Popular Posts

ವಿಶ್ವ ರೋಟರಿ ದಿನಾಚರಣೆ ವಿವಿಧ ಸ್ಪರ್ಧೆ: ಹೆಸರು ನೋಂದಾಯಿಸಿ

ಬೀದರ್: ವಿಶ್ವ ರೋಟರಿ ದಿನಾಚರಣೆ ನಿಮಿತ್ತ ರೋಟರಿ ಕ್ಲಬ್ ಬೀದರ್ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಫೆ. 18 ರಂದು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10ಕ್ಕೆ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬೀದರ್ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಚಿತ್ರಕಲೆ ರಚನೆ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಬಿಡಿಸುವ ಸ್ಪರ್ಧೆ, ಮಧ್ಯಾಹ್ನ 12ಕ್ಕೆ ಕಾಲೇಜು ವಿದ್ಯಾರ್ಥಿಗಳಿಗೆ ದುಶ್ಚಟಗಳ ನಿರ್ಮೂಲನೆಯಲ್ಲಿ ಯುವಕರ ಪಾತ್ರ / ಬೀದರ್ ಜಿಲ್ಲಾ ಅಭಿವೃದ್ಧಿಯಲ್ಲಿ ರೋಟರಿ ಸಂಸ್ಥೆ ಪಾತ್ರ ಕುರಿತು ಭಾಷಣ ಸ್ಪರ್ಧೆ, ಸಂಜೆ 6ಕ್ಕೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಆಸಕ್ತ ವಿದ್ಯಾರ್ಥಿಗಳು ಫೆಬ್ರುವರಿ 17 ರ ಸಂಜೆ 5 ರ ಒಳಗೆ ಹೆಸರು ನೊಂದಾಯಿಸಬಹುದು ಎಂದು ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ ಹಾಗೂ ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಬಸವರಾಜ ಪಾಟೀಲ ತಿಳಿಸಿದ್ದಾರೆ.
ಚಿತ್ರಕಲಾ ಸ್ಪರ್ಧೆಗೆ ಯೋಗೇಶ ಮಠದ (ಮೊ: 9242268227), ಸಂಗಮೇಶ ಗಾದಗಿ (9945449736), ಸುಧಾಕರ್ ಔರಾದಕರ್ (9448528092), ಭಾಷಣ ಸ್ಪರ್ಧೆಗೆ ಸಂತೋಷ ಮಂಗಳೂರೆ (9916900360), ಬಸವಕುಮಾರ ಪಾಟೀಲ (9900292989), ಸುರೇಶ್ ಪಾಟೀಲ (9448109547), ರಂಗೋಲಿ ಸ್ಪರ್ಧೆಗೆ ಅನಿಲಕುಮಾರ ಬಿರಾದಾರ (9008753126, ಮಂಜುಳಾ ಮೂಲಗೆ (7019485056), ಮಹೇಶ್ವರಿ ಪಾಂಚಾಳ (9663689666), ಸಮೂಹ ನೃತ್ಯ ಸ್ಪರ್ಧೆಗೆ ದೇವಿದಾಸ ಜೋಶಿ (9986138457), ಚಂದ್ರಕಾಂತ ಕಾಡಾದಿ (9448114647) ಅಥವಾ ಅನಿಲಕುಮಾರ ಮಸೂದಿ (7019699671) ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading