Popular Posts

ಮರಾಠಿ, ತೆಲುಗು, ಹಿಂದಿ ಭಾಷಾ ಪರಿಣಿತರಿಂದ ಭಾಷಾಂತರಕಾರರ ಹುದ್ದೆಗೆ ಅರ್ಜಿ ಆಹ್ವಾನ

ಬೀದರ್, ಆಗಸ್ಟ್ 12 (ಕಕ ವಾರ್ತೆ): ಪೋಕ್ಸೋ ಬಾಧಿತ ಮಗುವಿನ ಮತ್ತು ಕುಟುಂಬದ ಹೇಳಿಕೆಗಳನ್ನು ಪಡೆಯಲು ಮರಾಠಿ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಪರಿಣಿತರಾದವರಿಂದ ಭಾಷಾಂತರಕಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಪೋಕ್ಸೋ ಬಾಧಿತ ಮಗು ಮತ್ತು ಕುಟುಂಬದ ಸಾಕ್ಷ್ಯಗಳನ್ನು ದಾಖಲಿಸುವಾಗ ಹಾಗೂ ಅವರ ಹೇಳಿಕೆಗಳನ್ನು ಪಡೆದುಕೊಳ್ಳಲು ಮರಾಠಿ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಪರಿಣಿತರಾದ ಮೂವರು ಭಾಷಾಂತರಕಾರರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. ಪೋಕ್ಸೋ ಪ್ರಕರಣಗಳಡಿ ಸಾಕ್ಷ್ಯಗಳನ್ನು ದಾಖಲಿಸುವಾಗ ಈ ಭಾಷೆಗಳನ್ನು ಭಾಷಾಂತರಿಸಲು ಪರಿಣಿತ ಹೊಂದಿದವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಈ ಭಾಷೆಗಳಲ್ಲಿ ಪದವೀಧರರಾಗಿರಬೇಕು ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಆಸಕ್ತರು 2026ರ ಆಗಸ್ಟ್ 21ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೈಲೂರ್, ಬೀದರ್ ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading