Popular Posts

ಉದ್ಯಾನವನ ನಿರ್ಮಿಸಲು ಸುನೀಲ ಕುಲಕರ್ಣಿ ಮನವಿ

ಬೀದರ : ಬೀದರ ನಗರದ ಹಳ್ಳದಕೇರಿ ಗ್ರಾಮದ ಭೂಮಿ ಸರ್ವೆ ನಂ೫೧(ಪಿ)ಡಿಫೆನ್ಸ ಸಿವಿಲಿಯೆನ್ ಏಂಪ್ಲಾಯಿ ಹೌಸಿಂಗ ಕಾರ್ಪೋರೇಟಿವ ಸೊಸೈಟಿ ಲೇಔಟ್ ಹಳ್ಳದಕೇರಿ ಯಲ್ಲಿ ಅನೇಕ ಕುಟುಂಬಗಳು ವಾಸಿಸುತ್ತಿದ್ದು ಇಲ್ಲೀ ಗಾರ್ಡನ್ ಜಾಗ ಇದ್ದು ಯಾವುದೇ ಮೂಲ ಸೌಕರ್ಯ ಇಲ್ಲದೇ ಕಾಲೋನಿ ಮಕ್ಕಳಿಗೆ ಹಾಗೂ ಹಿರಿಯರಿಗೆ ತುಂಬಾ ತೊಂದರೆ ಯಾಗುತ್ತಿದ್ದು ಗಾರ್ಡನ ಜಾಗವನ್ನು ಬಹುತೇಕರು ಕಬ್ಜಾ ಮಾಡಿ ಗಾರ್ಡನ ಜಾಗದಲ್ಲಿ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಇದರಿಂದ ಅಲ್ಲಿನ ನಾಗರಿಕರಿಗೆ ತೊಂದರೆ ಯಾಗುತ್ತಿದ್ದು ಬೇಗನೆ ಇಲ್ಲಿ ಗಾರ್ಡನ ನಿರ್ಮಿಸಿ ಕಾಲೋನಿಯವರಿಗೆ ವಾಯು ವಿಹಾರಕ್ಕೆ ಅನುಕೂಲ ಮಾಡಿ ಕೊಡಬೆಕೆಂದು ಒತ್ತಾಯಿಸಿ ಕಾಲೋನಿ ನಿವಾಸಿಗಳು ಮಂಗಳವಾರದAದು (ಫೆ.೧೦) ಜಿಲ್ಲಾಧಿಕಾರಿಗಳಿಗೆ ಹಾಗೂ ಮಾನ್ಯ ಆಯುಕ್ತರು ಮಹಾ ನಗರ ಪಾಲಿಕೆ ಬೀದರ ಅವರಿಗೆ ಮನವಿಯನ್ನು ಸಲ್ಲಿಸಿದರು. ಮನವಿಯಲ್ಲಿ ಈ ಮೊದಲು ಕೂಡಾ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಕಾಲೋನಿಯಲ್ಲಿ ಗಾರ್ಡನ ನಿರ್ಮಿಸಿ ಅನುಕೂಲ ಮಾಡಿ ಕೊಡಬೇಕು ಹಾಗೂ ಗಾರ್ಡ ನ ಜಗದಲ್ಲಿ ಕಟ್ಟಡ ನಿರ್ಮಿಸಿದವರ ಮೇಲೆ ಕ್ರಮ ಕೈಕೊಂಡು ಗಾರ್ಡನ ಜಾಗ ರPಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು. ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಆಯುಕ್ರರು ಬರವಸೆ ನೀಡಿದರು. ಮನವಿ ಪತ್ರದಲ್ಲಿ ಕಾಲೋನಿಯ ಅಶೊಕ ಕುಮಾರ,ಜಹೀರೊದ್ದಿನ, ಸುನೀಲ ಕುಲಕರ್ಣಿ, ನರೇಂದ್ರ,ಹುಸೇನ ಪಟೇಲ, ಮೊಹಮದ್ ಯಾಸೀನ ಗನಿ ಸಾಬ.ಕಾಸಿನಾಥ ಸೇರಿದಂತೆ ಅನೇಕರು ಮನವಿ ಪತ್ರದಲ್ಲಿ ಸಹಿ ಮಾಡಿ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!