Popular Posts

ವ್ಯಸನಮುಕ್ತ ಭಾರತ ಅಭಿಯಾನ ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ ಹೆಜ್ಜೆ – ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಬೀದರ್:ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ವತಿಯಿಂದ 90ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ವ್ಯಸನಮುಕ್ತ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬ್ರಹ್ಮಾಕುಮಾರಿಸ್ ಹಾಗೂ ಕೇಂದ್ರ ಸರ್ಕಾರದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ವ್ಯಸನಮುಕ್ತ ಭಾರತ ಅಭಿಯಾನ ದೇಶದ ಭವಿಷ್ಯಕ್ಕಾಗಿ ಅತ್ಯಂತ ಮಹತ್ವದ ಹೆಜ್ಜೆ ಎಂದು ಶ್ಲಾಘಿಸಿದರು. ಪ್ರತಿಯೊಬ್ಬ ಭಾರತೀಯನು ಆರೋಗ್ಯವಂತನಾಗಬೇಕು, ಭಾರತ ಶಕ್ತಿಶಾಲಿ ಹಾಗೂ ಸ್ವಾವಲಂಬಿ ರಾಷ್ಟ್ರವಾಗಿ ಬೆಳೆಯಬೇಕು ಮತ್ತು ಜಗತ್ತಿಗೆ ಮಾರ್ಗದರ್ಶಿಯಾಗುವ ವಿಶ್ವಗುರು ಭಾರತವನ್ನು ರೂಪಿಸಬೇಕು. ಎಲ್ಲರೂ ಒಟ್ಟಾಗಿ ಶ್ರಮಿಸಿದರೆ 2047ರ ವೇಳೆಗೆ ಭಾರತವನ್ನು ನಿಜವಾದ ಸೂಪರ್ ಪವರ್ ಆಗಿ ರೂಪಿಸುವುದು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನವದೆಹಲಿಯ ರಾಷ್ಟ್ರೀಯ ಪ್ರೇರಣಾದಾಯಕ ಪ್ರವಚನಕಾರರಾದ ರಾಜಯೋಗಿ ಬಿ.ಕೆ. ಪಿಯೂಷ್ ಭಾಯಿಜಿ ಮಾತನಾಡಿ, ಸಮಾಜವನ್ನು ನಶಾಮುಕ್ತಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
“ನಾರಿ ಲಕ್ಷ್ಮಿಯಾಗಬೇಕು, ನರ ನಾರಾಯಣನಾಗಬೇಕು. ನಶೆ ತ್ಯಾಗದ ಮೂಲಕ ದುರ್ವ್ಯಸನಗಳಿಂದ ಮುಕ್ತರಾಗಿ ಶಾಂತ, ಸುಖಿ ಜೀವನ ನಡೆಸಬೇಕು” ಎಂದು ಅವರು ಕರೆ ನೀಡಿದರು.

ಕೇಂದ್ರದ ಸಂಚಾಲಕರಾದ ಬಿ.ಕೆ. ಪ್ರತಿಮಾ ಬಹೆನಜಿ ಮಾತನಾಡಿ, ಸರ್ಕಾರ ಹಾಗೂ ವಿವಿಧ ರೋಟರಿ ಕ್ಲಬ್‌ಗಳ ಸಹಕಾರದಿಂದ ಜಾಗೃತಿ ಬಸ್‌ಗಳ ಮೂಲಕ ಅಭಿಯಾನದ ಸಂದೇಶವನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಈ ಅಭಿಯಾನದಿಂದ ಅನೇಕ ಕುಟುಂಬಗಳ ಜೀವನದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸುಖ ಪುನಃ ಸ್ಥಾಪನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಗುರಮ್ಮ ಸಿದ್ಧಾರೆಡ್ಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಇದಲ್ಲದೆ ಬಿ.ಕೆ. ಮಂದಾಕಿನಿ ಬಹೆನಜಿ, ಬಿ.ಕೆ. ಸುಮನ್ ಬಹೆನಜಿ,ಬಿ.ಕೆ ರಾಧಾ ಬಹೆನಜಿ, ಬಿ.ಕೆ. ಪಾರ್ವತಿ ಬಹೆನಜಿ ಸೇರಿದಂತೆ ವಿವಿಧ ಕೇಂದ್ರಗಳ ಸಂಚಾಲಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ವ್ಯಸನಮುಕ್ತ ಭಾರತ ಸಂದೇಶ ಸಾರುವ ವಿಶೇಷ ವಾಹನದಲ್ಲಿ ಅಳವಡಿಸಿದ ದೊಡ್ಡ ಎಲ್‌ಇಡಿ ಸ್ಕ್ರೀನ್ ಹಾಗೂ ಕುಂಭಕರ್ಣನ ಮೂರ್ತಿ ಎದ್ದು ಜಾಗೃತಿ ಸಂದೇಶ ನೀಡುವ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆದಿತು.

ಮಧ್ಯಾಹ್ನ 2 ಗಂಟೆಗೆ ಜನವಾಡ ರಸ್ತೆಯ ಜೆ.ಪಿ. ನಗರದಲ್ಲಿನ ಬ್ರಹ್ಮಾಕುಮಾರಿಸ್ ಕೇಂದ್ರ ಪಾವನಧಾಮದಿಂದ 12 ಕಾರುಗಳ ಮೇಲೆ 12 ಜ್ಯೋತಿರ್ಲಿಂಗಗಳ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ನೆಹರು ಕ್ರೀಡಾಂಗಣದ ಎದುರಿನ ಸಾಯಿ ಸ್ಕೂಲ್ ಆವರಣಕ್ಕೆ ತಲುಪಿತು.ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ. ಗುರುದೇವಿ ಬಹೆನಜಿ ಪ್ರಾಸ್ತಾವಿಕ ಭಾಷಣ ಮಾಡಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading