್ (Table Tennis) ಪಂದ್ಯಾವಳಿಯಲ್ಲಿ ಬೀದರ್ ಜಿಲ್ಲೆಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಬೀದರ್‌ನ ಶ್ರೀನಿವಾಸ ಗಾದಗಿ, ನರೇಶ್ ಇ.ಎಸ್., ಸಂದೀಪ್ ಹಾಗೂ ವೀರೇಶ್ ವಡ್ಡಿ ಅವರು ಭಾಗವಹಿಸಿದ್ದರು.
ಶ್ರೀನಿವಾಸ ಗಾದಗಿ ಅವರು ಮಿಕ್ಸ್ ಡಬಲ್ಸ್ ವಿಭಾಗದಲ್ಲಿ ಬಂಗಾರದ ಪದಕ ಹಾಗೂ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಇದಲ್ಲದೆ, ಪುರುಷರ ಡಬಲ್ಸ್ ವಿಭಾಗದಲ್ಲಿ ವೀರೇಶ್ ವಡ್ಡಿ ಮತ್ತು ಸಂದೀಪ್ ಅವರು ಚಿನ್ನದ ಪದಕ ಗೆದ್ದು ಮತ್ತೊಂದು ದೊಡ್ಡ ಸಾಧನೆ ಮಾಡಿದರು.
ಶ್ರೀನಿವಾಸ ಗಾದಗಿ ಮತ್ತು ನರೇಶ್ ಇ.ಎಸ್. ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿ ಬೀದರ್ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್‌ಗೆ ಗೌರವ ತಂದಿದ್ದಾರೆ.

ಈ ಐತಿಹಾಸಿಕ ಸಾಧನೆಗೆ ಅಸೋಸಿಯೇಷನ್ ಪದಾಧಿಕಾರಿಗಳಾದ ಶ್ರೀ ಚಂದ್ರಕಾಂತ್ ಅಪ್ಪಾಜಿ, ಸುನೀಲ್ ಮೊಟ್ಟಿ, ವಿಜಯಕುಮಾರ್ ಜಾಧವ, ಸುರೇಶ್ ಹಳೇಂಬರ್, ಶಿವಕುಮಾರ ಅಷ್ಟೂರೆ, ವಸಂತ ಕುಲಕರ್ಣಿ, ವಿಜಯಕುಮಾರ್ ಸೋನಾಳೆ ಹಾಗೂ ದೇವರಾಜ್ ದೇವಕಟ್ಟೆ ಅವರು ಕ್ರೀಡಾಪಟುಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading