1
1

ಬೀದರ್: ರಂಗಭೂಮಿ ತರಬೇತಿಯಿಂದ ಯುವಜನರಲ್ಲಿ ವ್ಯಕ್ತಿತ್ವ ವಿಕಸ ಸಾಧ್ಯವಾಗಲಿದೆ ಎಂದು ಕರ್ನಾಟಕ ರಾಷ್ಟಿçÃಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ ಪಾಟೀಲ ತಿಳಿಸಿದರು.
ಮಂಗಳವಾರ ನಗರದ ಕರ್ನಾಟಕ ಕಾಲೇಜಿನಲ್ಲಿ ರಾಷ್ಟಿçÃಯ ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಸಂಘ ಹಾಗೂ ಕರ್ನಾಟಕ ಕಾಲೇಜಿನ ಸಾಂಸ್ಕೃತಿಕ ಸಮಿತಿಗಳ ಸಹಯೋಗದಲ್ಲಿ ಜರುಗಿದ ಒಂದು ತಿಂಗಳ ರ‍್ಯಂತದ ರಂಗಭೂಮಿ ಕಾರ್ಯಾಗಾರ ಮತ್ತು ನಾಟಕ ನಿರ್ಮಾಣ ಶಿಬಿರ ಉದ್ಘಾಟಿಸಿ ಮಾತನಾಡಿರುವ ಅವರು, ಇದರಿಂದ ಆತ್ಮ ವಿಶ್ವಾಸ ಸಹ ಹೆಚ್ಚಾಗಲಿದ್ದು, ನಾಚುವ ಸ್ವಭಾವ, ನಿರ್ಭಯ ಭಾವ, ಸಂದರ್ಶನ, ವಿಚಾರ ಸಂಕಿರಣ ಆಯೋಜನಾ ಶಕ್ರಿ, ಭಾಷಣ ಕೌಶಲ್ಯ ವೃದ್ಧಿಯಾಗಿ ಪ್ರಬುದ್ಧ ರಂಗಕರ್ಮಿಯಾಗಿ ಹೊರಹೊಮ್ಮಬಹುದಾಗಿದೆ ಎಂದರು.
ರAಗಭೂಮಿ ತರಬೇತಿಯಿಂದ ಸಂವಹನ ಕೌಶಲ್ಯ ಹಾಗೂ ಸೃಜನಶೀಲತೆ ವಿಕಾಸಗೊಂಡು ಮಾತನಾಡುವ ಕಲೆ, ನಡುವಳಿಕೆ, ಕಣ್ಣಿನಿಂದ ನೋಡುವ ಮುಖೇನ ಭಾವನೆ ವ್ಯಕ್ತಪಡಿಸುವ ಪರಿ ಕಲಿಸುತ್ತದೆ. ಓರ್ವ ಬರಹಗಾರ, ನಟ, ಸಹಾಯಕ, ಬೆಳಕಿನವ, ಓರ್ವ ಪಾತ್ರ ನಿರ್ಮಿಸುವ, ನಿರ್ದೇಶಿಸುವವನ ಜವಾಬ್ದಾರಿ ಎನೆಂಬುದು ನಿರ್ಧರಿಸುತ್ತದೆ. ನಾಟಕ ಎಂದಾಕ್ಷಣ ಬರಿ ಡೈಲಾಗ ಹೇಳುವ ವೇದಿಕೆಯಲ್ಲ, ಅದು ನಮಗೆ ನಿಜವಾದ ಜೀವನ ಅರ್ಥ ಮಾಡಿಸುವ ಶಾಲೆ ಎಂದು ಪಾಟೀಲ ಅಭಿಪ್ರಾಯ ಪಟ್ಟರು.
ದೆಹಲಿ ವೆಂಕಟೇಶ್ವರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಉಮಾಕಾಂತ ಪಾಟೀಲ ಮಾತನಾಡಿ, ರಂಗಭೂಮಿ ಶಿಬಿರದಿಂದ ಭಾವನಾತ್ಮಕ ಬೆಳವಣಿಗೆ ಹಾಗೂ ಒತ್ತಡ ನಿವಾರಣೆಗೆ ಪೂರಕವಾಗಲಿದೆ. ನಾಟಕದಲ್ಲಿ ಬಡವನಿದ್ದವ ಶ್ರೀಮಂತನಾಗುತ್ತಾನೆ, ರಾಜನಾಗುತ್ತಾನೆ. ಇದು ಬೇರೆಯವರ ಪಾತ್ರದಲ್ಲಿ ಬದುಕಿ ನೋಡುವ ಸೌಭಾಗ್ಯ ತಂದು ಕೊಡುತ್ತದೆ. ಇದರಿಂದ ಸಾಹಾನುಭೂತಿ ಮೂಡುತ್ತದೆ. ದುಖವನ್ನು ಅಭಿನಯಿಸುವ ಮೂಲಕ ಅದನ್ನು ಹೊರ ಹಾಕುವ ಅವಕಾಶ ದೊರಕುತ್ತದೆ. ಮೊಬೈಲ್ ಗೇಮ್ ಮರೆತು ನೈಜವಾಗಿ ಮನುಷ್ಯರ ಜೊತೆ ಆಟ ಆಡಲು ಅವಕಾಶ ಕರುಣಿಸುತ್ತದೆ. ನಗುವ ಪಾತ್ರ ಮಾಡುವ ಮೂಲಕ ಮಾನಸಿಕ ಆರೋಗ್ಯ ವೃದ್ಧಿಗೂ ಇದರಿಂದ ಸಹಾಯಕವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ರಾಷ್ಟಿçÃಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಮಾತನಾಡಿ, ೬೦ ವರ್ಷಗಳ ಇತಿಹಾಸದಲ್ಲಿಯೇ ರಾಷ್ಟಿçÃಯ ನಾಟಕ ಶಾಲೆಯು ರಂಗಭೂಮಿ ಶಿಬಿರ ಬೀದರ್‌ನಲ್ಲಿ ಪ್ರಪ್ರಥಮವಾಗಿ ಆಯೋಜಿಸುತ್ತಿರುವುದು ಬೀದರ್ ಜನತೆಗೆ ಸಂತಸ ತಂದಿದೆ. ಈ ಶಿಬಿರವು ನಮ್ಮ ಜನಪದ ಕಲೆಗಳಿಗೆ ಹೊಸ ಚೈತನ್ಯ ನೀಡುತ್ತದೆ. ಇಲ್ಲಿಯ ಶಿಬಿರಾರ್ಥಿಗಳು ಸಮಾಜದಲ್ಲಿ ಸತ್ಪçಜೆಗಳಾಗಿ ಹೊರ ಹೊಮ್ಮಲು ಇದರಿಂದ ಸಹಾಯಕವಾಗಲಿದೆ ಎಂದರು.
ಶಿಬಿರದ ನಿರ್ದೇಶಕ ಮಹೇಶ ಪಾಟೀಲ ಮಾತನಾಡಿ, ಪುಸ್ತಕದಿಂದ ಜ್ಞಾನ ಪಡೆಯಬಹುದು. ಆದರೆ ರಂಗಭೂಮಿ ಶಿಬಿರದಿಂದ ಅನುಭಾವ ದೊರಕುತ್ತದೆ. ಇದು ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿ ಮಾಡುತ್ತದೆ. ವೇದಿಕೆ ಮೇಲೆ ಶಿಬಿರಾರ್ಥಿಗಳು ಒಮ್ಮೆ ಕಾಲಿಟ್ಟರೆ ಸಾಕು, ಮಾತನಾಡುವ ಶೈಲಿ, ಯೋಚಿಸುವ ಭಾವ ಎಲ್ಲವೂ ತನ್ನಿಂದ ತಾನೇ ಬದಲಾಗುತ್ತದೆ. ರಂಗಭೂಮಿ ಕಲೆ ಪದವಿ ನೀಡುವುದಿಲ್ಲ ಬದಲಿಗೆ ಜೀವನದ ನೈಜ ಪದವಿ ದಯಪಾಲಿಸುತ್ತದೆ. ಕಲಾವಿದರಲ್ಲಿ ನೈಪುಣ್ಯತೆ ವೃದ್ಧಿಯಾಗಲು ಶಿಬಿರ ಅತ್ಯಂತ ಪೂರಕ ಎಂದು ಪ್ರತಿಪಾದಿಸಿದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ.ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಸಿನಿಮೆಯ ಕಾಲದಲ್ಲಿ ಬದುಕುತ್ತಿರುವ ನಾವು ರೀಲ್‌ಗಲೀಗೆ ಮಾರು ಹೋಗಿ ರಿಯಲ್ ಲೈಫ್‌ಗೆ ಎಳ್ಳು ನೀರು ಬಿಟ್ಟಿಕೊಳ್ಳುತ್ತಿದ್ದೇವೆ. ಇದರಿಂದ ಅಹಂಕಾರಕ್ಕೆ ಇಂಬು ದೊರೆಯುತ್ತಿದೆ. ಇವನ್ನು ಸರಿದೂಗಿಸಲು ರಂಗಭೂಮಿ ದಿವ್ಯ ಔಷಧವೆಂದರೂ ತಪ್ಪಾಗಲಾರದು. ಶಿಬಿರಾರ್ಥಿಗಳು ಒಮ್ಮೆ ಪ್ರೇಕ್ಷಕರ ಮುಂದೆ ಪಾತ್ರಧಾರಿಗಳ ರೂಪದಲ್ಲಿ ಜೀವಂತವಾಗಿ ಕಾಣಿಸಿಕೊಂಡರೆ ಅವರ ಭಾವನಾಶೈಲಿ ವಿಶಾಲಗೊಂಡು ಸಮಾಜದಲ್ಲಿ ಗೌರವ ದೊರಕಲು ಸಾಧ್ಯವಾಗಲಿದೆ ಎಂದವರು ಹೇಳಿದರು. ಕೆ.ಆರ್.ಇ ಸಂಸ್ಥೆಯ ಅಡಳಿತಾಧಿಕಾರಿ ಅನಿಲಕುಮಾರ ಅಣದುರೆ ಹಾಗೂ ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಸೋಮನಾಥ ಬಿರಾದಾರ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಕರ್ನಾಟಕ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಯೋಜಕಿ ರಜನಿ ಸತಾನೆ ಸ್ವಾಗತಿಸಿ, ಕಾಲೇಜು ವಿದ್ಯಾರ್ಥಿ ಪೀಟರ್ ಕಾರ್ಯಕ್ರಮ ನಿರೂಪಿಸಿ, ಕರ್ನಾಟಕ ಸಾಹಿತ್ಯ ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು.
Subscribe to get the latest posts sent to your email.