1
1

ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾನೇನು ಸಮಾಜಕ್ಕೆ ಕೊಡಬಲ್ಲೆ ಎನ್ನುವ ರೀತಿಯಲ್ಲಿ 40 ವರ್ಷಗಳ ಕಾಲ ದಣಿವರಿಯದ ರೀತಿಯಲ್ಲಿ ಫಲವಂತಿಕೆಯಿಂದ, ನಿಸ್ವಾರ್ಥ ದಿಂದ ದುಡಿಯುವ ಡಾ ಶಿವಶಂಕರ ಟೋಕರೆ ಜಿಲ್ಲೆಯ ಜನಾನುರಾಗಿ ಎಂದು ಪೆÇ್ರ. ಸಿದ್ದು ಯಾಪಲಪರವಿ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಚನ ಸಮೂಹ ಸಂಸ್ಥೆ ಸಹಯೋಗದೊಂದಿಗೆ ಗಾಂಧಿಗಂಜನ ಶುಭಂ ಕಲ್ಯಾಣ ಮಂಟಪದಲ್ಲಿ ಡಾ ಶಿವಶಂಕರ ಟೋಕರೆ ಅವರ ನಾಗರೀಕ ಸನ್ಮಾನ ಸಮಾರಂಭದಲ್ಲಿ ಸಸಿಗೆ ನೀರೆರೆದು ಬೆಂಗಳೂರು ವಿಭಾಗದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ವೈಜಗೊಂಡ ಮಾತನಾಡಿ ಶಿವಶಂಕರ ಟೋಕರೆ ನಮ್ಮ ಮಧ್ಯೆದಲ್ಲಿರುವ ಅಪರೂಪದ ಕೌಶಲ್ಯವಂತರು. ಅವರು ಮಾಡಿರುವ ಕೆಲಸಗಳ ಪಟ್ಟಿ ಹೇಳುತ್ತ ಹೋದರೆ ದಿನಗಳು ಸಾಕಾಗೊಲ್ಲ. ಅವರ ಕಾಳಜಿ ಅಪಾರ, ಇಡೀ ಇಲಾಖೆ ಅವರ ಸೇವೆ ನೆನೆಸುತ್ತದೆ. ಅವರು ಸೀಮಿತ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಬಸವ ಕನ್ನಡ ಕೌಶಲ್ಯ ಕ್ಕಾಗಿ ದುಡಿಯುವ ಜನಾನುರಾಗಿ.
ಇಡೀ ಜಿಲ್ಲೆಯ ಐಟಿಐಗಳಿಗೆ ಕಾಯಕಲ್ಪ ನೀಡಿದ್ದಾರೆ. ಅವರು ಎಂದೂ ಯಾವತ್ತೂ ಸರಕಾರಿ ಅನುದಾನ ಅನುದಾನ ರಹಿತ ಐಟಿಐ ಎಂಬ ಭೇದ ಮಾಡಿಲ್ಲ. ಎಲ್ಲ ಕುಶಲಕರ್ಮಿಗಳ ಕ್ಷೇಮಾಭಿವೃದ್ಧಿಗಾಗಿ ಕ್ಯಾಂಪಸ್ ಹುಟ್ಟು ಹಾಕಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇವರ ಕ್ಷಮತೆ, ಸೇವಾ ಮನೋಭಾವನೆ, ಕರ್ತವ್ಯ ನಿμÉ್ಠ ಅಪಾರ, ತನ್ನ 39 ವರ್ಷಗಳ ಸೇವಾ ಅವಧಿಯಲ್ಲಿ ರಜೆ ಹಾಕದೆ 16 ಗಂಟೆಗಳ ಕಾಲ ದುಡಿದ ಅಪ್ಪಟ ಬಸವ ಅನಭಾವಿ. ಒಂದೆಡೆ ಸಂಪನ್ನೂಲ ವ್ಯಕ್ತಿಯಾಗಿ, ಸಂಘಟಕರಾಗಿ, ಸೇವಾ ದುಂದುಭಿಗಳಾಗಿ ಅನೇಕ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ. ಇಂದು ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ ಮೈಸೂರುದಿಂದ ಶಿವಶಂಕರ ಟೋಕರೆ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿದ್ದು ಸಂತಸ. ಅದು ನಮಗೆ ಸಿಕ್ಕಷ್ಟು ಖುಷಿಯಾಗಿದೆ. ಅವರ ಜೀವ ಮಾನದ ಸಾಧನೆ ಇಡೀ ಇಲಾಖೆಗೆ ಮಾದರಿಯಾಗಿದೆ ಎಂದರು.
ಅಭಿನಂದನ ನುಡಿ ಮಾತನಾಡಿದ ಪೆÇ್ರ ಸಿದ್ದು ಯಾಪಲಪರವಿ ಗದಗ ಡಾ ಶಿವಶಂಕರ ಟೋಕರೆ ಪಾದರಸದ ವ್ಯಕ್ತಿತ್ವ ಉಳ್ಳವರು, 63ನೇ ವಯಸ್ಸಿನಲ್ಲೂ ಯುವಕರು ನಾಚುವಂತೆ ಕೆಲಸ ಮಾಡುತ್ತ ಎಲ್ಲರ ಗಮನ ಸೆಳೆದವರು. ಪೂಜ್ಯರ, ಮುತ್ಸದ್ದಿಗಳ, ಒಡನಾಡಿ ಗಳ, ಆಪ್ತ ಮಿತ್ರರ, ಸಂಗಾತಿ ಹಾಗೂ ಪತ್ರ ಕರ್ತರ ಆದಿಯಾಗಿ ಜನ್ಮದಿನ, ಮದುವೆ ಸಂಭ್ರಮಾಚರಣೆ, ನಿವೃತ್ತಿ, ಪ್ರಶಸ್ತಿ, ಸಾಧನೆ ಬಗೆ ಕವನ ಬರೆದು ಎಲ್ಲರೂ ಆಶ್ಚರ್ಯ ಪಡುವ ದಿಶೆಯಲ್ಲಿ ವಿವರಣೆಯಿಂದ, ನಿರಪೇಕ್ಷ ದಿಂದ ಬರೆದು ಪೆÇೀಸ್ಟ ಮಾಡುವ ಕವಿ ಹೃದಯವಂತರು. ನಾಲ್ಕು ಗ್ರಂಥ ಬರೆದುದಲ್ಲದೆ ಅನೇಕ ಸಂಘಟನೆಯ ಜೊತೆಗೆ ಬಾಂಧವ್ಯ ಇಟ್ಟು ಕೊಂಡವರು. ಅವರ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಕೊಟ್ಟಿರುವುದು ನಮಗಂತು ಎಲ್ಲಿಲ್ಲದ ಅನಂದ ವಾಗಿದೆ, ಅವರ ಈ ಎರಡನೇ ಅವಧಿಯ ಕಾರ್ಯ ಮೆಚ್ಚುವಂಥದ್ದಾಗಿದೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಚನ ಸಮೂಹ ಸಂಸ್ಥೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆಂದರು.ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಬೆಂಗಳೂರಿನ ಎನ್ ಪ್ರಭಾಕರ ಕಾರ್ಯದರ್ಶಿ ಡಾ ಅಬ್ದುಲ್ ಖದೀರ, ಬಾಬು ವಾಲಿ, ರಾಜೇಂದ್ರ ಕುಮಾರ ಗಂದಗೆ, ಸುನೀತಾ ದಾಡಗೆ,ರಮೇಶ ಪಾಟೀಲ ಸೋಲಪೂರ,ಬಿ.ಜಿ.ಶೆಟಕಾರ, ಮಾರುತಿ ಬೌದ್ಧೆ, ಆನಂದ ದೇವಪ್ಪ, ಡಾ ರಜನೀಶ ವಾಲಿ, ಸೋಮಶೇಖರ ಪಾಟೀಲ, ಸೋಮಶೇಖರ ಚಿದ್ರಿ ಸಹ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಡಾ ಶಿವಾನಂದ ಮಹಾ ಸ್ವಾಮಿಗಳು ಮಾತನಾಡಿ.. ಶಿವಶಂಕರ ಟೋಕರೆ ಎಲ್ಲ ಕ್ಷೇತ್ರ ಬಲ್ಲವರಾಗಿದ್ದಾರೆ, ಅವರು ಎಲ್ಲ ಕಡೆ ನಿರೂಪಣೆ, ಪ್ರಶಸ್ತಿ ಪತ್ರ ಬರೆದು ಇತಿಹಾಸ ಮಾಡಿದ್ದಾರೆ. ಬಸವ ಕನ್ನಡ ತಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದ್ದಕ್ಕೆ ಅವರ ಇಂದಿನ ಜನ ಸಾಗರವೇ ಸಾಕ್ಷಿಯಾಗಿದೆ. ಈ ಹೌಸ್ ಫುಲ್ಲ ಕಾರ್ಯ ಗಮನಿಸಿದರೆ ನಿಸ್ವಾರ್ಥ ಸೇವಕನಿಗೆ ಸಿಕ್ಕ ಗೌರವ ಇದಾಗಿದೆ. ನಾನು ಮುಕ್ತ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದರು. ಸಾನಿಧ್ಯ ವಹಿಸಿದ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿ.. ಶಿವಶಂಕರ ಟೋಕರೆ ಅವರ ಸಾಧನೆ ಅಪ್ರತಿಮ. ಐಟಿಐ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸ ಇಡೀ ರಾಜ್ಯವೇ ಕೊಂಡಾಡುತ್ತಿದೆ. ರಾಜ್ಯ ಮಟ್ಟದ ಅನೇಕ ಪ್ರಶಸ್ತಿ ಇವರನ್ನು ಹುಡುಕಿಗೊಂಡು ಬಂದಿರುವುದು ಒಂದು ಇತಿಹಾಸ
ಸರ್ವೋತ್ತಮ ಪ್ರಶಸ್ತಿ, ಮುಖ್ಯ ಮಂತ್ರಿ ಪ್ರಶಸ್ತಿ, ಹಳಕಟ್ಟಿ ಪ್ರಶಸ್ತಿ ಬಂದಿವೆ.ಇನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಕೊಟ್ಟು ಗೌರವ ನೀಡಿದ್ದಂತು ಒಂದು ಒಳ್ಳೆಯ ಪರಂಪರೆಗೆ ನಾಂದಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ವಹಿಸಿದರು. ಬಸವಕೇಂದ್ರದ ಅಧ್ಯಕ್ಷರಾದ ಶರಣಪ್ಪ ಮಿಠಾರೆಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಕೇಂದ್ರ ಬಿಂದುಗಳಾದ ಡಾ. ಶಿವಶಂಕರ ಟೋಕರೆ ಎಲ್ಲರನ್ನು ಮನ: ಪೂರ್ವಕವಾಗಿ ಕೃತಜ್ಞತೆಯಿಂದ ನಮನ ಸಲ್ಲಿಸಿ, ತನ್ನ ಗೌರವ ಡಾಕ್ಟರೇಟ್ ಪದವಿ ಜಿಲ್ಲೆಯ ಬಸವ ಕನ್ನಡ ಕೌಶಲ್ಯ ಮನಸ್ಸುಗಳ ಅಭಿಮಾನದ ಪ್ರತೀಕ ಎಂದರು. ಸಿದ್ರಾಮ ಸೀತಾ ಸ್ವಾಗತಿಸಿದರೆ, ಪೆÇ್ರ.ಕರಣ ನಿರೂಪಿಸಿದರೆ, ಶರಣಬಸಪ್ಪ ಚೆಲುವಾ ವಂದಿಸಿದರೆ, ಅಶ್ವಿನಿ ರಾಜಕುಮಾರ ಸ್ವಾಮಿ ವಚನ ಗಾಯನ ಹಾಡಿದರೆ, ಅಮೂಲ್ಯ ಶಿವಲಿಂಗ ಹೇಡೆ ವಚನ ನೃತ್ಯ ಮಾಡಿದರು.
ಇದೇ ಸಂದರ್ಭದಲ್ಲಿ ಕ.ಲೋ.ಸೇ.ಆಯೋಗದಿಂದ ವಿವಿಧ ಸರಕಾರಿ ಐಟಿಐಗಳಲ್ಲಿ ಹೊಸದಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ 25 ಕಿರಿಯ ತರಬೇತಿ ಅಧಿಕಾರಿಗಳಿಗೆ ಮೊದಲು ಮಹಾ ವೇದಿಕೆ ಮೇಲೆ ಕೌಶಲ್ಯ ಸಿರಿ ಪ್ರಶಸ್ತಿ ನೀಡಿದ ತದನಂತರ ಶಿವಶಂಕರ ಟೋಕರೆ ಅವರಿಗೆ ಜಿಲ್ಲೆಯ ಎಪ್ಪತ್ತು ಸಂಘನೆಯ ಪ್ರಮುಖರು, ವಿವಿಧ ಶರಣ ಸಮಾಜದ ಅಧ್ಯಕ್ಷರು ಸೇರಿದಂತೆ ಸುಮಾರು ಮೂರುವರೆ ಗಂಟೆಗಳ ಕಾಲ ನಿರಂತರವಾಗಿ ಅವರ ಸನ್ಮಾನ ಕಾರ್ಯಕ್ರಮ ಗಮನಿಸಿದ ಜನಸ್ತೋಮಕ್ಕೆ ಅಚ್ಚರಯನ್ನುಂಟು ಮಾಡಿತು. ಎಲ್ಲರು ಅಭಿನಂದನಾ ಸಮಾರಂಭದ ಸಂಭ್ರಮಾಚರಣೆಗೆ ಸಾಕ್ಷಿಯಾದರು.