1
1

ಬೀದರ, ಫೆಬ್ರವರಿ.16 :- ಅಪಸ್ಮಾರ ಅಥವಾ ಮೂರ್ಛೆ ರೋಗದ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡುವುದು ಮತ್ತು ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಕಿರಣ ಪಾಟೀಲ ಹೇಳಿದರು.
ಅವರು ಇತ್ತೀಚಿಗೆ ಜಿಲ್ಲಾ ಕುಷ್ಠರೋಗ ಅಧಿಕಾರಿಗಳ ಕಾರ್ಯಾಲಯದಲ್ಲಿ ಕರ್ನಾಟಕ ಮೇದುಳು ಆರೋಗ್ಯ ಉಪಕ್ರಮದಡಿಯಲ್ಲಿ ಅಂತರಾಷ್ಟ್ರೀಯ ಮೂರ್ಛರೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೂರ್ಛರೋಗ ಕುರಿತು ಜನಜಾಗೃತಿ ಮೂಡಿಸುವುದು ಮತ್ತು ಸಮಾಜದಲ್ಲಿರುವ ಕಳಂಕವನ್ನು ದೂರ ಮಾಡಿವುದೇ ಇದರ ಉದ್ದೇಶವಾಗಿದೆ. ಅಪಸ್ಮಾರದ ಬಗ್ಗೆ ಕೆಲವು ಮುಖ್ಯ ಸಂಗತಿಗಳು ಅಪಸ್ಮಾರವು ಕೇವಲ ಒಂದು ಆರೋಗ್ಯ ಸಮಸ್ಯೆಯಲ್ಲಿ ಇದು ಸಾಮಾಜಿಕವಾಗಿಯೂ ರೋಗಿಗಳ ಮೇಲ ಪರಿಣಾಮ ಬೀರುತ್ತದೆ. ವಿಶ್ವದಾದ್ಯಂತ ಸುಮಾರು 50 ಮಿಲಿಯನ್ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಸರಿಯಾದ ಔಷಧೋಪಚಾರ ಮತ್ತು ವೈದ್ಯಕೀಯ ಸಲಹೆಯಿಂದ ಶೇ.70 ರಷ್ಟು ಪ್ರಕರಣಗಳನ್ನು ನಿಯಂತ್ರಿಸಬಹುದು ಮೂಢನಂಬಿಕೆ ಅಪಸ್ಮಾರವು ಯಾವುದೇ ಶಾಪ ಅಥವಾ ದೈವಿಕ ಕೊಪವಲ್ಲ ,ಇದೊಂದು ನರವೈಜ್ಞಾನಿಕ ಕಾಯಿಲೆ ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬ್ಳೆ ಅವರು ಎಲ್ಲಾ ಸಿಬ್ಬಂದಿ ವರ್ಗದವರಿಗೆ ಪ್ರತಿಜ್ಞೆ ಮಾಡಿಸಿದರು.
ಈ ಸಂದರ್ಭದಲ್ಲಿ ಡಾ.ಶಿವಶಂಕರ.ಬಿ.ಆರ್.ಸಿ.ಎಚ್ ಅಧಿಕಾರಿಗಳು ಹಾಗೂ ಡಾ.ರಾಜಶೇರ ಪಾಟೀಲ ಡಿ.ವಿ.ಬಿ.ಡಿ.ಸಿ.ಓ ಅಧಿಕಾರಿಗಳು ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೀರಶೆಟ್ಟಿ ಚನ್ನಶೆಟ್ಟಿ, ರಾಕೇಶ, ನಿಕಿತಾ, ಯೋಗೇಶ, ರಾಜಕುಮಾರ, ಗೋರಖನಾಥ, ಇಮಾನುವೇಲ್, ಬ್ರಮಾರಂಭಾದೇವಿ, ಜ್ಯೋತಿ ಸಂಜು ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.