Popular Posts

ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆ ವಿತರಣೆ, ಅಲ್ಬೆಂಡಜೋಲ್ ಮಾತ್ರೆ ನುಂಗಿಸುವ ಮೂಲಕ ಜಂತುಹುಳು ನಾಶ

ಬೀದರ್, ಆಗಸ್ಟ್ 13 (ಕಕ ವಾರ್ತೆ) : ಜಿಲ್ಲೆಯಲ್ಲಿ 1 ವರ್ಷದಿಂದ 19 ವರ್ಷದೊಳಗಿನ 6,12,389 ಮಕ್ಕಳಿದ್ದು, ಅದರಲ್ಲಿ 1 ರಿಂದ 2 ವರ್ಷದ 34,025 ಮಕ್ಕಳಿಗೆ ‘ಅಲ್ಬೆಂಡಜೋಲ್’ ಅರ್ಧ ಮಾತ್ರೆ ಹಾಗೂ 3 ರಿಂದ 19 ವರ್ಷದ 5,78,364 ಮಕ್ಕಳಿಗೆ 1 ಅಲ್ಬೆಂಡಜೋಲ್ ಮಾತ್ರೆ ನೀಡಬೇಕಾಗಿದೆ. ಹೀಗಾಗಿ ಒಟ್ಟು 5,95,377 ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಯ ಅವಶ್ಯಕತೆಯಿದೆ. ಈ ಮಾತ್ರೆಯನ್ನು ಪ್ರತಿಯೊಬ್ಬ ಮಗುವೂ ಚೀಪಿ ನುಂಗುವ ಮೂಲಕ ದೇಹದಲ್ಲಿರುವ ಪೋಷಕಾಂಶಗಳನ್ನು ಹಾನಿಗೊಳಿಸುವ ಜಂತುಹುಳುಗಳನ್ನು ನಾಶಪಡಿಸಬೇಕು ಎಂದು ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ (RCH) ನಿರ್ದೇಶನಾಲಯದ ಉಪನಿರ್ದೇಶಕರು ಹಾಗೂ ಬೀದರ್ ಜಿಲ್ಲಾ ನೋಡಲ್ ಅಧಿಕಾರಿಯಾದ ಡಾ.ಇಂದು ಮತಿ ಪಾಟೀಲ್ ಕರೆ ನೀಡಿದರು.
ಬೀದರ್ ನಗರದ ಹಳೆಯ ನಗರದಲ್ಲಿರುವ (ಓಲ್ಡ್ ಸಿಟಿ) ‘ಅಲ್ ಅಮೀನ್’ ಶಾಲೆಯಲ್ಲಿ ಇತ್ತೀಚೆಗೆ ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೀದರ್ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರ (100 ಹಾಸಿಗೆ ಆಸ್ಪತ್ರೆ) ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ” ಹಾಗೂ ಆಗಸ್ಟ್ 17 ರವರೆಗೆ ನಡೆಯಲಿರುವ “ಮಾಪ್‌ಅಪ್ ದಿನ” ಆಚರಣೆಯ ನಿಮಿತ್ತ ಅಲ್ಬೆಂಡಜೋಲ್ ಮಾತ್ರೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ”ದ ಅಂಗವಾಗಿ “ಜಂತುಹುಳು ರಹಿತ ಮಕ್ಕಳು – ಆರೋಗ್ಯವಂತ ಮಕ್ಕಳು” ಎಂಬ ಘೋಷವಾಕ್ಯದೊಂದಿಗೆ ಆ.17 ರಂದು “ಮಾಪ್‌ಅಪ್ ದಿನ”ದ ನಿಮಿತ್ಯ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆ ನುಂಗಿಸುವ ಮೂಲಕ ಜಂತುಹುಳು ನಾಶಗೊಳಿಸಬೇಕು ಎಂದರು.
ಅಲ್ಬೆಂಡಜೋಲ್ ಮಾತ್ರೆಯನ್ನು ವರ್ಷದಲ್ಲಿ ಎರಡು ಬಾರಿ ಸೇವಿಸುವುದರಿಂದ ದೇಹದಲ್ಲಿರುವ ಜಂತುಹುಳುಗಳನ್ನು ನಿಯಂತ್ರಿಸಿ, ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆಯನ್ನು ತಡೆಯಬಹುದಾಗಿದೆ. ಅಲ್ಲದೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ವೃದ್ಧಿಯಾಗಿ, ಅವರ ಕಲಿಕಾ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಮಾತ್ರೆಯನ್ನು ಸೇವಿಸಬೇಕು. ಈ ಬಗ್ಗೆ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕತೆ ಸಮಿತಿ (VHNSC) ಸಭೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಬೀದರ್ 100 ಹಾಸಿಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಹಮ್ಮದ್ ಸೋಹೇಲ್ ಮಾತನಾಡಿ, ಜಂತುಹುಳು ನಿವಾರಣಾ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಕುರಿತು ವಿವರಿಸಿದರಲ್ಲದೆ, ಜಂತುಹುಳು ಹಾಗೂ ರಕ್ತಹೀನತೆ (ಅನಿಮಿಯಾ) ನಿಯಂತ್ರಿಸಲು ಈ ಮಾತ್ರೆ ಅತ್ಯಂತ ಪ್ರಯೋಜನಕಾರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಧ್ಯಾನ್‌ದೇವ್ ನೀರಗುಡೆ, ಅಲ್-ಅಮೀನ್ ಶಾಲೆಯ ಖಜಾಂಚಿ ಹಾಗೂ ಪ್ರಾಂಶುಪಾಲರು, ಡಾ. ಮಹದೇವಪ್ಪ ಮಳಗೆ (ಜಿಲ್ಲಾ RCH ಅಧಿಕಾರಿ) ಹಾಗೂ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ. ರಾಜಶೇಖರ್ ಪಾಟೀಲ್ (DMO), ಡಾ. ಕಿರಣ್ ಪಾಟೀಲ್ (DLO), ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಸಂಗಾರೆಡ್ಡಿ, ಜಿಲ್ಲಾ IEC ವಿಭಾಗದ BHEO ಗಳಾದ ಚಂದ್ರಶೇಖರ್ ಇಜಾರೆ, ಸಾವಿತ್ರಿ ಮಾಳಗೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಉಮೇಶ್ ಬಿರಾದಾರ್ (DPM), ಶಿವಶಂಕರ ಬೇಮಳಗಿ (ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಕಮ್ CFO), ಲೋಕೇಶ್ (IFV), ಗುರುನಾಥ (VCCM), ವಿನಾಯಕ (HIO), ರವಿ (DDM), ಕಾರ್ಯಕ್ರಮ ಸಹಾಯಕ ದೇವಿದಾಸ, ಸನ್ನಿಪಾಲ್, ಚನ್ನಬಸವ, ಜಿಲ್ಲಾ ಹಾಗೂ ಬೀದರ್ ತಾಲೂಕಿನ ಮತ್ತು 100 ಹಾಸಿಗೆ ಆಸ್ಪತ್ರೆಯ ಸಿಬ್ಬಂದಿಯವರು, ಶಾಲೆಯ ಶಿಕ್ಷಕ/ಶಿಕ್ಷಕಿಯರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಓಂಕಾರ್ ಮಲ್ಲಿಗೆ (BHEO, ಬೀದರ್) ರವರು ಸ್ವಾಗತಿಸಿ, ವಂದಿಸಿದರು.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading