Popular Posts

ಕಲಬುರಗಿಯಲ್ಲಿ ಮಾರ್ಚ್ 1 ರಿಂದ 8 ರವರೆಗೆ ಇಂಟರ್ ನ್ಯಾಷನಲ್ ಮಹಿಳಾ ಐ.ಟಿ.ಎಫ್ 2026 ರ ಪಂದ್ಯಾವಳಿ

ಕಲಬುರಗಿ, ಫೆಬ್ರವರಿ.20.-ಕಲಬುರಗಿ ನಗರದ ಚಂದ್ರಶೇಖರ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಇಂಟರ್ ನ್ಯಾಷನಲ್ ಮಹಿಳಾ ಐ.ಟಿ.ಎಫ್. 2026ರ ಪಂದ್ಯಾವಳಿಯನ್ನು ಮಾರ್ಚ್ 1 ರಿಂದ 8 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದರು.
ಈ ಕುರಿತಂತೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಬಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಇದೇ ಮೊದಲ ಬಾರಿಗೆ ಇಂಟರ್ ನ್ಯಾಷನಲ್ ಮಹಿಳಾ ಐ.ಟಿ.ಎಫ್ 2026 ರ ಪಂದ್ಯಾವಳಿ ಹಮ್ಮಿಕೊಳ್ಳಲಾಗುತ್ತಿದ್ದು, ಆಯೋಜನೆಗೆ ಸಂಬಂಧಿಸಿದಂತೆ ಹಾಗೂ ಯಶಸ್ವಿಯಾಗಿ ಆಯೋಜಿಸಲು ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಮಹಿಳಾ ಕ್ರೀಡಾಕೂಟ ಆಗಿರುವ ಕಾರಣಕ್ಕೆ ಹೆಚ್ಚಿನ ಭದ್ರತೆ ಇರಬೇಕು. ಯಾವುದೇ ಅವಘಡಗಳಾಗದಂತೆ ನೋಡಿಕೊಳ್ಳಬೇಕು. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ವಸತಿ ವ್ಯವಸ್ಥೆ ಚೆನ್ನಾಗಿ ಮಾಡಬೇಕು, ಅಲ್ಲಿ ಸಹ ಯಾರಿಗೂ ಯಾವುದೇ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿದಿನ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜಿಸಿ ಸಂಪೂರ್ಣ ದಿನದ ಅವರ ಜವಬ್ದಾರಿವಹಿಸಿಕೊಳ್ಳಬೇಕು. ಕಲಬುರಗಿಯಲ್ಲಿ ಮೊದಲ ಬಾರಿಗೆ ಮಹಿಳಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದ್ದು, ಸ್ಥಳೀಯ ಮಹಿಳಾ ಆಟಗಾರರಿಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ.
ಕಳೆದ ವರ್ಷದ ಲೆಕ್ಕಚಾರ ಪರಿಶೀಲಿಸಿ, ಈ ವರ್ಷ ಕಲಬುರಗಿ ನೆಕ್ಸ್ಟ್ ಅಡಿಯಲ್ಲಿ ಆಯೋಜಿಸಲಾಗುವುದು, ಅಗತ್ಯ ಅನುದಾನದ ಜೊತೆಗೆ ಸ್ಥಳೀಯ ದಾನಿಗಳ ಮುಖಾಂತರ ಕೊಡುಗೆಗಳನ್ನು ಪಡೆಯಬಹುದಾಗಿದೆ.
ಬ್ರಾಂಡಿಂಗ್ ಬಗ್ಗೆ ಯೋಜಿಸಿ, ಪ್ರಯೋಜಕರನ್ನು ಹುಡುಕಬೇಕು, ಎಷ್ಟು ಆಟಗಾರರು ನಮ್ಮ ದೇಶದವರು ಹಾಗೂ ಹೊರ ದೇಶದವರು ಎಂದು ಗುರುತಿಸಿ ಊಟದ ಮೆನು ಸಿದ್ದಪಡಿಸಬೇಕು.
ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿಗಾ ಇರಲಿ, ಆಟಗಾರರು ಅಥವಾ ಯಾರೇ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಸ್ಥಳದಲ್ಲಿ ವೈದ್ಯಕೀಯ ತಂಡಗಳೊಂದಿಗೆ ಆಂಬುಲೆನ್ಸ್ ಸಹ ಇರಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಅವಿನಾಶ್ ಶಿಂಧೆ, ಸಹಾಯಕ ಆಯುಕ್ತರಾದ ಸಾಹಿತ್ಯ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading